ಕಲಬುರಗಿ: ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಾಲಬಾಧೆಯಿಂದ ನಿನ್ನೆ ದಿನ ಆತ್ಮಹತ್ಯೆ ಮಾಡಿಕೊಂಡ ವಿಶ್ವಗಂಗಾ ಶಿಕ್ಷಣ ಸಂಸ್ಥೆಯ ಶಂಕರ ಬಿರಾದಾರ ಕುಟುಂಬಕ್ಕೆ 50,00, 000 ರೂ ನೀಡಬೇಕು ಎಂದು ಅವರ ಭಾವಚಿತ್ರ ಮತ್ತು ಸಂಸ್ಥೆಯ ಬ್ಯಾನರ್ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಖಾಸಗಿ ಶಾಲಾ ವಾಹನದ ಕಂತು ಮತ್ತು ಇತರೆ ಕಂತುಗಳನ್ನು ಬ್ಯಾಂಕಿಗೆ ಕಟ್ಟಲಾಗುತ್ತಿಲ್ಲ. ಕಾರಣ ಮುಂದಿನ ಶೈಕ್ಷಣಿಕ ವರ್ಷ ಆರಂಭದವರೆಗೆ ಕಂತು ಕಟ್ಟಲು ಕಾಲಾವಕಾಶ ನೀಡುವಂತೆ ಸರ್ಕಾರ ಮಧ್ಯಸ್ತಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಇಲಾಖೆ ಶೀಘ್ರವಾಗಿ ಶಾಲೆಗಳ ನವೀಕರಣಕ್ಕೆ ವಿಧಿಸಿದ ನಿಯಮಾವಳಿ ಕೈ ಬಿಡಬೇಕು, ಪ್ರಸಕ್ತ ಸಾಲಿನ ಆರ್.ಟಿ.ಇ. ಹಣ ಕೂಡಲೇ ಬಿಡುಗಡೆ ಮಾಡಬೇಕು, 1ನೇ ತರಗತಿಯಿಂದ 10ನೇ ತರಗತಿವರೆಗೆ ಶಾಲೆಗಳನ್ನು ತೆರೆಯಲು ಅನುಮತಿ ನೀಡಬೇಕು, ಸರ್ಕಾರ ಕೂಡಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.
ಅಭಿವೃದ್ಧಿಗಾಗಿ ಒಬ್ಬರಿಗೆ ಒಂದೇ ಅಧಿಕಾರ ಸಾಕು
ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸುನಿಲ್ ಹುಡಗಿ ಜಿಲ್ಲಾ ಸಂಚಾಲಕ ಅರುಣಕುಮಾರ ಪೋಜಾಲ, ಸಾಹೇಬಗೌಡ ಪುರದಾಳ ಮತ್ತಿತರರು ಭಾಗವಹಿಸಿದ್ದರು.
ಆತ್ಮಹತ್ಯೆಗೆ ಯತ್ನ: ಈ ಮಧ್ಯೆ ಜೇವರ್ಗಿ ತಾಲ್ಲೂಕಿನ ಸುಂಬಡದ ಪ್ರಕಾಶ ಎಂಬುವರು ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದರು. ಇದರಿಂದಾಗಿ ಕೆಲಹೊತ್ತು ಶಿಕ್ಷಕರ ಮಧ್ಯೆ ಆತಂಕವುಂಟಾಯಿತು. ಅಲ್ಲಿಯೇ ಇದ್ದ ಪೊಲೀಸ್ ವಾಹನಸಲ್ಲಿ ಅಸ್ವಸ್ತಗೊಂಡ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಪ್ರಕಾಶ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.
ಅಭಿವೃದ್ಧಿಗಾಗಿ ಒಬ್ಬರಿಗೆ ಒಂದೇ ಅಧಿಕಾರ ಸಾಕು
ನೈತಿಕ ಧೈರ್ಯ ಅಗತ್ಯ: ಖಾಸಗಿ ಶಿಕ್ಷಣ ಸಂಸ್ಥೆಯವರು ನಡೆಸುವ ಹೋರಾಟ ನ್ಯಾಯಯುತವಾಗಿದೆ. ಆದರೆ ಕೋವಿಡ್ ಕಾರಣದಿಂದ ಸರ್ಕಾರದಿಂದ ಅವರಿಗೆ ನೆರವು ನೀಡಲು ಆಗುತ್ತಿಲ್ಲ. ಇನ್ಮೆರಡು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಯವರು ಹತಾಷೆರಾಗದೆ ನೈತಿಕಧೈರ್ಯ ತಂದುಕೊಳ್ಳಬೇಕು ಎಂದರು. ಬಿಸಿಲಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರಿಗೂ ಸಹ ತಲೆಸುತ್ತಿದಂತಾಗಿ ಕೊಂಚ ಹೊತ್ತು ಅವರು ಸಹ ವಿಶ್ರಾಂತಿ ಪಡೆದ ಘಟನೆ ನಡೆಯಿತು.
ಕೆ.ಕೆ.ಆರ್.ಡಿ.ಬಿ: ನಾಲ್ಕನೇ ಕಂತಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ
ನಾಳೆಯಿಂದ ಜನಪ್ರತಿನಿಧಿಗಳ ಮನೆ ಎದುರು ಬೊಬ್ಬೆ ಹೊಡೆಯುವ ಕಾರ್ಯಕ್ರಮ: ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕಡಗಳನ್ನು ಈಡೇಎಇಸುವಂತೆ ಆಗ್ರಹಿಸಿ ಶನಿವಾರದಿಂದ ಜನಪ್ರತಿನಿಧಿಗಳ ಮನೆ ಎದುರು ಬೊಬ್ಬೆ ಹಾಕುವ ಕಾರ್ಯಕ್ರಮ ರೂಪಿಸಲಾಗುವುದು ಎಂದು ಒಕ್ಕೂಟದ ವಿಭಾಗೀಯ ಅಧ್ಯಕ್ಷ. ಸುನಿಲ ಹುಡಗಿ ಇ-ಮೀಡಿಯಾ ಜೊತೆ ಮಾತನಾಡಿ ತಿಳಿಸಿದರು.