ಬಿಜೆಪಿಯಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ: ಮಾಜಿ ಶಾಸಕ ವಾಲ್ಮೀಕ ನಾಯಕ

0
137

ಕಲಬುರಗಿ: ಬಿಜೆಪಿಯಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ ದುಡ್ಡಿದವರಿಗೆ ಮಾತ್ರ ಪಕ್ಷದಲ್ಲಿ ಒಳ್ಳೆಯ ಸ್ಥಾನ ಮನ ಸಿಗೊತ್ತೆವ ಎಂದು ಚಿತ್ತಾಪುರ ಮಾಜಿ ಶಾಸಕ ವಾಲ್ಮೀಕ ನಾಯಕ ಕಣ್ಣಿರಿಟ್ಟಿದ್ದಾರೆ.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಮಾರು 33 ವರ್ಷಗಳ ಕಾಲ ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಹಳ್ಳಿ ಹಳ್ಳಿ ಸುತ್ತಿ ಪಕ್ಷ ಸಂಘಟನೆಗೆ ಶ್ರಮಿಸಿರುವ ರಾಜಕೀಯದಲ್ಲಿ ನನಗೆ ಗಾಡ್ ಫಾದರ್ ಇಲ್ಲ ಅದರಿಂದಾಗಿ ನನಗೆ ಸೂಕ್ತ ಸ್ಥಾನಮಾನ ನೀಡದೆ ಕಡೆಗಣಿಸಲಾಗಿತ್ತಿದೆ ಅಳಲು ತೋಡಿಕೊಂಡಿದ್ದಾರೆ.

Contact Your\'s Advertisement; 9902492681

ಪಕ್ಷಕ್ಕಾಗಿ ಜೈಲಿಗೂ ಹೋಗಿರುವೇ: ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ ಬಿಎಸ್ ಯಡಿಯಡಿಯೂರಪ್ಪನವರೇ ನನಗೆ ನಾಯಕರು. ಪಕ್ಷದ ಆದೇಶದ ಮೇರೆಗೆ ರೈಲು ರೋಖೋ ಚಳುವಳಿ ರಸ್ತೆ ತಡೆ ಸೇರಿದಂತೆ ಹಲವಾರು ಹೋರಾಟ ಮಾಡಿದ್ದೇನೆ. ಪಕ್ಷಕ್ಕಾಗಿ ಲಾಟಿ ಏಟು ತಿಂದಿದ್ದೇನೆ. ಜೈಲಿಗೂ ಹೇಗಿದ್ದೇನೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಮಗನ ವಿರುದ್ಧ ಉಪ ಚುನಾವಣೆಯಲ್ಲಿ ಗೆಲುವು. 2009 ಲೋಕಸಭಾ ಚುನಾವಣೆ ಖರ್ಗೆ ಗುಲ್ಬರ್ಗಾ ದಿಂದ ಸ್ಪರ್ದಿಸಿದರು. ಆಗ ಉಪ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರೀಯಾಂಕ್ ಖರ್ಗೆ ಉಪ ಚುನಾವಣೆಯಲ್ಲಿ 1600 ಮತಗಳಿಂದ ವಿಧಾನಸಭೆಯಲ್ಲಿ ಜಯಗಳಿಸಿದೆ‌. ನಂತರ  ಐದು ಚುನಾವಣೆಯಲ್ಲಿ ಸ್ಪರ್ಧಿಸಿ ಸೊತಿರುವೇ ಸೋತಾಗಲೂ ಸುಮ್ಮನೆ ಕುಳಿತಿಲ್ಲ ಪಕ್ಷ ಸಂಘಟನೆಗೆ ಶ್ರಮಿಸಿರುವೇ. ನಾನು ಹುಟ್ಟಿನಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬಿಜೆಪಿ ನನ್ನ ಮಾತೃ ಪಕ್ಷ  ಈ ಬಾರಿ ನಾಲ್ಕೂವರೆ ಸಾವಿರ ಮತಗಳಿಂದ ಸೋತರೂ, ಲೋಕಸಭಾ ಚುನಾವಣೆಯಲ್ಲಿ ಐದುವರೆ ಸಾವಿರ ಮತಗಳ ಲೀಡ ಕೊಟ್ಟಿದ್ದೇನೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಆದರೆ, ಮೂರು ದಶಕದ ನನ್ನ ಸೇವೆಗೆ ಸರಿಯಾದ ಸ್ಥಾನ ಮಾನ ನೀಡಿದೆ ನಿರ್ಲಕ್ಷಿಸಲಾಗಿದೆ  ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷ ತೊರೆಯುವುದಿಲ್ಲ: ನಿಮ್ಮ ಬಿಜೆಪಿ ನಾಯಕರು ನನ್ನ ಮೂರು ದಶಕದ ಸೇವೆಯನ್ನು ಯಾಕೆ ಪರಿಗಣಿಸುತ್ತಿಲ್ಲ ಎಂಬ ದುಃಖ ನನ್ನನ್ನ ಕಾಡುತ್ತಿದೆ. ಆದರೂ ಯಾವುದೇ ಕಾರಣಕ್ಕೂ ಪಕ್ಷ ತೊರೆದಿಲ್ಲ ನನ್ನ ರಾಜ್ಯ ಹಾಗೂ ಕೇಂದ್ರ ನಾಯಕರು ಇಂದಲ್ಲ ನಾಳೆ ನನ್ನ ಸೇವೆಯನ್ನು ಪರಿಗಣಿಸಿ ಪಕ್ಷದಲ್ಲಿ ನೀಡುತ್ತಾರೆ ಭರವಸೆ ಇದೆ. ಸ್ಥಾನಮಾನ ಕೊಡಲಿ ಕೊಡದೆ ಇರಲಿ ಯಾವುದೇ ಕಾರಣಕ್ಕೂ ಪಕ್ಷದವರಿಗೆ ತೊರೆಯುವುದಿಲ್ಲ ಕೊನೆಯುಸಿರಿರುವವರೆಗೂ ಬಿಜೆಪಿಯಲ್ಲೇ ಇದ್ದು ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಎಂದು ವಾಲ್ಮೀಕ ನಾಯಕ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here