ಸುರಪುರ: ನಗರದ ಸುರಪುರ ತಾಲೂಕು ಸಗರನಾಡು ಎಲೆಕ್ಟ್ರೀಕಲ್ ಕಾರ್ಮಿಕರ ಸಂಘದ ವತಿಯಿಂದ ೧೮೭೭ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸವಿನೆನಪಿಗಾಗಿ ಸುರಪುರ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ವಿಜಯೋತ್ಸವ ಆಚರಣೆ ಅಂಗವಾಗಿ ಸಂಘದ ಅನೇಕ ಮುಖಂಡರು ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿನ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಮೂರ್ತಿಗೆ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗಿ ನಂತರ ಸುರಪುರ ನಗರದ ದರಬಾರ ವರೆಗೆ ಬೈಕ್ ರ‍್ಯಾಲಿಯನ್ನು ನಡೆಸಿದರು.
ದರಬಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಅವರನ್ನು ಸನ್ಮಾನಿಸಿ ವಿಜಯೋತ್ಸವದ ಶುಭವನ್ನು ಕೋರಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ರಾಜಾ ಕೃಷ್ಣಪ್ಪ ನಾಯಕ ಅವರು,ಭಾರತದ ಸ್ವಾತಂತ್ರ್ಯದಲ್ಲಿ ಸುರಪುರ ಸಂಸ್ಥಾನದ ಅರಸರ ಕೊಡುಗೆ ದೊಡ್ಡದಿದೆ,ಕ್ಯಾಪ್ಟನ್ ನ್ಯೂಬೆರಿಯನ್ನು ಯುದ್ಧದಲ್ಲಿ ಸೋಲಿಸುವ ಜೊತೆಗೆ ಆತನ ರುಂಡ ಮುಂಡವನ್ನು ತೋರಣ ಮಾಡಿ ಯುದ್ಧದಲ್ಲಿ ವಿಜಯಿಗಳಾದ ಕೀರ್ತಿ ಸುರಪುರ ಸಂಸ್ಥಾನದ ಅರಸರಿಗೆ ಸಲ್ಲುತ್ತದೆ ಎಂದರು.ಇದೇ ಸಂದರ್ಭದಲ್ಲಿ ರಾಜಾ ಚನ್ನಪ್ಪ ನಾಯಕ ರಾಜಾ ಪಿಡ್ಡನಾಯಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಬ್ದುಲ್ ರೌಫ್ ಸಂಘಟನಾ ಕಾರ್ಯದರ್ಶಿ ಅಬೀದ್ ಹುಸೇನ್ ಪಗಡಿ ಮದನಶಾ ಅಮ್ಜಾದ್ ಹುಸೇನ್ ತಿಪ್ಪಣ್ಣ ಮಡಿವಾಳ ವಿಷ್ಣು ಟೊಣಪೆ ಬಂದೇನವಾಜ್ ಇಸೂಬ ಖಾನ್ ಮಹ್ಮದಶಾ ಮಹಿಬೂಬುಲ್ಲಾ ಹಸನ್ ಖಂಡಪ್ಪ ಪೂಜಾರಿ ಮಹಿಬೂಬ್ ಶಾ ಶಾಕೀರ್ ಪಕಡಿ ರಿಯಾಜ್ ಅಲ್ಲಾವುದ್ದೀನ್ ದಾವುಲಸಾಬ್ ಸೇರಿದಂತೆ ಅನೇಕರಿದ್ದರು.