ರಾಷ್ಟ್ರ ಸೇವೆ ಉದ್ದೇಶವೇ ಮುಖ್ಯವಾಗಿರಬೇಕು: ವೆಂಕಟ್ ರಾಜ್

0
25

ಕಲಬುರಗಿ: ಇಂದಿಲ್ಲಿ ತರಬೇತಿ ಪಡೆದು ಸಾರ್ವಜನಿಕರ ಸೇವೆಗೆ ಅಣಿಯಾಗಿರುವ ಪ್ರಶಿಕ್ಷಣಾರ್ಥಿಗಳು ರಾಷ್ಟ್ರ ಸೇವೆ ಉದ್ದೇಶವೆ ಮುಖ್ಯವಾಗಿರಬೇಕು ಎಂದು ಹೆಚ್ಚುವರಿ ಅಬಕಾರಿ ಆಯುಕ್ತ (ಕೇಂದ್ರ ಮತ್ತು ತಪಾಸಣೆ) ವೆಂಕಟ್ ರಾಜ್ ಹೇಳಿದರು.

ಸೋಮವಾರ ನಗರದ ಹೊರವಲಯದ ನಾಗನಹಳ್ಳಿಯಲ್ಲಿರುವ ಪೆÇಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ನಡೆದ 3ನೇ ತಂಡದ ಅಬಕಾರಿ ಉಪ ನಿರೀಕ್ಷಕರ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾವು ಸರ್ಕಾರದ ಪ್ರತಿನಿಧಿಗಳಾಗಿ ಸಾರ್ವಜನಿಕರ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂದರು.

Contact Your\'s Advertisement; 9902492681

ಪೆÇಲೀಸ್ ಸಮವಸ್ತ್ರ ಧರಿಸಿದರೆ ಹೆಮ್ಮೆಯ ಭಾವನೆ ಮೂಡುತ್ತದೆ, ಗುರುತು ಲಭಿಸುತ್ತದೆ ಹಾಗೂ ಜೀವನೋದ್ದೇಶ ಏನೆಂದು ಅರ್ಥವಾಗುತ್ತದೆ ಎಂದು ಖಾಕಿ ಬಟ್ಟೆ ಬಗ್ಗೆ ವಿವರಿಸಿದರು.

118 ಪ್ರಶಿಕ್ಷಣಾರ್ಥಿಗಳ ಪೈಕಿ 41 ಮಹಿಳಾ ಅಧಿಕಾರಿಗಳು ಹಾಗೂ 77 ಪುರುಷ ಅಧಿಕಾರಿಗಳು ಇಂದಿಲ್ಲಿ ತರಬೇತಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅಣಿಯಾಗಿದ್ದು, ಇದರಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ಹೆಚ್ಚಿರುವುದು ನನಗೆ ಸಂತಸ ತಂದಿದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಾಗನಹಳ್ಳಿ ಪಿ.ಟಿ.ಸಿ. ಪ್ರಾಂಶುಪಾಲ ಮತ್ತು ಪೆÇಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಸಂಸ್ಥೆಯ ವರದಿ ವಾಚನ ಮಾಡುತ್ತಾ, 2003ರಲ್ಲಿ ಆರಂಭವಾದ ತರಬೇತಿ ಕೇಂದ್ರವು ಇದುವರೆಗೆ ಪಿ.ಎಸ್.ಐ., ಆರ್.ಎಸ್.ಐ ಮತ್ತು ಅಬಕಾರಿ ಉಪ ನಿರೀಕ್ಷಕರು ಸೇರಿ ಒಟ್ಟು 1699 ಹಾಗೂ ಸಿ.ಪಿ.ಸಿ., ಎ.ಪಿ.ಸಿ., ಕೆ.ಎಸ್.ಐ.ಎಸ್.ಎಫ್. ಹಾಗೂ ಅಬಕಾರಿ ರಕ್ಷಕರು ಸೇರಿದಂತೆ ಒಟ್ಟು 4796 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿದೆ. ಪ್ರಸ್ತುತ 3ನೇ ತಂಡದ ಅಬಕಾರಿ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನಕ್ಕೆ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಪರೇಡ್ ಕಮಾಂಡರನ್ನಾಗಿ ನೇಮಿಸಿದ್ದು ಹೆಮ್ಮೆಯ ಸಂಗತಿ ಯಾಗಿದೆ ಎಂದರು.

