ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.

0
18

ಸುರಪುರ: ನಗರದ ರಂಗಂಪೇಟೆಯ ಆಟೋ ಸ್ಟ್ಯಾಂಡ್ ಬಳಿಯಲ್ಲಿನ ಛತ್ರಪತಿ ಶಿವಾಜಿ ನಾಮಫಲಕದ ಬಳಿಯಲ್ಲಿ ಶಿವಾಜಿ ಮಹಾರಾಜರ ೩೯೪ನೇ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿಯವರು ನಾಮಫಲಕಕ್ಕೆ ಮಾಲಾರ್ಪಣೆ ಮಾಡಿದರು,ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷರು,ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಶಿವಾಜಿ ಮಹಾರಾಜರ ಹೆಸರು ಅಜರಾಮರವಾಗಿದೆ,ಅಲ್ಲದೆ ಅವರು ಅಪ್ಪಟ ದೇಶಪ್ರೇಮಿಯಾಗಿದ್ದರು. ತಮ್ಮ ಶೌರ್ಯ ಪ್ರಕಾರಕ್ರಮಕ್ಕೆ ಹೆಸರುವಾಸಿಯಾಗಿದ್ದರು,ಅಲ್ಲದೆ ಅವರ ತಾಯಿ ಜಿಜಾಬಾಯಿಯಿಂದ ಪ್ರೇರಣೆಗೊಂಡಿದ್ದ ಶಿವಾಜಿಯು ಭಾರತದ ಇತಿಹಾಸದಲ್ಲಿ ಅಚ್ಚಾಗಿದ್ದಾರೆ ಎಂದರು.

Contact Your\'s Advertisement; 9902492681

ಸಾಮಾನ್ಯ ಕಾನೂನುಗಳ ತಿಳಿಯಲು ಪದವಿ ವಿದ್ಯಾರ್ಥಿಗಳಿಗೆ ಪೊಲೀಸ್ ಕಿರು ಪರೀಕ್ಷೆ

ಇದೇ ಸಂದರ್ಭದಲ್ಲಿ ಶಿವಾಜಿ ಯುವಕ ಮಂಡಳಿ ಮುಖಂಡ ಮುರಳಿಧರ ಅಂಬುರೆ ಮಾತನಾಡಿ,ಶಿವಾಜಿ ಮಹಾರಾಜರ ರಕ್ತದಲ್ಲಿಯೇ ದೇಶಭಕ್ತಿ ಇತ್ತು,ಅವರು ಚಿಕ್ಕ ವಯಸ್ಸಿನಲ್ಲಿಯೆ ಔರಂಗಜೇಬ್ ಮತ್ತು ನಿಜಾಮರೊಡನೆ ಯುದ್ಧ ಮಾಡಿ ದೇಶ ರಕ್ಷಣೆ ಮಾಡಿದ ಮಹಾನ್ ಪರಾಕ್ರಮಿಯಾಗಿದ್ದರು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಶಂಕರನಾಯಕ ವೇಣುಗೋಪಾಲ ಜೆವರ್ಗಿ ರಾಮ್ ಸೇನಾ ತಾಲೂಕು ಅಧ್ಯಕ್ಷ ಶರಣು ನಾಯಕ ರೈತ ಮುಖಂಡ ಶಿವರಾಜ ಕಲಕೇರಿ ಶರಣು ನಾಯಕ ಶಿವಾಜಿ ಯುವಕ ಮಂಡಳಿಯ ಪ್ರವೀಣ ವಿಭೂತೆ ವಿನೋದ ಕಾಂಬ್ಳೆ ಕಿರಣ ಪಾಡಮುಖಿ ಪರಶೂರಾಮ ಪಾಣಿಭಾತೆ ಮಂಜು ದೋತ್ರೆ ಭರತ ಟೊಣಪೆ ಕಿಶನ್ ಟೊಣಪೆ ಹಣಮಂತ ಟೊಣಪೆ ಪವನ ಪಾಣಿಭಾತೆ ಸತೀಶ ಬಾಸುತ್ಕರ್ ಮಯೂರ ಹೋಳ್ಕರ್ ಹರೀಶ್ ತ್ರಿವೇದಿ ಆನಂದ ಕುಂಬಾರ ಶ್ರೀನಿವಾಸ ದಾಯಪುಲೆ ದೀಪಕ್ ಚವ್ಹಾಣ ಸೇರಿದಂತೆ ಅನೇಕರಿದ್ದರು.

ಪಂಚಮಸಾಲಿ ಸಮುದಾಯ 2ಎಗೆ ಸೇರಿಸುವುದಕ್ಕೆ ವಿರೋಧಸಿಲ್ಲ: ಸಚಿವ ಜಗದೀಶ್ ಶೆಟ್ಟರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here