ಶಾಲೆಗಳಿಗೆ ಬಿಸಿಯೂಟದ ಆಹಾರ ಧಾನ್ಯಗಳ ಸರಬರಾಜಿಗೆ ತಾವೇ ನಿಂತ ಮೌನೇಶ ಕಂಬಾರ

0
26

ಸುರಪುರ: ತಾಲೂಕಿನಾದ್ಯಂತ ಕೋವಿಡ್ ಕಾರಣದಿಂದ ಶಾಲಾ ಮಕ್ಕಳಿಹೆ ಮದ್ಹ್ಯಾನದ ಬಿಸಿಯೂಟದ ಬದಲು ಆಹಾರ ಧಾನ್ಯಗಳನ್ನು ಅವರ ಮನೆಗಳಿಗೆ ವಿತರಣೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನೆರವಾಗಿತ್ತು.ಆದರೆ ಕೆಲ ದಿನಗಳ ಹಿಂದೆ ಸಂಘಟನೆಗಳು ಆರೋಪಿಸಿ ಮದ್ಹ್ಯಾನದ ಬಿಸಿಯೂಟದ ಬದಲು ಮಕ್ಕಳಿಗೆ ಆಹಾರ ಧಾನ್ಯಗಳನ್ನು ವಿತರಿಸುವಂತೆ ಸರಕಾರ ಆದೇಶ ಮಾಡಿದೆ ಆದರೆ ಅನೇಕ ಶಾಲೆಗಳಲ್ಲಿ ಆಹಾರ ಧಾನ್ಯಗಳನ್ನು ವಿತರಿಸಿಲ್ಲ ಎಂದು ಆರೋಪಿಸಲಾಗಿತ್ತು.

ಈಗ ಎಲ್ಲಾ ಶಾಲೆಗಳಿಗೆ ಖುದ್ದಾಗಿ ತಾವೇ ಮುಂದೆ ನಿಂತು ಶಾಲೆಗಳಿಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲು ಮುಂದಾಗಿರುವ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರವರು ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾರೆ.ಬಿಸಿಯೂಟದ ಆಹಾರ ಧಾನ್ಯಗಳನ್ನು ಸರಬರಾಜು ಮಾಡುವ ಲಾರಿಯ ಜೊತೆಗೆ ತಾವೇ ಹೋಗಿ ಆಯಾ ಶಾಲೆಗಳಿಗೆ ತಲುಪಬೇಕಾದ ಆಹಾರ ಧಾನ್ಯಗಳನ್ನು ಮುಂದೆ ನಿಂತು ತಲುಪಿಸುವ ಕೆಲಸ ಮಾಡುತ್ತಿರುವುದು ಮಾದರಿ ಕೆಲಸವಾಗಿದೆ ಎಂದು ಅನೇಕ ಶಾಲೆಗಳ ಶಿಕ್ಷಕರೂ ಕೂಡ ಅಕ್ಷರ ದಾಸೋಹ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

Contact Your\'s Advertisement; 9902492681

ಚಿತ್ರದಲ್ಲಿರುವಂತೆ ತಾಲೂಕಿನ ಯಡಿಯಾಪುರ ಶಾಲೆಯಲ್ಲಿ ಆಹಾರ ಧಾನ್ಯಗಳನ್ನು ಇಳಿಸುತ್ತಿರುವಾಗ ತಾವೇ ಖುದ್ದಾಗಿ ಮುಂದೆ ನಿಂತು ಆಯಾ ಶಾಲೆಗಳಿಗೆ ಸಿಗಬೇಕಾದ ಪ್ರಮಾಣದ ಆಹಾರ ಧಾನ್ಯಗಳನ್ನು ಸರಬರಾಜು ಮಾಡಿಸುತ್ತಿದ್ದಾರೆ.ಅಲ್ಲದೆ ಅಕ್ಷರ ದಾಸೋಹ ಅಧಿಕಾರಿ ಮೌನೇಶ ಕಂಬಾರವರು ಈ ಹಿಂದೆಯೂ ಅನೇಕ ರೀತಿಯ ಹೊಸ ಹೊಸ ಪ್ರಯೋಗಗಳ ಮೂಲಕ ಮಕ್ಕಳು ಶಾಲೆಗಳಿಗೆ ಬರುವಂತೆ ಮಾಡಲು ಪ್ರಯತ್ನ ಪಟ್ಟಿದ್ದರು.

ಅಲ್ಲದೆ ಕೆಲವು ಶಾಲೆಗಳಿಗೆ ಬಣ್ಣ ಮಾಡಿಸಲು ಅಲ್ಲಿರುವ ಗ್ರಾಮಸ್ಥರಿಗೆ ಪ್ರೇರಣೆಯಾಗಿ ಶಾಲೆಗಳಿಗೆ ಬಣ್ಣ ಮಾಡಿಸಿರುವ ಹಾಗು ಮಾಲಗತ್ತಿ ಗೌಡಗೇರಾ ತಿಪ್ಪನಟಿಗಿ ಶಾಲೆಗಳಿಗೆ ಅಲ್ಲಿಯ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಟಿವಿಗಳನ್ನು ಉಡುಗೊರೆ ನೀಡಲು ಪ್ರೇರಣೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.ತಾಲೂಕಿ ಒಂದು ಇಲಾಖೆಯ ಅಧಿಕಾರಿಗಳಾಗಿ ಕಚೇರಿಯಲ್ಲಿ ಕುಳಿತು ಆದೇಶ ಮಾಡುವ ಬದಲು ಸ್ವತಃ ತಾವೇ ಖುದ್ದಾಗಿ ಶಾಲೆಗಳಿಗೆ ತೆರಳಿ ಆಹಾರ ಧಾನ್ಯಗಳನ್ನು ತಲುಪಿಸುವ ಕೆಲಸ ಮಾಡುತ್ತಿರುವುದು ಇತರೆ ಇಲಾಖೆಗಳಿಗು ಮಾದರಿಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here