ಸಾಮಾನ್ಯ ಕಾನೂನುಗಳ ತಿಳಿಯಲು ಪದವಿ ವಿದ್ಯಾರ್ಥಿಗಳಿಗೆ ಪೊಲೀಸ್ ಕಿರು ಪರೀಕ್ಷೆ

2
30

ಸುರಪುರ: ಸಂಚಾರಿ ನಿಯಗಳು ಸೇರಿದಂತೆ ವಿವಿಧ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಇರುವ ಮಾಹಿತಿಯ ಕುರಿತು ಸುರಪುರ ಪೊಲೀಸ್ ಉಪ ವಿಭಾಗದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಲಿಖಿತ ಕಿರು ಪರೀಕ್ಷೆ ನಡೆಸಲಾಯಿತು.

ನಗರದ ಶ್ರೀಪ್ರಭು ಮಹಾವಿದ್ಯಾಲಯ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಹಾಗು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಗಳಲ್ಲಿ ಕಿರು ಪರೀಕ್ಷೆ ನಡೆಸಲಾಯಿತು.ಸುರಪುರ ನಗರದಲ್ಲಿ ಒಟ್ಟು ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Contact Your\'s Advertisement; 9902492681

ದಲಿತ ಸಂಘಟನೆ ಒಕ್ಕೂಟದಿಂದ ಎರಡು ದಿನಗಳ ಚಿಂತನ ಮಂಥನ ಕಾರ್ಯಾಗಾರ

ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಒಂದರಲ್ಲಿಯೇ ತೊಂಬತ್ತಕ್ಕು ಹೆಚ್ಚು ವಿದ್ಯಾರ್ಥಿಗಳು ಕಿರು ಪರೀಕ್ಷೆಗೆ ಹಾಜರಾಗಿದ್ದರು.ಈ ಕುರಿತು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ,ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳು ಹಾಗು ಪೋಕ್ಸೊ ಸೇರಿದಂತೆ ವಿವಿಧ ಕಾನೂನುಗಳ ಬಗ್ಗೆ ಇರುವ ಅರಿವನ್ನು ಕುರಿತು ಈ ಕಿರು ಪರೀಕ್ಷೆ ನಡೆಸಲಾಗುತ್ತಿದ್ದು,ಸುರಪುರ ಪೊಲೀಸ್ ಉಪ ವಿಭಾಗದ ಒಟ್ಟು ೧೫ ಕಾಲೇಜುಗಳಲ್ಲಿ ಇಂದು ಈ ಕಾರ್ಯಕ್ರಮ ನಡೆಯಲಿದೆ, ಪ್ರತಿ ಕಾಲೇಜಿನಲ್ಲಿ ಪ್ರಥಮ ಬಂದ ೫ ಜನ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ವೆಂಕೋಬ ಬಿರಾದಾರ್ ಅವರು ಮಾತನಾಡಿ,ಪೊಲೀಸ್ ಇಲಾಖೆಯಿಂದ ನಡೆಸಿದ ಈ ಕಿರು ಪರೀಕ್ಷೆ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ,ಇದರಿಂದ ವಿದ್ಯಾರ್ಥಿಗಳು ಅನೇಕ ಕಾನೂನುಗಳ ಬಗ್ಗೆ ತಿಳಿಯಲು ಅವಕಾಶವಾಗಿದೆ,ಅಲ್ಲದೆ ಇದೇ ರೀತಿ ಪ್ರತಿ ವರ್ಷ ಪರೀಕ್ಷೆಗಳನ್ನು ನಡೆಸುತ್ತಿದ್ದರೆ ಸಂಚಾರಿ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳುವ ಅವಶ್ಯಕತೆಯೆ ಇರುವುದಿಲ್ಲ.ಅಲ್ಲದೆ ಅನೇಕ ಅಪಘಾತಗಳನ್ನು ತಡೆಯಲು ಈ ಕಾರ್ಯಕ್ರಮ ತುಂಬಾ ಅವಶ್ಯಕವಾಗಿದೆ ಎಂದರು.

ಇನ್ಸಿಟ್ಯೂಟ್‌ ಆಫ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ ಅಧ್ಯಕ್ಷರಾಗಿ ಸಿಎ ಬಿ ಟಿ ಶೆಟ್ಟಿ

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ದೇವಮ್ಮ ಹಾಗು ಮಾಳಪ್ಪ ಕೂಡ ಲಿಖಿತ ರಸಪ್ರಶ್ನೆ ಕಾರ್ಯಕ್ರಮದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುರಪುರ ಠಾಣೆ ಪಿಐ ಎಸ್.ಎಮ್.ಪಾಟೀಲ್ ಹಾಗು ಕಾಲೇಜಿನ ಅನೇಕ ಜನ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here