ಬಹುಮಾನ ವಿತರಣೆ: ತರಬೇತಿ ಸಮಯದಲ್ಲಿ ಏರ್ಪಡಿಸಿದ ಒಳಾಂಗಣ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕು. ಜೋಸ್ಲಿನ್ ಫರ್ನಾಂಡಿಸ್, ಹೊರಾಂಗಣ ವಿಭಾಗದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದ ಪುμÁ್ಪ ಸದಾಶಿವ ಗದಾಡಿ, 9 ಎಂ.ಎಂ ಪಿಸ್ತೂಲ್ ಶೂಟಿಂಗ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ ದಿಲೀಪ್ ಸಿಂಗ್ ಠಾಕೂರ್, ಪಾಯಿಂಟ್ 303 ರೈಫಲ್ ಶೂಟಿಂಗ್‍ನಲ್ಲಿ ಪ್ರಥಮ ಸ್ಥಾನ ಪಡೆದ ಕಿರಣ್ ಜುಲ್ಫಿ ಹಾಗೂ ಒಟ್ಟಾರೆ ಆಲ್ ರೌಂಡರ್ ಬೆಸ್ಟ್ ಸ್ಥಾನ ಗಳಿಸಿದ ಮ್ಯಾಥ್ಯುವ್ ಪ್ರನ್ಸ್ಟನ್ ಕಾರ್ಲೊ ಅವರಿಗೆ ಅತಿಥಿ ಗಣ್ಯರು ಬಹುಮಾನ ನೀಡಿ ಗೌರವಿಸಿದರು.

ನಿರ್ಗಮನ ಪಥಸಂಚಲನದ ಪರೇಡ್‍ನ ಪ್ರಧಾನ ದಂಡ ನಾಯಕಿಯಾಗಿ ಅಬಕಾರಿ ಉಪ ನಿರೀಕ್ಷಕಿ ಪುμÁ್ಪ ಸದಾಶಿವ ಗದಾಡಿ ಹಾಗೂ ದ್ವಿತೀಯ ದಂಡ ನಾಯಕನಾಗಿ ಅಬಕಾರಿ ಉಪ ನಿರೀಕ್ಷಕ ನಾಗರಾಜ ಎನ್. ಮುಂದಾಳತ್ವ ವಹಿಸಿದರು. ಅನಿಲ ಜೋಗದಂಡೆ, ಗಂಗಾಧರ ಅಂತರಶೆಟ್ಟಿ, ಬಸವರಾಜ .ಸಿ. ಗುಗ್ಗರಿ ಹಾಗೂ ದಿನೇಶ್ ಕೆ. ಅವರು ತಮ್ಮ ತುಕಡಿಗಳನ್ನು ಮುನ್ನಡೆಸಿದರು.

ಕಾರ್ಯಕ್ರಮದಲ್ಲಿ ಎನ್.ಈ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮರಾವ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್, ಕಲಬುರಗಿ ನಗರದ ಡಿ.ಸಿ.ಪಿ. ಕಿಶೋರಬಾಬು, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಕಪ್ಪ ಹಾಗೂ ಪೆÇಲೀಸ್ ಇಲಾಖೆಯ ಇನ್ನಿತರ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲ ಹಾಗೂ ಕಲಬುರಗಿಯ ಎಸ್.ಪಿ (ಐ.ಎಸ್.ಡಿ) ಅರುಣ ರಂಗರಾಜನ್ ಸ್ವಾಗತ ಕೋರಿದರು. ಡಿ.ವೈ.ಎಸ್.ಪಿ ಶಿವಾನಂದ ಪವಾಡಶೆಟ್ಟಿ ವಂದಿಸಿದರು. ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here