ಸರ್ಕಾರಿ ಸೌಲಭ್ಯ ಸದುಪಯೋಗ ಪಡೆದುಕೊಳ್ಳಲು ಬೀದಿ ವ್ಯಾಪಾರಿಗಳಿಗೆ ಕರೆ

1
47

ಕಲಬುರಗಿ: ಬೀದಿ ಬದಿ ವ್ಯಾಪಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದು ಕೊಳ್ಳುವಂತೆ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಕರೆ ನೀಡಿದರು.

ನಗರದ ಸುಪರ್ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಕನಾ೯ಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಸಂಘದ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಬೇಲಿ ಮತ್ತು ಹೊಲ ವಿಶಿಷ್ಟ ಕಥನಾತ್ಮಕ ಕಾದಂಬರಿ: ಡಾ. ಸತ್ಯಂಪೇಟೆ

ದಕ್ಷಿಣ ವಲಯ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುಭಾಷ್ ಸಾವಳಗಿ ಮಾತನಾಡಿ, ಆತ್ಮನಿಭ೯ರ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಲಾಭವನ್ನು ಅಹ೯ ಬೀದಿ ವ್ಯಾಪಾರಿಗಳಿಗೆ ತಲುಪಿಸಲು ಮತ್ತು ಸಂಘಟನೆಯನ್ನು ಬಲಪಡಿಸು ತಮಗೆ ವಹಿಸಿರುವ ಈ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ಮಾಡುವುದಾಗಿ ಹೇಳಿದರು.

ಸಂಘಟನೆಯ ಜಿಲ್ಲಾ ಮುಖಂಡ ದತ್ತು ಭಾಸಗಿ ಮಾತನಾಡಿ, ಸಂಘಟಿತ ಹೋರಾಟಕ್ಕೆ ಜಯ ಸಿಗುತ್ತದೆ, ಎಲ್ಲರೂ ಐಕ್ಯತೆಯಿಂದ ಇದ್ದರೆ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದರು.

“ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಇರುವ ಸ್ಪೂರ್ತಿಯ ಸಂಕೇತ ಆಜಾದ್”

ಸಭೆಯಲ್ಲಿ ದಕ್ಷಿಣ ವಲಯ ಬೀದಿ ಬದಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷೆ ಕಮಲಾಬಾಯಿ, ಪ್ರಧಾನ ಕಾರ್ಯದರ್ಶಿ ರಮೇಶ್ ಕಣ್ಣಿ, ಸಂಘಟನಾ ಕಾರ್ಯದರ್ಶಿ ಆಶಾಲತಾ ಖಜಾಂಚಿ ರಾಕೇಶ್ ಮತ್ತು ಅಧ್ಯಕ್ಷ ಸುಭಾಷ್ ಸಾವಳಗಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಮುಖಂಡರಾದ ಚಂದ್ರಹಾಸ ಜಿತ್ರಿ, ಡಾ. ವೇದಮೂರ್ತಿ, ಶಿವಾನಂದ ದಶಮನಿ, ಬಾಬು ಶೇಖ್ ಪರಿಟ, ರಾಘವೇಂದ್ರ ಕುಲಕರ್ಣಿ, ಶಿವಕುಮಾರ ಭಾಗೋಡಿ, ವೆಂಕಟೇಶ್ ಕಾಂಬಳೆ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here