ಆಸ್ತಿಗಾಗಿ ಅಣ್ಣನ ಮಗನನ್ನೆ ಕೊಂದ ಪಾಪಿ ಚಿಕ್ಕಪ್ಪ: ದೀವಳಗುಡ್ಡದಲ್ಲಿ ಘಟನೆ

4
45

ಸುರಪುರ: ಅಣ್ಣನ ಆಸ್ತಿಯನ್ನು ತಾನೆ ಲಪಟಾಯಿಸಬೇಕೆಂಬ ಉದ್ದೇಶದಿಂದ ಕಳೆದ ಅನೇಕ ವರ್ಷಗಳಿಂದ ಅಣ್ಣ ಮತ್ತವನ ಮಕ್ಕಳೊಂದಿಗೆ ಕಾದಾಟ ನಡೆಸಿ ಕೊನೆಗೆ ಅಣ್ಣನ ಮಗನನ್ನೆ ಹಿರಿದು ಕೊಂದಿರುವ ಘಟನೆ ಸುರಪುರ ನಗರದ ದೀವಳಗುಡ್ಡದಲ್ಲಿ ನಡೆದಿದೆ.

ದೀವಳಗುಡ್ಡದ ನಿವಾಸಿಯಾದ ತಾತಪ್ಪ ಎಂಬುವವರೆ ಕೊಲೆಗೈದ ಪಾಪಿ ಚಿಕ್ಕಪ್ಪನಾಗಿದ್ದಾನೆ.ಈ ತಾತಪ್ಪನ ಅಣ್ಣ ನಿಂಗಪ್ಪ ಕಳೆದ ಆರು ತಿಂಗಳ ಹಿಂದೆ ಮೃತನಾಗಿದ್ದು ಈಗ ನಿಂಗಪ್ಪನಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರನ್ನು ಮುಗಿಸುವ ಸಂಚು ನಡೆಸಿ ಅನೇಕ ಬಾರಿ ತಮ್ಮ ಅಣ್ಣನ ಕುಟುಂಬದೊಂದಿಗೆ ಜಗಳವಾಡುತ್ತಿದ್ದ ತಾತಪ್ಪ ಎಂದು ಹೇಳಲಾಗುತ್ತಿದೆ.

Contact Your\'s Advertisement; 9902492681

ಇದನ್ನೂ ಸಹ ಓದಿ: ಮದುವೆಗೆ ವಿಳಂಬ: ಇಬ್ಬರು ಯುವ ಪ್ರೇಮಿಗಳ ಆತ್ಮಹತ್ಯೆ

ಮೃತ ಯುವಕ ಶಿವರಾಜ ಉಪಜೀವನಕ್ಕಾಗಿ ತಾನು ತನ್ನ ತಾಯಿಯೊಂದಿಗೆ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿ ತರಕಾರಿ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದಾರೆ. ಅದರಂತೆ ಇಂದು ಬೆಳಿಗ್ಗೆ ತಾನು ತರಕಾರಿ ಅಂಗಡಿಯನ್ನು ತೆಗೆದು ವ್ಯಾಪಾರ ಆರಂಭಿಸಿ ಒಂಬತ್ತು ಗಂಟೆಯ ಸುಮಾರಿಗೆ ತನ್ನ ತಾಯಿ ಮಲ್ಲಮ್ಮ ಅಂಗಡಿಗಿ ಬಂದ ನಂತರ ತಾನು ಮನೆಗೆ ಹೋಗಬೇಕೆಂದಾಗ ಈತನ ಚಿಕ್ಕಪ್ಪ ಮತ್ತು ಆತನ ಮಕ್ಕಳು ಇವರ ಆಸ್ತಿಯಲ್ಲಿ ಅಳತೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದು ಕೇಳಲು ಹೋದವನ ಮೇಲೆ ಏಕಾಎಕಿ ದಾಳಿ ಮಾಡಿದ್ದಾರೆ,ಅಲ್ಲದೆ ಚಾಕುವಿನಿಂದ ಕತ್ತಿನ ಭಾಗದಲ್ಲಿ ಬಲವಾಗಿ ಇರಿದಿದ್ದರಿಂದಾಗಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದವನನ್ನು ಸ್ಥಳಿಯರು ಆಸ್ಫತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ ಕಲಬುರ್ಗಿಗೆ ಕಳುಹಿಸಿದ್ದು ರಸ್ತೆ ಮದ್ಯೆ ಕೊಂಗಂಡಿ ಪೆಟ್ರೋಲ್ ಬಂಕ್ ಬಳಿಯಲ್ಲಿ ಗಾಯಗೊಂಡ ಯುವಕ ಶಿವರಾಜ ಮೃತನಾಗಿದ್ದಾನೆ.ಇತ್ತ ಕೊಲೆ ಮಾಡಿದ ತಾತಪ್ಪ ಮತ್ತವನ ಮಕ್ಕಳಾದ ರಾಘವೇಂದ್ರ ಮತ್ತೊಬ್ಬ ರಾಜು ಪೊಲೀಸರಿಗೆ ಶರಣಾಗಿದ್ದಾರೆ.ಯುವಕನ ಕೊಲೆಯನ್ನು ತಿಳಿದು ನೂರಾರು ಜನರು ಪೊಲೀಸ್ ಠಾಣೆ ಬಳಿಯಲ್ಲಿ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ ಮೃತನ ತಾಯಿ ಸೇರಿದಂತೆ ಅನೇಕ ಜನ ಸಂಬಂಧಿಗಳ ಆಕ್ರಂದನ ಮುಗಿಲುಮುಟ್ಟಿತ್ತು.ದೂರು ದಾಖಲಿಸಿಕೊಂಡಿರುವ ಪೊಲೀಸರು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹತ್ತು ವರ್ಷದಿಂದ ನಮಗೆ ಕಿರಕುಳು ನೀಡುತ್ತಿದ್ದ ಈಗ ನನ್ನ ಮಗನನ್ನೆ ಕೊಂದಿದ್ದಾರೆ,ಇನ್ನೊಬ್ಬ ಮಗನನ್ನು ಕೊಲ್ಲುತ್ತಾರೆ ಇವರು.ಆದ್ದರಿಂದ ಇವರು ಸಾಯುವವರೆಗೂ ಹೊರಗೆ ಬರದಂತೆ ಶಿಕ್ಷೆ ನೀಡಬೇಕು-ಮಲ್ಲಮ್ಮ ಮೃತ ಶಿವರಾಜನ ತಾಯಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here