ವಾಡಿ: ರೈತರ ಆಂದೋಲನ ಬೆಂಬಲಿಸಿದ್ದಕ್ಕಾಗಿ ದೇಶದ್ರೋಹದ ಆರೋಪದ ಮೇಲೆ ದೆಹಲಿ ಪೊಲೀಸರು ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿ ಜೈಲಿಗೆ ಹಾಕಿರುವ ಕ್ರಮ ಎಲ್ಲಾ ಜನತಾಂತ್ರಿಕ ರೂಢಿ ಆಚರಣೆಗಳ ಉಲ್ಲಂಘನೆಯಾಗಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಆರೋಪಿಸಿದ್ದಾರೆ.
ಎಸಿಸಿ ಕಾರ್ಖಾನೆ ವಿರುದ್ಧ ಸಿಡಿದೆದ್ದ ಲಾರಿ-ಟ್ರಾನ್ಸ್‌ಪೋರ್ಟ್ ಮಾಲೀಕರು: ಸಿಮೆಂಟ್ ಸಾಗಾಣಿಕೆ ತಡೆಯುವ ಎಚ್ಚರಿಕೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಾಮ್ರೇಡ್ ವೀರಭದ್ರಪ್ಪ, ಬಿಜೆಪಿ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸುವುದು ಆಹಾರವನ್ನು ಊಟ ಮಾಡಿ ಬದುಕುವ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಕರ್ತವ್ಯ ನಿರ್ವಹಿಸುವುದೇ ಮಹಾ ಅಪರಾಧವೆಂದು ಭಾವಿಸಿರುವ ಬಂಡವಾಳಶಾಹಿ ತಿಮಿಂಗಲಗಳ ನಗ್ನ ಗುಲಾಮಗಿರಿಯಲ್ಲಿರುವ ಸರ್ಕಾರ, ಹೋರಾಟಗಾರರನ್ನು ದೇಶದ್ರೋಹಿಗಳೆಂದು ಬ್ರಾಂಡ್ ಮಾಡುತ್ತಿದೆ.
ಜನಪರ ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಹಾಗೂ ಅಂತರರಾಷ್ಟ್ರೀಯ ಮಟ್ಟದ ಗೌರವವುಳ್ಳ ವ್ಯಕ್ತಿಗಳ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಪೊಲೀಸ್ ಕ್ರಮ ಮತ್ತು ಸೈಬರ್ ದಾಳಿಗಳು ವಾಸ್ತವವಾಗಿ ಮೂಲಭೂತ ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಗಳಾಗಿವೆ. ಮಾರಕ ಕೃಷಿ ಕಾನೂನುಗಳನ್ನು ರದ್ದುಗೊಳಿಸದೆ ಹಿಂದೆ ಸರಿಯದಿರಲು ದೃಢನಿಶ್ಚಯ ಹೊಂದಿರುವ ರೈತರು ಮತ್ತು ಅವರೊಂದಿಗೆ ನಿಲ್ಲುವವರನ್ನು ಬೆದರಿಸಲು ಹಾಗು ತಡೆಯಲು ತೆಗೆದುಕೊಂಡ ದು?ತ್ಯದ ಕ್ರಮಗಳ ವಿರುದ್ಧ ಜನತಾಂತ್ರಿಕ ಮನಸ್ಸುಳ್ಳ ಎಲ್ಲ ಜನರು ಒಗ್ಗೂಡಿ ಹೋರಾಡಬೇಕೆಂದು ಅವರು ಕರೆ ನೀಡಿದ್ದಾರೆ.