ಕಲಬುರಗಿ: ನಗರದ ಐ ವನ್ ಶಾಹಿ ಪ್ರದೇಶದ ಮದೀನಾ ಕಾಂಪ್ಲೆಷ್ ನಲ್ಲಿ 7 ಮೊಬೈಲ್ ಕಳ್ಳತನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ 3 ಮೊಬೈಲ್ ಫೋನ್ ಗಳು ಜಪ್ತಿ ಮಾಡಿಕೊಳ್ಳುವಲ್ಲಿ ಸ್ಟೇಷನ್ ಬಜಾರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಭಾರತ ನಗರ ತಾಂಡ ನಿವಾಸಿ ಪ್ರವೀಣ ತಾರಾಸಿಂಗ್ (21) ಬಂಧಿತ ಆರೋಪಿ, ಇಂದು ರಾಮ ಮಂದಿರ ಹತ್ತಿರ ಕಡಿಮೆ ಬೆಲೆಯಲ್ಲಿ ಮೊಬೈಲ್ ಫೋನುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದರಾಮೇಶ್ವರ್ ಗಡೇದ್ ನೇತೃತ್ವದ ತಂಡ ಸಿಬ್ಬಂದಿಗಳಾದ ಎಎಸ್ಐ ಶಶೀಕುಮಾರ್, ನಜಮೊದ್ದೀನ್, ದೇವೆಂದ್ರ, ಜೈಭೀಮ್, ಮಲ್ಲಿಕಾರ್ಜುನ್ ಫೇರೊಜ್, ಮಲ್ಲಣ್ಣ, ಶಿವಾನಂದ್, ಬೊಗೇಶ್, ಹಾಗೂ ಮೊಹಶಿನ್ ಅವರು ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ವಿವೋ, ಒಪ್ಪೋ ಹಾಗೂ ಮೋಟೋ ಕಂಪೆನಿಯ 24 ಸಾವಿರ ಮೌಲ್ಯದ ಮೊಬೈಲ್ ಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.