ನಮಗೆ ಬೇಕಾದ ಅಮೂಲ್ಯ ರತ್ನಗಳನ್ನು ಹೊಸ ಶಿಕ್ಷಣ ನೀತಿಯಿಂದ ಪಡೆದುಕೊಳ್ಳಲು ಸಾಧ್ಯ

0
72

ಕಲಬುರಗಿ: ನಮಗೆ ಬೇಕಾದ ಅಮೂಲ್ಯ ರತ್ನಗಳನ್ನು ಈ ಹೊಸ ಶಿಕ್ಷಣ ನೀತಿಯಿಂದ ಪಡೆದುಕೊಳ್ಳಲು ಸಾಧ್ಯವಿದೆ ಎಂದು ರಾಜ್ಯ ಸಭಾ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ ಅಭಿಪ್ರಾಯಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯ ಮತ್ತು ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನದ ಸಹಯೋಗದಲ್ಲಿ ’ಎನ್.ಇ.ಪಿ(ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦)ಯಲ್ಲಿ ಉದಯೋನ್ಮುಖ ಶಿಕ್ಷಕರ ಪಾತ’ ಎಂಬ ವಿಷಯದ ಕುರಿತು ಸೋಮವಾರ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ನಾವು ಮಕ್ಕಳಿಗೆ ಅಂಧಕಾರದ ಶಿಕ್ಷಣ ನೀಡುತ್ತಿದ್ದೆವೆ. ನಾವು ಮಕ್ಕಳನ್ನು ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ನೀಡದೆ, ಅವರ ಜ್ಞಾನ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ನಿಡುವದು ಅವಶ್ಯವಾಗಿದೆ ಎಂದರು.

Contact Your\'s Advertisement; 9902492681

ರಾಯಗೇರಾ ಸೀಮೆಯಲ್ಲಿ ಕೋಳಿ ಪಂದ್ಯದ ಅಡ್ಡೆ ಮೇಲೆ ದಾಳಿ: 30 ಜನ ವಶಕ್ಕೆ

ಜ್ಞಾನ ನಿರ್ಭಯವಾದದ್ದು, ಅಂಥ ಜ್ಞಾನದ ಬೇಳಕು ಎಲ್ಲ ವರ್ಗದ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜಾತಿ ಭೇದ, ಮೇಲು-ಕೀಳು, ಶ್ರೀಮಂತ-ಬಡವ, ಸ್ಪೃಶ್ಯ -ಅಸ್ಪೃಶ್ಯ ಇಂಥ ಭಾವನೆಗಳನ್ನು ಕಿತ್ತೊಗೆದು, ಎಲ್ಲಿ ಮಾನವೀಯತೆಯ ಅಭಾವವಿದೆಯೋ ಅಲ್ಲಿ ತೃಪ್ತಿಪಡಿಸುವಂತಹ ಗುಣ ಹೊಂದಿರುವ ಮಕ್ಕಳನ್ನು ನಿರ್ಮಾಣ ಮಾಡುವದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು.

ಶರಣಬಸವ ವಿಶ್ವವಿದ್ಯಾಲಯ ಕುಲಸಚಿವ ಡಾ.ಅನೀಲಕುಮಾರ ಜಿ.ಬಿಡವೆ ವಿಚಾರ ಮಂಡಿಸುತ್ತಾ, ಭಾರತ ದೇಶ ಇಡಿ ವಿಶ್ವದಲ್ಲಿಯೇ ಅತಿ ಹೆಚ್ಚು ಯುವಜನಾಂಗ ಹೊಂದಿರುವ ರಾಷ್ಟ್ರವಾಗಿದೆ ಎಂದು ನಾವೆಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಅಂತಹ ರಾಷ್ಟ್ರಕ್ಕೆ ಗುಣಾತ್ಮಕ ಶಿಕ್ಷಣ, ಅನ್ವೇಷಣೆ ಶಿಕ್ಷಣ, ಸಂಶೋಧನಾತ್ಮಕ ಶೀಕ್ಷಣ ಹಾಗೂ ಆತ್ಮಸ್ಥೈರ್ಯ ತುಂಬುವ ಶಿಕ್ಷಣದ ಅವಶ್ಯಕತೆಯನ್ನು ಈ ಹೊಸ ಶಿಕ್ಷಣ ನೀತಿ ಪೂರೈಸುತ್ತದೆ ಎಂದು ಅಭಿಪ್ರಾಯಪಟ್ಟರು.

