ಕಲಬುರಗಿ: ಪರಭಾಷಾ ಹಾವಳಿಯಿಂದ ಕನ್ನಡ ಭಾಷೆಗೆ ಕುತ್ತು ಬರುತ್ತಿದೆ.ಕನ್ನಡ ಉಳಿವಿಗಾಗಿ ನಾವೇಲ್ಲರೂ ಶ್ರಮಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಸುಬ್ಬರಾವ್ ಕುಲಕರ್ಣಿ ಇಂದಿಲ್ಲಿ ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ತಾಲೂಕು, ಉತ್ತರ ವಲಯ ಹಾಗೂ ದಕ್ಷಿಣ ವಲಯ ಸಂಯುಕ್ತಾಶ್ರಯದಲ್ಲಿ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ನಡೆದು ಬಂದ ದಾರಿ ಉಪನ್ಯಾಸ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕನ್ನಡ ಭಾಷೆ ಶ್ರೀಮಂತವಾಗಿದೆ.ಸಾವಿರಾರು ವರ್ಷದ ಇತಿಹಾಸ ಹೊಂದಿರುವ ಕನ್ನಡ ಭಾಷೆ ಬಗ್ಗೆ ಎಲ್ಲರೂ ಅಭಿಮಾನ ಮೆರೆಯಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಹೋರಾಗಾರರಾದ ಲಕ್ಷ್ಮಣ ದಸ್ತಿ ಮಾತನಾಡಿ ಕನ್ನಡ ಹುಟ್ಟಿ ಬೆಳೆದದ್ದು ನಮ್ಮ ಕಲಬುರ್ಗಿಯಲ್ಲಿ ಎಂಬುದು ಹೆಮ್ಮೆಯ ವಿಚಾರವಾಗಿದೆ.ಈ ಭಾಗ ಕನ್ನಡ ಚಟುವಟಿಕೆಗಳ ತವರುರಾಗಿದೆ.ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ ಅನೇಕ ರೀತಿಯ ಸಕ್ರೀಯವಾಗಿ ನಾಡು,ನುಡಿ, ಹಾಗೂ ನೆಲ ಜಲ ಮತ್ತು ಅಭಿವೃದ್ಧಿ ವಿಷಯದಲ್ಲಿ ಕೆಲಸ ಮಾಡಿದ್ದು ಶ್ಲಾಘನೀಯ ಎಂದರು.
ಉಪನ್ಯಾಸವನ್ನು ಡಾ.ವಿಜಯಕುಮಾರ ಪರುತೆ ನೀಡಿದರು.ಕರ್ನಾಟಕ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಸುನೀಲ್ ಹುಡುಗಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು.ಕಲಬುರಗಿ ತಾಲೂಕು ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ಕಲಬುರಗಿ ಉತ್ತರ ವಲಯದ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ದಕ್ಷಿಣ ವಲಯದ ಅಧ್ಯಕ್ಷ ಅಪ್ಪಾರಾವ ಕುಲಕರ್ಣಿ, ಆನಂದಪ್ಪ ಮುಸಾವಳಿ, ದೌಲತಯರಾವ ಮಾಲಿಪಾಟೀಲ್ ವೇದಿಕೆ ಮೇಲೆ ಇದ್ದರು.ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.
ಜಿ.ಜಿ.ವಣಿಕ್ಯಾಳ ನಿರೂಪಿಸಿದರು.ಭಾನುಕುಮಾರ ಸ್ವಾಗತಿಸಿದರು, ಪ್ರಸಾದ್ ವಂದಿಸಿದರು.ಅಶೋಕ ಕಮಲಾಪುರ, ಆನಂದ ನಂದುರಕರ, ಬಿ.ಜಯಸಿಂಗ,ಸಾಜೀದ ಅಲಿ ರಂಜೋಳ್ಳ್ವಿ, ದಾಸಿಮಯ್ಯ ವಡ್ಡನಕೇರಿ,ಸಾಲೋಮನ ದೀವಾಕರ, ಪ್ರಶಾಂತ ತಂಬೂರಿ,ಶಲಣು ಇಕ್ಕಳಕಿಮಠ,ಮಿರಾಜುದ್ದಿನ,ಭೀ