ಶಹಾಬಾದ:ಭಂಕೂರ ಗ್ರಾಮದ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ರಾಜೇಶ್ವರಿ ರಜನಿಕಾಂತ ಶುಕ್ರವಾರದಂದು ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಭಂಕೂರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆ ರಾಜೇಶ್ವರಿ ರಜನಿಕಾಂತ, ಗ್ರಾಪಂ ಅಧ್ಯಕ್ಷೆಯಾಗಿ ಎಲ್ಲಾ ವಾರ್ಡಗಳ ಸರ್ವೋತೋಮುಖ ಅಭಿವೃದ್ಧಿಯನ್ನು ಅಲ್ಲಿನ ವಾರ್ಡ ಸದಸ್ಯರ ಹಾಗೂ ನಿವಾಸಿಗಳ ಸಹಕಾರದಿಂದ ಮಾಡುವುದು ನನ್ನ ಆದ್ಯತೆಯಾಗಿದೆ ಎಂದು ತಿಳಿಸಿದರು. ಗ್ರಾಮಗಳಲ್ಲಿನ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು, ಸಾರ್ವಜನಿಕ ಮೂತ್ರಾಲಯ ಹಾಗೂ ಶೌಚಾಲಯ ಸೇರಿದಂತೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನನ್ನ ಜವಾಬ್ದಾರಿಯಾಗಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಗೊಂಡ ಜನಪ್ರತಿನಿಧಿಗಳು ಜನರ ಆಶಯಕ್ಕೆ ಬದ್ಧತೆಯಿಂದ ಕೆಲಸ ನಿರ್ವಹಿಸುವುದು ಮೊದಲ ಕರ್ತವ್ಯ. ಭಂಕೂರ ಪಂಚಾಯತಿಗೆ ಒಳಗೊಂಡ ಎಲ್ಲಾ ಗ್ರಾಮಗಳ ಸದಸ್ಯರ ಹಾಗೂ ಅಧಿಕಾರಿ ವರ್ಗದವರ ಸಹಕಾರದಿಂದ ಉತ್ತಮ ಗ್ರಾಮವನ್ನಾಗಿ ಮಾಡುವ ಸಂಕಲ್ಪ ನನಗಿದೆ.ಅದಕ್ಕಾಗಿ ಎಲ್ಲರ ಸಹಕಾರ ದೊರೆತರೇ ಭಂಕೂರ ಗ್ರಾಪಂಯನ್ನು ಉತ್ತಮ ಗ್ರಾಮ ಪಂಚಾಯನ್ನಾಗಿ ಮಾಡುವ ಮೂಲಕ ಅಭಿವೃದ್ಧಿ ಪಥದತ್ತ ಕಂಡೋಯ್ಯಯವ ಕೆಲಸ ಮಾಡುತ್ತೆನೆ ಎಂದು ತಿಳಿಸಿದರು.
ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಅವರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ಉಪಾಧ್ಯಕ್ಷ ಯಶ್ವಂತ ನೆಹರು, ಚನ್ನವೀರಪ್ಪ ಪಾಟೀಲ, ಶಶಿಕಾಂತ ಪಾಟೀಲ, ನೀಲಕಂಠ ಪಾಟೀಲ,ವಿಠ್ಠಲ್ ನಾಯಕ, ವಿಜಯಲಕ್ಷ್ಮಿ ಸುರೇಶ ಚವ್ಹಾಣ, ಪಿಡಿಓ ವೇದಾಂಗ ತುಪ್ಪದ್,ಅಣವೀರ ಇಂಗಿನಶೆಟ್ಟಿ,ರಜನಿಕಾಂತ ಕಂಬಾನೂರ, ಈರಣ್ಣ ಕಾರ್ಗಿಲ್, ಲಕ್ಷ್ಮಿಕಾಂತ ಕಂದಗೂಳ,ಪ್ರಕಾಶ ಪಾಟೀಲ,ಶಾಂತು ಸೌಕಾರ, ಉಮೇಶ ಪೂಜಾರಿ, ಅಮೃತ ಮಾನಕರ್,ಭೀಮಯ್ಯ ಗುತ್ತೆದಾರ,ನಿಂಗಣ್ಣ ಹುಳಗೋಳಕರ್, ಕನಕಪ್ಪ ದಂಡಗುಲಕರ್, ನಾಗರಾಜ ಮೇಲಗಿರಿ, ಯಲ್ಲಾಲಿಂಗ ಪೂಜಾರಿ,ಸಂತೋಷ ಕಲಶೆಟ್ಟಿ ಇತರರು ಇದ್ದರು.