ಸುರಪುರ: ಹುಣಸಗಿ ತಾಲೂಕಿನ ರಾಯಗೇರಾ ಗ್ರಾಮದ ಹೊರ ವಲಯದಲ್ಲಿ ಕೋಳಿ ಪಂದ್ಯಾಟ ನಡೆದ ಬಗ್ಗೆ ಖಚಿತ ಮಾಹಿತಿ ಮೇರೆ ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಕೋಳಿ ಪಂದ್ಯಾಟದಲ್ಲಿ ತೊಡಗಿದ್ದ ೩೦ ಜನರನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ ಸುಮಾರು ೨೨ ಹುಂಜಗಳನ್ನು ಮತ್ತು ೩೦ ಬೈಕ್ ಹಾಗು ೨೨ ಸಾವಿರ ನಗಗದ ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದ್ದು,ದಾಳಿಯಲ್ಲಿ ಕೊಡೇಕಲ್ ಠಾಣೆ ಪಿಎಸೈ ಬಾಷಯಮಿಯಾ ಹಾಗು ಪೊಲೀಸ್ ಪೇದೆಗಳು ಇದ್ದರು.ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.