ಸುರಪುರ: ವೀಕಲಚೇತನರು ಹಾಗೂ ವಿಶೇಷ ಚೇತನರು ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಭಿಗಳಾಗಿ ಹಾಗೂ ಇತರರಿಗೆ ಮಾದರಿಯಾಗಿ ಜೀವನ ನಡೆಸಬೇಕು ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಿ ಪಾಟೀಲ್ ಹೇಳಿದರು.
ರಂಗಂಪೇಟೆಯ ಖಾಧಿ ಕೇಂದ್ರದ ಆವರಣದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಕನ್ನೆಳ್ಳಿ, ಸರ್ವಜ್ಞ ಸೇವಾ ಸಂಸ್ಥೆ ರಂಗಂಪೇಟ, ಸಾಮಾರ್ಥ್ಯ ಸಂಸ್ಥೆ ದೇವದುರ್ಗ ಸಹಯೋಗದೊಂದಿಗೆ ಆಯೋಜಿಸಿದ್ದ ವಿಕಲಚೇತನರ ತಪಾಸಣೆ ಹಾಗೂ ಫಿಜಿಯೊಥೆರೊಪಿ, ವಿಶೇಷ ಶಿಕ್ಷಣ ಸಾಧನ ಸಲಕರಣೆಗಳ ಬಗ್ಗೆ ಮಾಹಿತಿ ಶಿಭಿರ ಉದ್ಘಾಟಿಸಿ ಮಾತನಾಡಿ, ವಿಕಲಚೇತನರು ಅನೇಕ ಸರಕಾರದ ಅನೇಕ ಯೋಜನೆಗಳನ್ನು ಸಧುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಕಲಚೇತನರು ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಭಿಗಳಾಗಿ: ಮೀನಾಕ್ಷಿ ಪಾಟೀಲ್
ಬಸ್ ಪಾಸ್ ವ್ಯವಸ್ಥೆ, ಮಾಶಾಸನ, ಸಾಧನಸಲಕರಣೆಗಳ ಬಳಕೆ ಜೋತೆಗೆ ಪ್ರತಿ ಹಂತದಲ್ಲಿ ಮಿಸಲಾತಿ ಪಡೆಯುವಲ್ಲಿ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು. ಲಕ್ಷ್ಮೀಪೂರ ಮರಡಿ ಮಲ್ಲಿಕಾರ್ಜುನ ಶ್ರೀ ಗಿರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿ, ವಿಕಲಚೇತನರಿಗೆ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಆದರ್ಶವಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ವಿಕಲಚೇತನರ ಬಗ್ಗೆ ಸಹಾನುಭೂತಿ ಬೇಡ ಅವಕಾಶ ನೀಡಿ ಎಂದು ಹೇಳಿದರು, ವಿಕಲಚೇತನರ ಹಕ್ಕುಗಳ ಹೋರಾಟ ಸಮಿತಿಯ ವಿಭಾಗಿಯ ಅಧ್ಯಕ್ಷ ಸಂಗನಗೌಡ ಧನರೆಡ್ಡಿ ಮಾತನಾಡಿ, ವಿಕಲಚೇತನರ ಹಕ್ಕುಗಳು ಹಾಗೂ ಸೌಲಭ್ಯಗಳ ಬಗ್ಗೆ ಪ್ರತಿಯೊಬ್ಬರು ಪ್ರಶ್ನಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು: ಚುಟುಕು ಸಾಹಿತಿ ಬೀರಣ್ಣ ಸುರಪುರ
ಸರ್ವಜ್ಞ ಸೇವಾ ಸಂಸ್ಥೆಯ ಅಧ್ಯಕ್ಷ ಅಮರೇಶ ಕುಂಬಾರ, ಶರಣು ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜ ಕಲಕೇರಿ, ಎಂ.ಆರ್.ಡಬ್ಲ್ಯು, ಮಾಳಪ್ಪ ದೇವರಗೋನಾಲ, ಸಾಮರ್ಥ್ಯ ಸಂಸ್ಥೆಯ ಸಿನಿಯರ್ ಪ್ರೊಜೆಕ್ಟ್ ಆಫಿಸರ್ ಬಾಬುಮಿಯಾ, ಹಿರಿಯ ಯೋಜನಾಧಿಕಾರಿ ಅಶೋಕ ವೇದಿಕೆ ಮೇಲಿದ್ದರು. ಕಾರ್ಯಕ್ರಮವನ್ನು ಹಣಮಂತ್ರಯ ದೇವತ್ಕಲ್ ನಿರುಪಿಸಿದರು, ಪ್ರವೀಣ ಜಕಾತಿ ಸ್ವಾಗತಿಸಿದರು, ದೇವರಾಜ ನಂದಗೀರಿ ವಂದಿಸಿದರು.