ಉದ್ಯೋಗಕ್ಕಾಗಿ ಆಗ್ರಹಿಸಿ ಎಐಡಿವೈಒ ಸಹಿ ಸಂಗ್ರಹ ಚಳುವಳಿ

1
81

ವಾಡಿ: ಉದ್ಯೋಗ ಭರ್ತಿ ಹಾಗೂ ನಿರುದ್ಯೋಗ ಭತ್ತೆಗಾಗಿ ಆಗ್ರಹಿಸಿ ಎಐಡಿವೈಒ ಸಂಘಟನೆ ವತಿಯಿಂದ ಗುರುವಾರ ವಾಡಿ ಪಟ್ಟಣದಲ್ಲಿ ಸಹಿ ಸಂಗ್ರಹ ಚಳುವಳಿ ನಡೆಯಿತು.

ಚಳುವಳಿ ಉದ್ದೇಶಿಸಿ ಮಾತನಾಡಿದ ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಪಾಣೇಗಾಂವ, ಕಲ್ಯಾಣ ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಎಪ್ಪತ್ತು ಸಾವಿರ ಮತ್ತು ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳಿವೆ. ಇನ್ನೊಂದೆಡೆ ಲಕ್ಷಾಂತರ ಯುವಜನರು ಅಂಕಪಟ್ಟಿಗಳನ್ನು ಹಿಡಿದುಕೊಂಡು ಉದ್ಯೋಗಕ್ಕಾಗಿ ಅಲೆಯುತ್ತಿದ್ದಾರೆ.

Contact Your\'s Advertisement; 9902492681

ದೇಶದಲ್ಲಿ ವರ್ಷಕ್ಕೆ ೧.೩೫ ಕೋಟಿ ಯುವಕರು ನಿರುದ್ಯೋಗಿ ಪಟ್ಟಿಗೆ ಸೇರುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಕನಿಷ್ಠ ಎರಡು ಲಕ್ಷ ಉದ್ಯೋಗವೂ ಸೃಷ್ಠಿಸಲಿಲ್ಲ. ಬದಲಿಗೆ ಹುದ್ದೆಯಲ್ಲಿರುವವರನ್ನು ಬೀದಿಗೆ ತಳ್ಳುವ ವ್ಯವಸ್ಥೆ ಜಾರಿಗೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವೇ ದಿನಗಳಲ್ಲಿ ವಿಸ್ಟ್ರಾನ್‌ ಕಂಪನಿಯ ಉತ್ಪಾದನೆ ಪುನರಾರಂಭ: ಸಚಿವ ಜಗದೀಶ್‌ ಶೆಟ್ಟರ್‌

ದೇಶದಲ್ಲಿ ಬಡತನ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಜ್ವಲಂತ ಸಮಸ್ಯೆಗಳು ಜನತೆಯನ್ನು ಕಾಡುತ್ತಿವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯ ದಿನಗಳು ಬರುತ್ತವೆ ಎಂದರು. ಅದರೆ ಒಳ್ಳೆಯ ದಿನಗಳು ಬಂದಿದ್ದು ಮಾತ್ರ ದೇಶದ ಬಂಡವಾಳಶಾಹಿ ಶೋಷಕರಾದ ಅಂಬಾನಿ ಮತ್ತು ಅದಾನಿಗಳಿಗೆ ಎಂದು ಟೀಕಾಪ್ರಹಾರ ನಡೆಸಿದ ಪಾಣೆಗಾಂವ, ದುಡಿಯುವ ಎಲ್ಲಾ ಕೈಗಳಿಗೂ ಉದ್ಯೋಗ ನೀಡಬೇಕು. ಉದ್ಯೋಗ ನೀಡುವವರೆಗೆ ನಿರುದ್ಯೋಗ ಭತ್ತೆ ಜಾರಿಗೊಳಿಸಬೇಕು. ಖಾಲಿ ಇರುವ ವಿವಿಧ ಇಲಾಖೆಗಳ ಹುದ್ದೆಗಳನ್ನು ಭರ್ತಿ ಮಾಡಬೇಕು. ಉದ್ಯೋಗ ಮೂಲಭೂತ ಹಕ್ಕಾಗಬೇಕು. ಖಾಯಂ ಉದ್ಯೋಗ ಖಾತ್ರಿಪಡಿಸಬೇಕು. ಶ್ರಮಾದಾರಿತ ಕಾರ್ಖಾನೆಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಮುಖ್ಯ ಅತಿಥಿಯಾಗಿದ್ದ ನಗರದ ಗಣ್ಯವ್ಯಕ್ತಿ ವೀರಭದ್ರಪ್ಪ ಕೇಶ್ವಾರ ಅವರು ನಿರುದ್ಯೋಗ ಸಮಸ್ಯೆಯ ವಿರುದ್ಧ ಸಹಿ ಹಾಕುವ ಮೂಲಕ ಚಳುವಳಿಗೆ ಚಾಲನೆ ನೀಡಿದರು. ಎಐಡಿವೈಒ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್, ಉಪಾಧ್ಯಕ್ಷ ರಾಜು ಒಡೆಯರ, ಗೌತಮ ಪರತೂರಕರ, ಶ್ರೀಶೈಲ ಕೆಂಚಗುಂಡಿ, ವಿಠ್ಠಲ ರಾಠೋಡ, ಬಸವರಾಜ ನಾಟೇಕರ, ಸಾಯಬಣ್ಣ ಯಾದವ, ಮಹೆಬೂಬ ಪಟೇಲ ಪಾಲ್ಗೊಂಡಿದ್ದರು.

ಕೆಲವೇ ದಿನಗಳಲ್ಲಿ ವಿಸ್ಟ್ರಾನ್‌ ಕಂಪನಿಯ ಉತ್ಪಾದನೆ ಪುನರಾರಂಭ: ಸಚಿವ ಜಗದೀಶ್‌ ಶೆಟ್ಟರ್‌

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here