ವಾಡಿ: ಅಭಿವೃದ್ಧಿಯನ್ನೆ ಜೀವಾಳವಾಗಿಸಿಕೊಂಡು ಕಲಬುರಗಿಯ ಚಿತ್ರಣ ಬದಲಿಸಿದ್ದ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಕಲಬುರಗಿಯ ಜನರು ಈಗ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಹಿರಿಯ ಮುಖಂಡ ಶಂಕ್ರಯ್ಯಸ್ವಾಮಿ ಮದ್ರಿ ಹೇಳಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್-೨೨ರ ಅಂಬೇಡ್ಕರ್ ವೃತ್ತದಿಂದ ರೈಲ್ವೆ ಪೋರ್ಟ್‌ರ್ ಚಾಳಿ ವರೆಗೆ ಪಿಡಬ್ಲುಡಿ ಇಲಾಖೆಯ ೭೦ ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಎಸಿಸಿ ಕಾರ್ಖಾನೆ ವಿರುದ್ಧ ಸಿಡಿದೆದ್ದ ಲಾರಿ-ಟ್ರಾನ್ಸ್‌ಪೋರ್ಟ್ ಮಾಲೀಕರು: ಸಿಮೆಂಟ್ ಸಾಗಾಣಿಕೆ ತಡೆಯುವ ಎಚ್ಚರಿಕೆ
ಕಲಬುರಗಿಯಿಂದ ಲೋಕಸಭೆಗೆ ಚುನಾಯಿತರಾಗಿ ಕೇಂದ್ರ ಸಚಿವರಾಗಿದ್ದ ಖರ್ಗೆ ಅವರು ದೊಡ್ಡ ಆಸ್ಪತ್ರೆಗಳನ್ನು, ವಸತಿನಿಲಯಗಳು, ಕಾಲೇಜುಗಳು, ರಾಷ್ಟ್ರೀಯ ಹೆದ್ದಾರಿ ಹೀಗೆ ಅನೇಕ ಸೌಲಭ್ಯಗಳನ್ನು ಜನರಿಗಾಗಿ ದೊರಕಿಸಿಕೊಟ್ಟಿದ್ದಾರೆ. ರೈಲ್ವೆ ಮಂತ್ರಿಯಾಗಿದ್ದಾಗ ದೇಶದ ಅನೇಕ ರಾಜ್ಯದ ರೈಲು ನಿಲ್ದಾಣಗಳು ಅಭಿವೃದ್ಧಿ ಕಂಡಿವೆ. ಜಿಲ್ಲೆಯ ಜನರ ಆರೋಗ್ಯ ಕಾಳಜಿ ಹೊಂದಿದ್ದ ಖರ್ಗೆ ಅವರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅಭಿವೃದ್ಧಿಯ ವಿರುದ್ಧ ಜಾತಿ ಮತ್ತು ಕೋಮು ರಾಜಕಾರಣ ಕೆಲಸ ಮಾಡಿದ್ದರಿಂದ ಮತದಾರರು ಖರ್ಗೆ ಅವರನ್ನು ಸೋಲಿಸಿದ್ದರು. ಬಹು ನಿರೀಕ್ಷಿತ ಬಿಜೆಪಿ ಸಂಸದರಿಂದ ಜಿಲ್ಲೆಯಲ್ಲಿ ಯಾವೂದೇ ಅಭಿವೃದ್ಧಿ ಕಾಣದ ಜನತೆ ಖರ್ಗೆ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.
ಕಲಬುರಗಿ: ಫೆಬ್ರವರಿ 24 ರಂದು ಉದ್ಯೋಗ ಮೇಳ
ಪುರಸಭೆ ಸದಸ್ಯ ಶರಣು ನಾಟೀಕಾರ ಮಾತನಾಡಿ, ನಗರದ ಅಭಿವೃದ್ಧಿಗಾಗಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ. ಪ್ರತಿಯೊಂದು ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಮತ್ತು ಸಿಸಿ ಚರಂಡಿಗಳು ಅಭಿವೃದ್ಧಿ ಕಂಡಿವೆ. ಈ ಹಿಂದೆ ವಾಡಿ ಎಂದರೆ ರಾಡಿ ಊರು ಎಂಬ ಅಪವಾದವಿತ್ತು. ಈಗ ಯಾವೂದೇ ಬಡಾವಣೆಗೆ ಹೋದರೂ ಉತ್ತಮ ರಸ್ತೆ, ಚರಂಡಿ, ಬೀದಿದೀಪಗಳನ್ನು ಕಾಣಬಹುದಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಮುಖಂಡ ಟೋಪಣ್ಣ ಕೋಮಟೆ, ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಪುರಸಭೆ ಸದಸ್ಯರಾದ ಮಲ್ಲಯ್ಯ ಗುತ್ತೇದಾರ, ದೇವಿಂದ್ರ ಕರದಳ್ಳಿ, ಮಹ್ಮದ್ ಗೌಸ್, ಮರಗಪ್ಪ ಕಲಕುಟಗಿ, ಮುಖಂಡರಾದ ಅಶ್ರಫ್ ಖಾನ್, ವಿಜಯಕುಮಾರ ಸಿಂಗೆ, ಹಾಜಪ್ಪ ಲಾಡ್ಲಾಪುರ, ಶ್ರೀರಾಮ ರಾಠೋಡ, ಅನೀಲ ದಾಸ ಪಾಲ್ಗೊಂಡಿದ್ದರು.