ಅರವಿಂದ ಬೆಲ್ಲದ್‌ ಹೇಳಿಕೆಗೆ ಪ್ರಗತಿಪರ ಮುಸ್ಲಿಂ ಚಿಂತಕರ ವೇದಿಕೆ ಆಕ್ರೋಶ

0
74

ಕಲಬುರಗಿ: ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ರು ಮುಸ್ಲಿಂರಿಗೆ ನೀಡುತ್ತಿರುವ ಶೇ 4 ಮೀಸಲಾತಿಯನ್ನು ರದ್ದುಪಡಿಸಿ ಅದನ್ನು ಪಂಚಮಸಾಲಿ ಲಿಂಗಾಯತರಿಗೆ ನೀಡಬೇಕೆಂದು ನೀಡಿರುವ ಹೇಳಿಕೆ ಬಾಲಿಷತನದಿಂದ ಕೂಡಿದ್ದು ಹಾಗೂ ಜಾತಿಭೇಧ ಹೆಚ್ಚಿಸುವ ಪ್ರಯತ್ನವಾಗಿದೆ. ಜಾತಿಗಳ ನಡುವೆ  ಸಂಘರ್ಷ ಸೃಷ್ಠಿ ಮಾಡು ರಾಜಕೀಯ ಗಿಮಿಕ್ ನ ಭಾಗವಾಗಿದ್ದು ಅವರ ಹೇಳಿಕೆಯಾಗಿದೆ ಎಂದು ಪ್ರಗತಿಪರ ಮುಸ್ಲಿಂ ಚಿಂತಕರ ವೇದಿಕೆ ಅಸಮಧಾನ ವ್ಯಕ್ತಪಡಿಸಿದೆ.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಮುಂಡರಾದ ಶೌಕತ್ ಅಲಿ  ಆಲೂರ್ ಸಾಮಾಜಿಕ ನ್ಯಾಯದ ಆಶಯವು ಈ ಹೋರಾಟದಲಿ ಎಲ್ಲಿಯೂ ಪ್ರತಿಫಲಿಸುತ್ತಿಲ್ಲ. ದುರ್ಬಲ ಸಮುದಾಯಗಳ ಜೊತೆ ಸೇರಿ, ಅಲ್ಲಿನ ಹೆಚ್ಚು ಹುದ್ದೆಗಳನ್ನು ತಮ್ಮ ಪಾಲಾಗಿಸಿಕೊಳ್ಳಲು ಮೀಸಲಾತಿಗಾಗಿ ಪೈಪೋಟಿ ನಡೆಸುತ್ತಿರುವದು ಖಂಡನೀಯವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ವಿಕಲಚೇತನರು ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಭಿಗಳಾಗಿ: ಮೀನಾಕ್ಷಿ ಪಾಟೀಲ್

ಸಂವಿಧಾನದ ಆಶಯದ  ಪ್ರಕಾರ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ  ಮೀಸಲಾತಿ ನೀಡಿ ಅವರನ್ನು ಸಬಲೀಕರಣಗೊಳಿಸುವ ಉದ್ದೇಶವಿರುತ್ತದೆ. ಆದರೆ ಮುಂದುವರಿದ ಸಮುದಾಯಗಳು ತಮಗೂ ಮೀಸಲಾತಿಬೇಕು ಎನ್ನುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನು ವ್ಯಾಪಕವಾಗಿ ಚರ್ಚೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರವೇ ನೇಮಿಸಿದ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಕಮಿಟಿಯ ವರದಿಯ ಪ್ರಕಾರ ಭಾರತದಲ್ಲಿ ಮುಸ್ಲಿಂರು, ದಲಿತರು ಮತ್ತು ಹಿಂದುಳಿದ ಸಮುದಾಯಗಳಿಗಿಂತಲೂ ಹಲವುವಾರು ಕ್ಷೇತ್ರಗಳಲ್ಲಿ ಹಿಂದುಳಿದಿರುವದನ್ನು ಸ್ಪಷ್ಟವಾಗಿ ದಾಖಲಾಸಿದ್ದಾರೆ. ಇದರಿಂದ ಸಂವಿಧಾನಬದ್ದವಾಗಿ ಮುಸ್ಲೀಮರಿಗೆ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿ ಇರಬೇಕೆನ್ನುವ ಉದ್ದೇಶದಿಂದ ಮೀಸಲಾತಿ ನೀಡಲಾಗಿದೆ.

ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು: ಚುಟುಕು ಸಾಹಿತಿ ಬೀರಣ್ಣ ಸುರಪುರ

ಅಂದಿನ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಮುಸ್ಲಿಂರಿಗೆ ಶೇಕಡಾ ೪% ಮೀಸಲಾತಿ ನೀಡಿದ್ದರು. ಯಾವೂದೇ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ವಿರೋಧವಿಲ್ಲ. ಮೀಸಲಾತಿ ಕೇಳುವಾಗ ಆಯಾ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ, ಗಣತಿ ನಡೆದು, ಅದರ ಆಧಾರದ ಮೇಲೆ ಸರಕಾರ ಮೀಸಲಾತಿ ನೀಡಲು  ನಿರ್ಧರಿಸಬೇಕು. ಈಗಾಗಲೇ ನಮ್ಮ ರಾಜ್ಯದಲ್ಲಿ ಜಾತಿ ಗಣತಿ ನಡೆದು ವರ್ಷಗಳೇ ಕಳೆದುಹೋಗಿವೆ.  ಸರಕಾರ ಇಲ್ಲಿಯವರೆಗೆ ಗಣತಿಯ ವರದಿ ಬಹಿರಂಗಪಡಿಸಿಲ್ಲ. ಸರಕಾರ ವರದಿಯನ್ನು ಬಹಿರಂಗೊಳಿಸಿ ನಂತರ ಮೀಸಲಾತಿ ನೀಡಲು ಕ್ರಮಕೈಕೊಳ್ಳಲಿ ಎಂದು ತಿಳಿಸಿದರು.

ಸರಕಾರಗಳ ವೈಫಲ್ಯಗಳಾದ ಬೆಲೆಏರಿಕೆ, ಜಿಡಿಪಿ ಕುಸಿತ, ನಿರುದೋಗ್ಯ, ಪೆಟ್ರೋಲ್/ಡಿಸೆಲ್ ಗಳ ಬೆಲೆಗಳಲ್ಲಿ ಏರಿಕೆ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇಂತಹ ಹಲವಾರ ವಿಷಯಗಳನ್ನು ಜನರಿಂದ ಮರೆಮಾಚಲು ಅಧಿಕಾರದಲ್ಲಿರುವ ಸರಕಾರ ಮತ್ತು ಸಂಘಪರಿವಾರ ಸೇರಿ ಸಮುದಾಯ ಮತ್ತು ಜಾತಿ- ಜಾತಿಗಳ ನಡುವೆ ಕಂದಕ ಸೃಷ್ಠಿಸಿ ಸಂಘರ್ಷ ಹುಟ್ಟುಹಾಕುವ ಹುನ್ನಾರ ಮಾಡುತ್ತಿವೆ ಎಂದು ಆರೋಪಿಸಿದರು.

ಸಮಾಜದ ಸ್ವಾಸ್ಥ್ಯ ಕಾಪಾಡುವ ಶಿಕ್ಷಣ ಬೇಕು: ಸೆಲಿನ್

ದೇಶದಲ್ಲಿನ ವಿದ್ಯಮಾನಗಳ ಕುರಿತು ಸಾರ್ವಜನಿಕರಲ್ಲಿ ಚರ್ಚೆ ನಡೆಯಬಾರದೆಂದು ಅವರ ಗಮನವನ್ನು ಬೇರೆಡೆ ಸೆಳೆಯುವ ತಂತ್ರಗಾರಿಕೆ ಇದರ ಹಿಂದೆ ಅಡಗಿದ್ದು,  ಮೀಸಲಾತಿ ಹೋರಾಟಗಳಲ್ಲಿ ಸಮುದಾಯಗಳ ಹಿತಾಸಕ್ತಿ ಅಡಗಿಲ್ಲ. ಆ ಕಾರಣಕ್ಕೆ ಹೋರಾಟಗಳು ನಡೆಯುತ್ತಿಲ್ಲ. ಮೀಸಲಾತಿ ಹೆಸರಿನಲ್ಲಿ ರಾಜಕೀಯ ಪಕ್ಷಗಳು ತಮ್ಮ ವೋಟ್ ಬ್ಯಾಂಕ್ ಮಾಡಿಕೊಳ್ಳುವ ಮತ್ತು ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ನಡೆಸಿವೆ ಎಂದರು.

ಐತಿಹಾಸಿಕ ಹಿನ್ನೆಲೆ ಗೊತ್ತಿರದ ಅರವಿಂದ ಬೆಲ್ಲದ್ ರಂತಹವರನ್ನು ಬಳಸಿಕೊಂಡು ಅವರಿಂದ ಹೇಳಿಕೆ ಕೊಡಿಸುವ ಮೂಲಕ ವ್ಯವಸ್ಥಿತವಾಗಿ ಅಧಿಕಾರದಲ್ಲಿರುವವರು ತಮ್ಮ ಅಧಿಕಾರದ ಖುರ್ಚಿ ಗಟ್ಟಿಗೊಳಿಸಿ ಕೊಳ್ಳುವ ರಾಜಕೀಯ ಹುನ್ನಾರ ನಡೆಸಿದ್ದಾರೆ ಎಂದು ತಿರುಗೇಟು ನೀಡಿದರು.

ಮಾಜಿ ಉಪಮಹಾಪೌರರು ಸಜ್ಜಾದ್ ಅಲಿ ಇನಾiದಾರ್, ಮೇರಾಜ್ ಪಟೇಲ್, ಮಸ್ತಾನ್ ಬಿರಾದಾರ್ ಸುದ್ದಿಗೋಷ್ಠಿಯಲ್ಲಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here