ಸುರಪುರ: ಶಾಲೆ ಎಂದರೆ ದೇವಾಲಯವಿದ್ದಂತೆ ಯಾವುದೇ ಶಾಲೆಯ ಅಭೀವೃಧ್ದಿಯಾಗಬೇಕಾದರೆ ಎಲ್ಲರ ನೆರವು ನೀಡುವುದು ಮುಖ್ಯ ಎಂದು ಕ್ಷೇತ್ರ ಸಮನ್ವಾಯಧಿಕಾರಿ ಅಮರೇಶ ಕುಂಬಾರ ಮಾತನಾಡಿದರು.
ಶಾಲೆಯ ಅಭೀವೃಧ್ದಿಗೆ ಎಲ್ಲರು ಕೈಜೋಡಿಸುವುದು ಮುಖ್ಯ: ಅಮರೇಶ ಕುಂಬಾರ
ತಾಲೂಕಿನ ಸತ್ಯಂಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲೆಗಾಗಿ ನಾವು ನೀವು ಯೋಜನೆ ಅಡಿಯಲ್ಲಿ ಕಂಪ್ಯೂಟರ್ ಕುರ್ಚಿ ಟೇಬಲ್ ಫ್ಯಾನ್ ಊಟದ ತಟ್ಟೆ ಹೀಗೆ ಅನೇಕ ಉಪಕರಣಗಳನ್ನು ದೇಣಿಗೆ ನೀಡಿದ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಿ ಮಾತನಾಡಿ,ಒಂದು ಶಾಲೆಗೆ ಅವಶ್ಯಕವಾದ ಸಲಕರಣೆಗಳನ್ನು ಕೇವಲ ಸರಕಾರವೇ ನೀಡಲಿ ಎನ್ನುವ ಬದಲು ಪೋಷಕರಾದ ನಾವುಕೂಡ ಶಾಲೆಯ ಅಭೀವೃಧ್ಧಿಗೆ ಮುಖ್ಯ ಎನಿಸಲಿದೆ.ಅದರಂತೆ ಈಗ ನಮ್ಮ ಸತ್ಯಂಪೇಟೆಯ ಶಾಲೆಗೆ ವಿವಿಧ ಉಪಕರಣಗಳನ್ನು ದೇಣಿಗೆ ನೀಡಿದ ಮಹನಿಯರ ಸೇವೆಯನ್ನು ಮೆಚ್ಚುವಂತಾಗಿದ್ದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ದೇಣಿಗೆ ನೀಡಿದ ಅದಾನಿ ಗ್ರುಪ್‌ನ ವೀರೇಂದ್ರ ಸಿಂಗ್ ರಾಜಾ ಅಪ್ಪಾರಾವ್ ನಾಯಕ ಹಯ್ಯಾಳಪ್ಪ ನಿಂಗಣ್ಣ ಹೊಸ್ಮನಿ ಸಿದ್ದಪ್ಪ ಮಂಜುನಾಯಕ ಕಾರಾಗೃಹ ಅಧಿಕಾರಿ ಬಸವರಾಜ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಬಿಆರ್‌ಪಿ ಖಾದರಪಟೇಲ್ ಎಪಿಎಫ್ ಸಂಯೋಜಕ ಸುರೇಶಗೌಡ ಸಿಆರ್‌ಪಿ ಚನ್ನಪ್ಪ ಕ್ಯಾದಗಿ ಶಿಕ್ಷಕರಾದ ರೇಣುಕಾ ವಾಲಿ ಪಿಡ್ಡಮ್ಮ ರಾಜೇಶ್ವರಿ ಆರತಿ ಅತಿಯಾ ಪರ್ವೀನ್ ರಹೀಮ್ ಎಪಿಎಫ್ ಮಲ್ಲಿಕಾರ್ಜುನ ಅನ್ವರ ಜಮಾದಾರ್ ಶಿವರುದ್ರ ಉಳ್ಳಿ ಇತರರಿದ್ದರು.