ವೀರಶೈವ ಜಂಗಮ ಅರ್ಚಕ ಪುರೋಹಿತರ ಸಂಘದ ಪದಾಧಿಕಾರಿಗಳ ನೇಮಕ

ಬಹು ಶೀಸ್ತಿನ ವ್ಯಕ್ತಿತ್ವಕ್ಕೆ ಮತ್ತು ಕೌಶಲ್ಯಕ್ಕೆ ತಕ್ಕಂತೆ ಹುದ್ದೆಗಳನ್ನು ಮತ್ತು ಅವಕಾಶಗಳನ್ನು ಈ ಶಿಕ್ಷಣ ನೀತಿಯಿಂದ ಪಡೆದುಕೊಳ್ಳಬಹುದಾಗಿದೆ. ಶೈಕ್ಷಣಿಕ ತಾರತಮ್ಯ ನಿರ್ಮೂಲನೆಗೊಳಿಸುವ ಉದ್ದೇಶದಿಂದ ಈ ಹೊಸ ಶಿಕ್ಷಣ ನೀತಿ ಜಾರಿಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಸರ್ವರೂ ಸಮಾನವಾದ ಅವಕಾಶಗಳನ್ನು ಪಡೆಯುವಲ್ಲಿ ಸಫಲರಾಗುತ್ತಾರೆ ಎಂದರು.

ಉನ್ನತ ಶಿಕ್ಷಣ ಪದ್ಧತಿಯಲ್ಲಿ, ಬಹುಶಿಸ್ತಿನ ಶಿಕ್ಷಣ ಪದ್ಧತಿಯನ್ನು ಹೆಚ್ಚು ಹೆಚ್ಚು ರೀತಿಯಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಅನ್ವಯಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಪೂಜ್ಯ ಅಪ್ಪಾಜಿಯವರು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಬಹುಶಿಸ್ತಿನ ಕಲಿಕೆಯನ್ನು ಅಳವಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ಮತ್ತು ವೈದ್ಯಕೀಯ ಶಿಕ್ಷಣ ಆರಂಭಿಸುವ ಅಭಿಲಾಷೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ೨೦೨೦ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೈಕ್ಷಣಿಕ ಕೇತ್ರಕ್ಕೆ ಹೊಸ ಚೌಕಟ್ಟು ನೀಡಿದೆ ಎಂದರು. ಶರಣಬಸವ ವಿಶ್ವವಿದ್ಯಾಲಯದ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ

ನಮ್ಮ ದೇಶ ಹೊಸ ಪರಿವರ್ತನೆ ಕಡೆಗೆ ಸಾಗುತ್ತಿದೆ. ಹೊಸ ಶಿಕ್ಷಣ ನೀತಿ ನಮ್ಮೆಲ್ಲರನ್ನು ಮುನ್ನೆಡೆಸುವ ಆಶಾಕಿರಣವಾಗಿದೆ. ಈ ಶಿಕ್ಷಣ ನೀತಿ ಜಾರಿಗೆ ತರುವಲ್ಲಿ ಸರ್ಕಾರದ ಕೈ ಜೊಡಿಸುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರದ ಜಂಟಿ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀ.

ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಜಿ.ಡೊಳ್ಳೆಗೌಡರ್, ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಡೀನ್‌ರಾದ ಡಾ. ಸುಧಾಕರ ವೆನು ತಮ್ಮ ವಿಚಾರ ಮಂಡಿಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ. ಶಂಕರ ವಿಚಾರ ಮಂಡಿಸಿದರು.

15 ದಿನದಲ್ಲಿ ನೆರೆಯ ರಾಜ್ಯಗಳಿಂದ ಮರಳಿದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ

ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ್, ಗೋದುತಾಯಿ ಪದವಿ ಮಹಿಳಾ ಮಹಾವಿದ್ಯಾಲಯದ ಪಾಚಾರ್ಯೆ ಡಾ. ನೀಲಾಂಬಿಕಾ ಶೇರಿಕಾರ, ಶರಣಬಸವೇಶ್ವರ ಬಿ.ಎಡ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಗೀತಾ ಇಂಗಿನಶೆಟ್ಟಿ, ಗೋದುತಾಯಿ ಬಿ.ಎಡ್ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಬಸವರಾಜೇಶ್ವರಿ ಇಂದುರ, ಬೀದರದ ದೊಡ್ಡಪ್ಪ ಅಪ್ಪಾ ಬಿ.ಎಡ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಚಯ್ಯ ಎಸ್. ಮಠಪತಿ, ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನದ ಸಂಯೋಜಕರಾದ ಕೃಷ್ಣ ಪ್ರಸಾದ ಕೆ.ಎನ್, ಭೀಮರೆಡ್ಡಿ ಇತರರು ಇದ್ದರು.

ವಿದ್ಯಾರ್ಥಿನಿ ಉಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಮಲ್ಲಿಕಾರ್ಜುನ ವಸ್ತ್ರದಮಠ್ ಪ್ರಾರ್ಥನೆ ಗೀತೆ ಹಾಡಿದರು. ಪ್ರೊ. ಲಕ್ಷ್ಮಿಕಾಂತ ಖಂಡಾಳೆ ಸ್ವಾಗತಿಸಿದರು. ವಿದ್ಯಾಭಾರತಿ ರಾಜ್ಯ ಕಾರ್ಯದರ್ಶಿಯಾದ ವಸಂತ ಮಾಧವ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here