ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು: ಚುಟುಕು ಸಾಹಿತಿ ಬೀರಣ್ಣ ಸುರಪುರ

1
30

ಸುರಪುರ: ಮನುಷ್ಯನು ಸೇರಿದಂತೆ ಭೂಮಿಯ ಮೇಲೆ ಸಕಲ ಜೀವಿಗಳು ಬದುಕಲು ಉತ್ತಮ ವಾತಾವರಣ ತುಂಬಾ ಅವಶ್ಯ ಇಂದು ಪರಿಸರದ ಮೇಲಾಗುತ್ತಿರುವ ಪರಿಣಾಮದಿಂದಾಗಿ ಅನೇಕ ನೈಸರ್ಗಿಕ ದುರ್ಘಟನೆಗಳು ಸಂಭವಿಸುತ್ತಿದ್ದು ಇವುಗಳನ್ನು ಸಂಭವಿಸದಂತೆ ನೋಡಿಕೊಳ್ಳಲು ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಚುಟಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬೀರಣ್ಣ.ಬಿ.ಕೆ. ಹೇಳಿದರು.

ನಗರದ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ಅಡಿ ಹಮ್ಮಿಕೊಂಡಿದ್ದ ಪರಿಸರ ಕಾಳಜಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿ ನಶಿಸುತ್ತಿರುವ ಅರಣ್ಯದಿಂದಾಗಿ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗಿ ಜಾಗತಿಕ ತಾಪಮಾನ ಹೆಚ್ಚಳ,ವಾಯು ಮಾಲಿನ್ಯ ಇತ್ಯಾದಿ ಅನೇಕ ರೀತಿಯ ಪರಿಸರದ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು ನಾವು ಉಸಿರಾಡುತ್ತಿರುವ ಗಾಳಿ,ಕುಡಿಯುವ ನೀರು, ಮಣ್ಣು ಎಲ್ಲವೂ ಕಲುಷಿತಗೊಂಡಿವೆ ಇದನ್ನು ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ ಮಕ್ಕಳು ಕೂಡಾ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಗಿಡ ಮರಗಳನ್ನು ಬೆಳೆಸಿ ಪೋಷಿಸಬೇಕು ಎಂದು ಹೇಳಿದರು.

Contact Your\'s Advertisement; 9902492681

ಸಮಾಜದ ಸ್ವಾಸ್ಥ್ಯ ಕಾಪಾಡುವ ಶಿಕ್ಷಣ ಬೇಕು: ಸೆಲಿನ್

ಶಿಕ್ಷಕಿ ವೆಂಕಟಲಕ್ಷ್ಮೀ ಮಾತನಾಡಿದರು ಪರಿಸರ ಅಸಮತೋಲನೆಯಿಂದ ಇಂದು ಅನೇಕ ಪರಿಸರ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಪರಿಸರ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸುವ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಅನಂತಮೂರ್ತಿ ಡಬೀರ ಮಾತನಾಡಿ ಮಕ್ಕಳು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.

ಸುಕ್ಷೇತ್ರ ದೇವಲ ಗಾಣಗಾಪುರದ ಭೀಮಾ – ಅಮರ್ಜಾ ಸಂಗಮ ನದಿಯಲ್ಲಿ ಸ್ವಚ್ಚತಾ ಅಭಿಯಾನ

ಶಿಕ್ಷಕರಾದ ನಿಂಗಪ್ಪ ಪೂಜಾರಿ,ಮಲ್ಲಿಕಾರ್ಜುನ ಜೆಟಗಿಮಠ,ಸುರೇಖಾ,ಆರತಿ ಇತರರಿದ್ದರು. ಶಿಕ್ಷಕರಾದ ವಿಶ್ವರಾಜ ನಿರೂಪಿಸಿದರು ಹಾಗೂ ಅನಿತಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here