ಸುರಪುರ ಬಸ್ ನಿಲ್ದಾಣ ಬಳಿ ಕೊಚ್ಚೆ ಗುಂಡಿ ಹಂದಿಗಳ ವಾಸತಾಣ

0
13

ಸುರಪುರ: ನಗರದ ಬಸ್ ನಿಲ್ದಾಣದ ಗೊಡೆಗೆ ಹೊಂದಿಕೊಂಡು ಕೊಚ್ಚೆ ತುಂಬಿದ ಚರಂಡಿ ಹಾಗು ತ್ಯಾಜ್ಯದ ರಾಸಿಯಿಂದಾಗಿ ಇಡೀ ಪ್ರದೇಶ ಹೊಲಸು ನಾಥ ಬೀರುತ್ತಿದೆ. ಅಲ್ಲದೆ ಇದೇ ಕೊಚ್ಚೆಯ ಬಳಿಯಲ್ಲಿಯೆ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲಾಗುತ್ತದೆ, ಸದಾಕಾಲ ಈ ಕೊಚ್ಚೆಯಲ್ಲಿ ಹಂದಿಗಳು ವಾಸವಾಗಿರುವುದರಿಂದ ಸದಾಕಾಲ ದುರ್ನಾತ ಬೀರುತ್ತಿರುತ್ತದೆ. ಜನರು ಇದರಲ್ಲಿಯೇ ನಿಂತು ಹಣ್ಣು ತರಕಾರಿ ಕೊಳ್ಳುತ್ತಾರೆ ಮತ್ತು ಪೇಠ ಅಮ್ಮಾಪುರ ಭಾಗಕ್ಕೆ ಹೋಗುವ ಖಾಸಗಿ ವಾಹನಗಳು ನಿಲ್ಲಿಸಲು ಕೂಡ ಇದೇ ಸ್ಥಳವನ್ನು ಗುರುತಿಸಿದ್ದರಿಂದ ಗ್ರಾಮೀಣ ಭಾಗಕ್ಕೆ ಹೋಗಲು ಖಾಸಗಿ ವಾಹನಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ದುರ್ನಾತ ಸೇವಿಸುವ ದೌರ್ಭಾಗ್ಯ..!

ಇಡೀ ಪ್ರದೇಶ ಈ ಕೊಚ್ಚೆ ಗುಂಡಿಯಿಂದ ದುರ್ಗಮಯವಾಗಿದ್ದು ಇಲ್ಲಿಯ ಜನರು ಮನೆ ಬಾಗಿಲು ಸದಾಕಾಲ ಮುಚ್ಚಿಕೊಂಡೆ ಇರಬೇಕಾದ ದುಸ್ಥಿತಿ ಇಲ್ಲಿದೆ.ಅಲ್ಲದೆ ಇದೇ ಕಸದ ರಾಸಿಯಲ್ಲಿಯೇ ಅಗಸರ ಓಣಿಗೆ ಹೋಗುವ ರಸ್ತೆ ಇರುವುದರಿಂದ ಜನರು ಇದೇ ಕೊಚ್ಚೆಯಲ್ಲಿಯೇ ಓಡಾಡಬೇಕಿದೆ,ಇನ್ನೂ ಹಣ್ಣು ತರಕಾರಿ ಮಾರುವವರು ಸದಾಕಾಲ ಮೂಗು ಮುಚ್ಚಿಕೊಂಡೇ ಕೂಡಬೇಕಿದೆ,ಇಲ್ಲವಾದರೆ ದುರ್ವಾಸನೆಯಿಂದ ಜನರು ವಾಂತಿ ಮಾಡಿಕೊಳ್ಳುವುದು ಗ್ಯಾರಂಟಿ ಎನ್ನುವ ಸ್ಥಿತಿಯಿದೆ.

Contact Your\'s Advertisement; 9902492681

ಕಳೆದ ಅನೇಕ ವರ್ಷಗಳಿಂದ ಇಲ್ಲಿ ಕೊಚ್ಚೆ ಗುಂಡಿಯಿದ್ದು ಕಸದ ರಾಶಿಯು ಸದಾಕಾಲ ಇರಲಿದೆ.ಅಲ್ಲದೆ ಇದೇ ಕೊಚ್ಚೆ ಗುಂಡಿಯ ಸಮೀಪವೆ ಮಾಂಸ ಮಾರಾಟದ ಸ್ಟಾಲ್‌ಗಳಿರುವುದರಿಂದ ಕೋಳಿಗಳ ತ್ಯಾಜ್ಯವನ್ನು ಇಲ್ಲೆ ಎಸೆಯಲಾಗುತ್ತದೆ,ಇದರಿಂದ ಜನರು ರೋಸಿ ಹೋಗಿದ್ದಾರೆ,ಆದ್ದರಿಂದ ಇಂತಹ ದುಸ್ಥಿತಿಯನ್ನು ಸುಧಾರಣೆಗೊಳಿಸಬೇಕಾದ ನಗರಸಭೆ ಮತ್ತು ಸಾರಿಗೆ ಇಲಾಖೆ ನಿರ್ಲಕ್ಷ್ಯ ತೋರಿರುವುದು ನಿಜಕ್ಕೂ ನಮ್ಮ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಈ ಪ್ರದೇಶದ ನಿವಾಸಿಗಳಾದ ಉದಯಕುಮಾರ ಕಟಿಗೆಯವರು.

ನಗರಸಭೆಯಾಗಲಿ ಅಥವಾ ಸಾರಿಗೆ ಇಲಾಖೆಯಾಗಲಿ ಇನ್ನಾದರು ಈ ಕೊಚ್ಚೆ ತುಂಬಿದ ಹಾಗು ಕಸದ ರಾಸಿಯ ಚರಂಡಿಯನ್ನು ಸ್ವಚ್ಛಗೊಳಿಸಬೇಕು ಎಂಬುದು ಸ್ಥಳಿಯ ನಿವಾಸಿಗಳ ಆಗ್ರಹವಾಗಿದೆ.ಆದರೆ ನಗರಸಭೆ ಇದರತ್ತ ಗಮಹರಿಸುವುದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here