ಸಂತೆಕೆಲ್ಲೂರ ಸೇರಿ ಮೂವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ

0
34

ಕಲಬುರಗಿ: ಉತ್ತರಾದಿ ಮಠದ ದಾಸ ಸಾಹಿತ್ಯ ಪ್ರಚಾರ ಮಾಧ್ಯಮವಾದ ಶ್ರೀನಿವಾಸ ಉತ್ಸವ ಬಳಗದಿಂದ ಕೊಡುಮಾಡುವ ಹರಿದಾಸ ಅನುಗ್ರ ರಾಜ್ಯಮಟ್ಟದ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಹಿರಿಯ ಉಪನ್ಯಾಸ ವ್ಯಾಸರಾಜ ಸಂತೆಕೆಲ್ಲೂರ, ವಿಜಯವಾಣಿಯ ವರದಿಗಾರ ಶಾಮಸುಂದರ ಕುಲಕರ್ಣಿ, ಸಂಯುಕ್ತ ಕರ್ನಾಟಕ ವರದಿಗಾರ ಶೇಷಗಿರಿ ಹುಣಸಗಿ ಭಾಜನರಾಗಿದ್ದಾರೆ ಎಂದು ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ಟಿ.ವಾದಿರಾಜ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಎನ್. ಆರ್. ಕಾಲನಿ ಉತ್ತರಾದಿ ಮಠದಲ್ಲಿ ೧೧ರಂದು ಬೆಳಗ್ಗೆ ೧೦ಕ್ಕೆ ದಾಸ ಶ್ರೇಷ್ಠ, ಸಂಗೀತ ಪಿತಾಮಹ ಶ್ರೀಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉತ್ತರಾದಿ ಮಠದ ಕರ್ಯನಿರ್ವಹಣಾಧಿಕಾರಿ ಪಂ.ವಿದ್ಯಾಧೀಶಾಚಾರ್ಯ ಗುತ್ತಲ ಅವರು ಪ್ರಶಸ್ತಿ ಪ್ರದಾನ ಮಾಡುವರು. ಕೋಣನಕುಂಟೆಯ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಧರ್ಮದರ್ಶಿಡಾ.ಕೆಎಸ್ ಸಮೀರಸಿಂಹ, ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್.ವಿ. ಪ್ರಸಾದ ಉಪಸ್ಥಿತರಿರುವರು, ಕಲ್ಬುರ್ಗಿ ಪಾಂಡುರಂಗರಾವ ಕಂಪ್ಲಿ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಬೆಂಗಳೂರಿನ ಸುಸ್ವರಾಲಯ ಕಾಲೇಜ್ ಆಫ್ ಮ್ಯೂಜಿಕ, ಕಾಂಚನ ಲಕ್ಷ್ಮೀ ನಾರಾಯಣ ಮ್ಯೂಜಿಕ್ ಅಕಾಡೆಮಿ ಟ್ರಸ್ಟ್ ಹಾಗೂ ಕಲ್ಬುರ್ಗಿಯ ದಾಸ ಸೌರಭ ದಿಂದ ಪುರಂದರ ದಾಸರ ಆರಾಧನೆ ನಿಮಿತ್ತ ಅಂದು ಬೆಳಗ್ಗೆ ೮.೩೦ಕ್ಕೆ ಪುರಂದರ ದಾಸರ ಉತ್ಸವ ಮೂರ್ತಿಗೆ ಅಭಿಷೇಕ, ವಿದ್ವಾನ್ ಎಸ್.ಶಂಕರ ಮತ್ತು ಶಿಷ್ಯ ವೃಂದದಿಂದ ಶ್ರೀ ಪುರಂದರ ದಾಸರ ನವರತ್ನಮಾಲಿಕೆ ಕೃತಿಗಳ ಗೋಷ್ಠಿ ಗಾಯನ ಕಾರ್ಯಕ್ರದೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಸಂಜೆ ೪ಕ್ಕೆ ಗುರುಗುಹ ಸಂಗೀತ ಮಹಾವಿದ್ಯಾಲಯ, ಅನುಗ್ರ ಸಂಗೀತ ಮಹಾವಿದ್ಯಾಲಯದಿಂದ ನವರತ್ನಮಾಲಿಕೆ ಕೃತಿಗಳ ಗೋಷ್ಠಿ ಗಾಯನ. ೫.೪೫ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು ಪಂ. ವಿದ್ಯಾದೀಶಾಚಾರ್ಯ ಗುತ್ತಲ ಉಪಸ್ಥಿತಿಯಲ್ಲಿ ವಿದ್ವಾನ್ ಆರ್.ಕೆ. ಪದ್ಮನಾಭ ಅವರಿಂದ ಗಾಯನ. ದಾಸ ಸಾಹಿತ್ಯ ಸಂಶೋಧಕ ಡಾ. ಅನಂತ ಪದ್ಮನಾಭರಾವ್, ಐಎಎಸ್ ಅಧಿಕಾರಿ ಮುದ್ದು ಮೋಹನ ವಿಶೇಷ ಆಹ್ವಾನಿತರಾಗಿ ಪಾಲದ್ಗೊಳ್ಳುವರು. ಬೆಂಗಳೂರಿನ ಜಾಹ್ನವಿ ಭಜನಾ ಮಂಡಳಿಯ ರೇಖಾ ಪದಕಿ, ಬಾಗಲಕೋಟೆಯ ಅನಂತ ಕುಲಕರ್ಣಿ, ಹರಿದಾಸ ಸಂಪದ ಟ್ರಸ್ಟ್‌ನ ಸಂಸ್ಥಾಪಕ ಮಧುಸೂದ ಎಂ.ವಿ. ಅವರಿಗೆ ದಾಸಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here