ಸುರಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಸುರಪುರ ಎಬಿವಿಪಿ ಶಾಖೆಯ ಮುಖಂಡ ಹಣಮಂತ್ರಾಯ ಲಾಠಿಯವರನ್ನು ನೇಮಕಗೊಳಿಸಲಾಗಿದೆ.ಈ ಕುರಿತು ಘೋಷಣೆ ಹೊರಡಿಸಿರುವ ಎಬಿವಿಪಿ ರಾಜ್ಯ ಅಧ್ಯಕ್ಷ ಡಾ:ವಿರೇಶ ಬಾಳಿಕಾಯಿಯವರು ರಾಯಚೂರಿನಲ್ಲಿ ನಡೆದ ೪೦ನೇ ಎಬಿವಿಪಿ ರಾಜ್ಯ ಸಮ್ಮೇಳನದಲ್ಲಿ ಹಣಮಂತ್ರಾಯ ಲಾಠಿಯವರನ್ನು ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕಗೊಳಿಸಿದ್ದಾಗಿ ಘೋಷಿಸಿದ್ದಾರೆ.ಲಾಠಿ ನೇಮಕಕ್ಕೆ ಸುರಪುರ ತಾಲೂಕು ಶಾಖೆಯ ಎಲ್ಲಾ ಎಬಿವಿಪಿ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.