ಸುರಪುರ: ನಗರದಲ್ಲಿನ ತರಕಾರಿ ವ್ಯಾಪಾರಿಗಳು ಸೇರಿದಂತೆ ಅನೇಕ ವಿಧದ ಬೀದಿಬದಿ ವ್ಯಾಪಾರಿಗಳು ಸರಕಾರದ ಸೌಲಭ್ಯ ವಂಚಿತರಾಗಿದ್ದು ನಗರಸಭೆ ಸೌಲಭ್ಯಗಳನ್ನು ನೀಡದೆ ವಂಚಿಸಿತ್ತಿದೆ ಎಂದು ಶೋಷಿತರ ಪರ ಹೋರಾಟ ಸಂಘಟನೆಗಳ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಬೇಸರ ವ್ಯಕ್ತಪಡಿಸಿದರು.
ನಗರದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದ ಬಳಿಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿ,ಬೀದಿಬದಿ ವ್ಯಾಪಾರಸ್ಥರು ಈಗಾಗಲೆ ಕೊರೊನಾ ಹಾವಳಿಯಿಂದ ತೀವ್ರ ತೊಂದರೆಯಲ್ಲಿದ್ದಾರೆ,ಆದರೆ ನಗರಸಭೆ ಈ ವ್ಯಾಪಾರಿಗಳಿಗೆ ಯಾವುದೇ ರೀತಿಯ ಸಾಲ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದೆ,ಕೂಡಲೆ ಎಲ್ಲಾ ವ್ಯಾಪಾರಿಗಳಿಗೆ ಸರಕಾರ ನೀಡುವ ೫೦ ಸಾವಿರ ರೂಪಾಯಿಗಳ ಸಾಲ ಸೌಲಭ್ಯವನ್ನು ನೀಡಬೇಕು ಹಾಗು ವ್ಯಾಪಾರಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಇಲ್ಲವಾದಲ್ಲಿ ಬೀದಿಬದಿಯ ವ್ಯಾಪಾರಿಗಳೊಂದೆ ಒಕ್ಕುಟ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ನಂತರ ನಗರಾಭಿವೃಧ್ಧಿ ಅಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ಥೆದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲ ಬಾಗಲಕೋಟೆ ಮಾನಯ್ಯ ದೊರೆ ಶರಣಪ್ಪಗೌಡ ಪೊಲೀಸ್ ಪಾಟೀಲ್ ದೇವಪ್ಪ ರತ್ತಾಳ ದಾವೂದ್ ಸಾಬ್ ಖಾಸಿಂಸಾಬ್ ಹುಸೇನಸಾಬ್ ಸೇರಿದಂತೆ ಅನೇಕ ಜನ ಬೀದಿಬದಿಯ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
شكـرا