ನರೋಣಾ ಪೊಲೀಸರ ಕಾರ್ಯಾಚರಣೆ: ಕಳ್ಳ ಅಣ್ಣತಮ್ಮಂದಿಬ್ಬರು ಅಂದರ್

2
202

ಕಲಬುರಗಿ: ನರೋಣಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಆರೋಪದಲ್ಲಿ ಇಬ್ಬರು ಅಣ್ಣತಮ್ಮಂದಿರನ್ನು ಬಂಧಿಸಿ 46 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಕಮಸರ್‌ ನಾಯಕ್‌ ತಾಂಡಾದ ನಿವಾಸಿಗಳಾದ ಸುರೇಶ ಗಂಗಾರಾಮ ಚವ್ಹಾಣ, (25) ಹಾಗೂ ಅಪ್ಪು ಗಂಗಾರಾಮ ಚವ್ಹಾಣ (22) ಬಂಧಿತ ಆರೋಪಿಗಳು. ಇಬ್ಬರೂ ಅಣ್ಣತಮ್ಮಂದಿದಿರು ಎಂದು ತಿಳಿದುಬಂದಿದರು ಎಂದು ತಿಳಿದುಬಂದಿದೆ. 18 ರಂದು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಾ (ಬಿ) ಕ್ರಾಸ್‌ ಹತ್ತಿರ ಅನುಮಾನಸ್ಪದವಾಗಿ ಇಬ್ಬರು ಓಡಾಡುತ್ತಿರುವುದನ್ನು ಗಮನಿಸಿ ಪೊಲೀಸರು ವಿಚಾರಣೆ ನಡೆಸಿದ್ದಾಗ ಇಬ್ಬರು ಕಳ್ಳರೆಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Contact Your\'s Advertisement; 9902492681

ಬಂಧಿತ ಆರೋಪಿಗಳು 2019ನೇ ಸಾಲಿನಲ್ಲಿ ಡಿಸೆಂಬರ್‌ ತಿ೦ಗಳಲ್ಲಿ ಕಡಗಂಚಿ ಗ್ರಾಮ ಸೀಮಾಂ೦ತರದಲ್ಲಿ ನಿಲ್ಲಿಸಿದ ಜೆ.ಸಿಬಿ ಯಂತ್ರದ 65 ಲೀಟರ್‌ ಡೀಜೆಲ್‌ ಮತ್ತು ಆದರ ಬಿಡಿ ಭಾಗಗಳು ಕಳ್ಳತನ ಮಾಡಿದ್ದು, 2020ನೇ ಸಾಲಿನಲ್ಲಿ ಫೆಬ್ರುವರಿ ತಿ೦ಗಳಲ್ಲಿ ವ್ಹಿಕೆ ಸಲಗರ ಗ್ರಾಮದ ವಜ್ರೇಶ್ವರಿ ವೈನ್‌ ಶಾಪ್‌ ದಿ೦ದ 24710 ರೂ ಮೌಲ್ಯದ ಮದ್ಯದ ಬಾಟಲಿಗಳು ಕಳ್ಳತನ ಮಾಡಿದ್ದು, ಇದೇ 13 ರಂದು ರಾತ್ರಿ ಗೋಳಾ (ಬಿ) ತಾಂಡಾದಲ್ಲಿ ಎರಡು ಕಿರಾಣಿ ಅ೦ಗಡಿಗಳು ಕಳ್ಳತನ ಮಾಡಿ ನಂತರ ಒ೦ದು ಪಂಚರ್‌ ಅಂಗಡಿಯಿಂದ ಒಂದು ದೊಡ್ಡ ಟ್ರ್ಯಾಕ್ಟರ್‌ ಟಾಯರ್‌ ಕಳ್ಳತನ ಮಾಡಿದ್ದು  ಬೆಳಕಿಗೆ ಬಂದಿದೆ.

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಕಿಡಿಗೇಡಿಗಳ ಬಂಧನಕ್ಕೆ ಭೀಮ್ ಆರ್ಮಿ ಆಗ್ರಹ

ಬಂಧಿತರಿಂದ ಒಂದು ದೊಡ್ಡ ಟ್ರ್ಯಾಕ್ಟ್‌ರ್‌ ಟಾಯರ್‌ 25000,  ಒಂದು ದೊಒಡ್ಡ ಎಕ್ಸಿಡ್‌ ಕಂಪನೀಯ ಬ್ಯಾಟರಿ 20000, 1800. ರೂ ನಗದು ಸೇರಿ ಒಟ್ಟು 46800 /- ರೂ ಕಿಮ್ಮತ್ತಿನ ಸಾಮಾನುಗಳನ್ನು ಜಪ್ತಿ ಮಾಡಿಕೊಂಡಿಕೊಂಡು ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನರೋಣಾ ಪೊಲೀಸ್ ಠಾಣೆಯ ಪಿ.ಎಸ್‌.ಐ ಉದಂಡಪ್ಪ, (ಕಾ.ಸೂ) ಪಿ.ಎಸ್‌.ಐ ಭಾಗಣ್ಣಾ, ಎಎಸ್ಐ ಚಂದ್ರಕಾಂತ, ದೇವಿಂದ್ರಪ್ಪಾ ಸಿಬ್ಬಂದಿಗಳಾದ ಶರಣಗೌಡ, ಭಗವ೦ತರಾಯ, ಶಾಂತಕುಮಾರ, ರಾಮಲಿಂಗ, ಸತೀಶ, ಬಸವರಾಜ, ಶರಣಬಸಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಸ್ಥಳಾಂತರ ಕೆಲಸಕ್ಕೆ ಕೈ ಹಾಕಿದರೆ ಉಗ್ರ ಹೋರಾಟ ಎಚ್ಚರಿಕೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here