ಕಲಬುರಗಿ: ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ಬೆನ್ನಲ್ಲೇ ತೆರಿಗೆ ಸಂಗ್ರಹದ ಉದ್ದೇಶದಿಂದಾಗಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ್ದು ಜನ ಸಾಮನ್ಯರಿಗೆ ಹೊರೆಯಾಗಿದೆ ಎಂದು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ಜಗದೇವ ಎಸ್ ಕುಂಬಾರ ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಮೇಲೆ 2.50 ರೂ ಹಾಗೂ ಡೀಸೆಲ್ ಮೇಲೆ ಬರೋಬ್ಬರಿ 4 ರೂಪಾಯಿಯನ್ನು ಏರಿಸಿದೆ ಈ ಮೂಲಕ ಮಧ್ಯಮ ವರ್ಗದ ಜನರ ಉಳಿತಾಯಕ್ಕೆ ಸರ್ಕಾರ ಭಾರಿ ಹೊಡೆತ ನೀಡಿದೆ. ಕಳೆದ ಕೆಲ ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿನಿತ್ಯ ಏರಿಕೆಯಾಗುತ್ತಲೇ ಇದೆ. ಆದರೆ, ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಿದ್ದ ಕಾರಣ ಜನ ಸಾಮಾನ್ಯರು ಅಸಮಾಧಾನವಿದ್ದರೂ ತೋರಿಸಿಕೊಂಡಿರಲಿಲ್ಲ ಎಂದರು.
ಈ ಬಜೆಟ್ನಲ್ಲಿ ಏಕಾಏಕಿ ರೂಪಾಯಿ ಲೆಕ್ಕದಲ್ಲಿ ತೈಲ ಬೆಲೆಯನ್ನು ಏರಿಕೆ ಮಾಡಲಾಗಿದೆ. ಈ ಮೂಲಕ ದೇಶದಾದ್ಯಂತ ತೈಲದ ಬೆಲೆ 1 ಲೀಟರ್ಗೆ 92 ರೂ ಗಿಂತ ಅಧಿಕವಾಗಿದೆ. ಇನ್ನೂ ದೆಹಲಿ ಮುಂಬೈನಲ್ಲಿ ಈ ಬೆಲೆ ಮತ್ತಷ್ಟು ಅಧಿಕವಾಗಲಿದೆ. ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿ ಜನಸಾಮಾನ್ಯರ ಹಿತದೃಷ್ಟಿ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.