ಶಹಾಬಾದ: ಕೇಂದ್ರದ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಶನಿವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಪ್ರತಿಭಟನಾಕಾರರು ಕೂಡಲೇ ಜಾರಿಗೊಂಡಿರುವ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.ಆದರೆ ಕೇಂದ್ರದ ಬಿಜೆಪಿ ಸರ್ಕಾರ ಅದ್ಯಾವುದಕ್ಕೂ ಮುಂದಾಗುತ್ತಿಲ್ಲ. ರೈತರು ಅನ್ನದಾತರು. ಈ ಕಾನೂನುಗಳಿಂದ ಎಂಎಸ್ಪಿ ನಿಂತು ಹೋಗಲಿದೆ. ಕೃಷಿ ಮಾರುಕಟ್ಟೆಗಳು ನಾಶವಾಗಲಿವೆ. ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾಯಿದೆಗಳನ್ನು ವಾಪಸ್ ಪಡೆಯದಿದ್ದರೆ ಹೋರಾಟ ಮಾತ್ರ ನಿರಂತರವಾಗಿ ನಡೆಯುವುದು ಎಂದು ಎಚ್ಚರಿಕೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್,ಉಪಾಧ್ಯಕ್ಷ ವಿಜಯಕುಮಾರ ಮುಟ್ಟತ್ತಿ,ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಎಪಿಎಮ್‌ಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ, ಮೃತ್ಯುಂಜಯ್ ಹಿರೇಮಠ,ಹಾಷಮ್‌ಖಾನ, ಅಜಿತ್ ಪಾಟೀಲ, ಶರಣಗೌಡ ಪಾಟೀಲ ಗೋಳಾ,ಸುಭಾಷ ಪವಾರ, ಸುಭಾಷ ಪಂಚಾಳ, ಮಾಣಿಕ್‌ಗೌಡ,ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ,ಸಾಹೇಬಗೌಡ ಬೋಗುಂಡಿ, ರಾಜೇಶ ಯನಗುಂಟಿಕರ್,ಅನ್ವರ ಪಾಶಾ,ಕುಮಾರ ಚವ್ಹಾಣ, ಡಾ.ಅಹ್ಮದ್ ಪಟೇಲ್, ಯುವ ಕಾಂಗ್ರೆಸ್ ಅಧ್ಯಕ್ಷ ಕಿರಕುಮಾರ ಚವ್ಹಾಣ, ದೇವೆಂದ್ರ ಕಾರೊಳ್ಳಿ, ಸ್ನೇಹಲ್ ಜಾಯಿ, ಶರಣಗೌಡ ಪಾಟೀಲ ದಳಪತಿ,ನಾಗಣ್ಣ ರಾಂಪುರೆ, ಸುರೇಶ ನಾಯಕ ಸೇರಿದಂತೆ ಕಾರ್ಯಕರ್ತರು ಇದ್ದರು.
ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಮಣಿದು, ಅವರಿಗೆ ಗುಲಾಮರಾಗಿ ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ರೈತರ ವಿರೋಧಿಗಳನ್ನು ದೇಶದ ಪ್ರತಿಯೊಬ್ಬ ನಾಗರಿಕರು ವಿರೋಧಿಸಬೇಕಿದೆ. – ವಿಜಯಕುಮಾರ ರಾಮಕೃಷ್ಣ ಕಾಂಗ್ರೆಸ್ ಮುಖಂಡರು.