ಕಲಬುರಗಿ: ಯಶಸ್ವಿಯಾಗಿ ಐದು ವರ್ಷ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಉತ್ತರ ವಲಯದ ಪದಾಧಿಕಾರಿಗಳಿಗೆ ಹಾಗೂ ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಅವರಿಗೆ ಇಂದು ಹೈದರಾಬಾದ್ ಕರ್ನಾಟಕ ಸೋಸೀಯಲ್ ಜಾಗೃತಿ ಫೋರಂ ವತಿಯಿಂದ ಮೇಹಬೂಬ ನಗರದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ ಉತ್ತರ ವಲಯದ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ.ಇಂದು ಪರಭಾಷಾ ಹಾವಳಿಯಿಂದ ಕನ್ನಡಕ್ಕೆ ಕುತ್ತು ಬರುತ್ತಿರುವುದು ನಿಜ.ಕನ್ನಡ ಉಳಿಸಿ ಬೆಳೆಸಲು ಕನ್ನಡಿಗರಾದ ನಾವು ಶ್ರಮಿಸಬೇಕಾಗಿದೆ.ಈಗಾಗಲೇ ಕನ್ನಡ ಭಾಷೆಯ ಹತ್ತಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಮುಂದೆಯೂ ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ಮಾಡಲಾಗುವುದು.ಐದು ವರ್ಷಗಳಲ್ಲಿ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದರು.
ಸರ್ಕಾರಿ ಸೌಲಭ್ಯ ಸದುಪಯೋಗ ಪಡೆದುಕೊಳ್ಳಲು ಬೀದಿ ವ್ಯಾಪಾರಿಗಳಿಗೆ ಕರೆ
ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ ಅಲ್ಪಸಂಖ್ಯಾತರಲ್ಲಿ ಕನ್ನಡ ಭಾಷೆ ಬಿತ್ತುವ ಮೂಲಕ ಉತ್ತರ ವಲಯ ಪ್ರಶಂಸಕ್ಕೆ ಪಾತ್ರವಾಗಿದೆ.ಇದಕ್ಕೆ ಸತತ ಪ್ರಯತ್ನ ಹಾಗೂ ಇಚ್ಛಾಶಕ್ತಿ ಕಾರಣ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ ಕಸಾಪ ಕಲಬುರಗಿ ಉತ್ತರ ವಲಯದ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಹಾಗೂ ಪದಾಧಿಕಾರಿಗಳು ಐದು ವರ್ಷಗಳ ಕಾಲ ನಿರಂತರವಾಗಿ ಅಲ್ಪಸಂಖ್ಯಾತರಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ಕೆಲಸ ಮಾಡಿದ್ದು ನಿಜಕ್ಕೂ ಹೆಮ್ಮೆಯ ವಿಷಯ.ಅವರಿಗೆ ಅಭಿನಂದನೆಗಳು ತಿಳಿಸುತ್ತೆನೆ ಎಂದರು.ಹಿರಿಯ ಹೋರಾಟಗಾರ ಎ.ಎಸ್.ಭದ್ರಶೆಟ್ಟಿ ಮಾತನಾಡಿದರು.ಯುವ ಮುಖಂಡರಾದ ಚೇತನ್ ಗೋನಾಯಕ್,ಉತ್ತರವಲಯದ ಗೌರವ ಕಾರ್ಯದರ್ಶಿ ಜಿ.ಜಿ. ವಣಿಕ್ಯಾಳ, ಕೋಶಾಧ್ಯಕ್ಷ ಬಿ.ಜಯಸಿಂಗ, ಬಾಬಾ ಫಕ್ರುದ್ದೀನ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಬೇಲಿ ಮತ್ತು ಹೊಲ ವಿಶಿಷ್ಟ ಕಥನಾತ್ಮಕ ಕಾದಂಬರಿ: ಡಾ. ಸತ್ಯಂಪೇಟೆ
ಜಾಗೃತಿ ಫೋರಂ ಅಧ್ಯಕ್ಷ ಹಾಗೂ ಕಸಾಪ ಉತ್ತರ ವಲಯದ ಉಪಾಧ್ಯಕ್ಷ ಸಾಜಿದ್ ಅಲಿ ರಂಜೋಳ್ಳ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ.ಅಬ್ದುಲ ಕರಿಂ ಸ್ವಾಗತಿಸಿದರು.ಮಂಜೂರ ವಿಖಾರ ನಿರೂಪಿಸಿದರು.ಇಸ್ಮಾಯಿಲ್ ರಾಜಾಪೂರ ವಂದಿಸಿದರು.ಕಾರ್ಯಕ್ರಮದಲ್ಲಿ ಜಾಗೃತಿ ಫೋರಂ ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.