ಬೇಲಿ ಮತ್ತು ಹೊಲ ವಿಶಿಷ್ಟ ಕಥನಾತ್ಮಕ ಕಾದಂಬರಿ: ಡಾ. ಸತ್ಯಂಪೇಟೆ

1
35

ಕಲಬುರಗಿ : ಬೇಲಿ ಮತ್ತು ಹೊಲ ಒಂದು ವಿಶಿಷ್ಟ ಕಥನಾತ್ಮಕ ಕಾದಂಬರಿ ಗ್ರಾಮೀಣ ಸಮುದಾಯದ ಸಮಸ್ಯೆಯನ್ನು ