ಸುರಪುರ: ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವುದು ಹಾಗು ವಿನಾಕಾರಣ ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕೊಡೇಕಲ್ ಪೊಲೀಸ್ ಠಾಣೆ ಎದುರು ಧರಣಿ ಆರಂಭಿಸಿದರು.
ರವಿವಾರ ಮದ್ಹ್ಯಾನ ಹುಣಸಗಿ ತಾಲೂಕಿನ ಕೊಡೇಕಲ್ ಪೊಲೀಸ್ ಠಾಣೆ ಎದುರು ಧರಣಿಗೆ ಕುಳಿತ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ,ಇಲ್ಲಿಯ ಪಿಎಸ್‌ಐ ಠಾಣೆಗೆ ಬಂದಾಗಿನಿಂದಲೂ ಬಿಜೆಪಿಯವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ,ಕಾಂಗ್ರೆಸ್ ಕಾರ್ಯಕರ್ತರ ಮೇಲೆ ವಿನಾಕಾರಣ ಹಲ್ಲೆ ನಡೆಸುವುದು ಹಾಗು ಕೇಸು ದಾಖಲಿಸುವ ಮೂಲಕ ಕರ್ತವ್ಯ ಲೋಪ ಎಸಗುತ್ತಿದ್ದಾರೆ,ನಮ್ಮ ಬೆಂಬಲಿಗರ ಮೇಲೆ ಹಲ್ಲೆ ನಡೆದರೂ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳದೆ ಹಲ್ಲೆಗೊಳಗಾದವರ ಮೇಲೆಯೇ ಕೇಸು ದಾಖಲಿಸುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ,ಈ ಹಿಂದೆಯೂ ಇದೇ ರೀತಿ ಕರ್ತವ್ಯ ಲೋಪ ಎಸಗಿದ್ದು ಕ್ರಮಕ್ಕೆ ಆಗ್ರಹಿಸಲಾಗಿತ್ತು.
ಆದರೆ ಮೇಲಾಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.ಈಗ ಮತ್ತೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ದೂರು ದಾಖಲಿಸಿದ್ದಾರೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಹಾಗು ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ವರೆಗೂ ಧರಣಿಯನ್ನು ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿಯ ವರೆಗೂ ಧರಣಿ ಮುಂದುವರೆದಿದ್ದು ಪಿಎಸ್‌ಐ ಮೇಲೆ ಕ್ರಮ ಕೈಗೊಳ್ಳುವ ವರೆಗೂ ಧರಣಿ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದಾರೆ.ಧರಣಿಯಲ್ಲಿ ಮುಖಂಡರಾದ ರಾಜಾ ವೇಣುಗೋಪಾಲ ನಾಯಕ ರಾಜಾ ರೂಪಕುಮಾರ ನಾಯಕ ರಾಜಾ ಸಂತೋಷ ನಾಯಕ ರಾಜಾ ಕುಮಾರ ನಾಯಕ ರಾಜಾ ಸುಶಾಂತ ನಾಯಕ ಆನಂದ ಲಕ್ಷ್ಮೀಪುರ ಹಣಮಂತ ಕಟ್ಟಿಮನಿ ಮಹ್ಮದ ಮೌಲಾ ಸೌದಾಗರ್ ದಾನಪ್ಪ ಕಡಿಮನಿ ಮಲ್ಲು ಬಿಲ್ಲವ್ ಶರಣು ಕಲಬುರ್ಗಿ ಹಾಗು ಅನೇಕ ಜನ ಮಹಿಳೆಯರು ಸೇರಿದಂತೆ ನೂರಾರು ಜನರಿದ್ದಾರೆ.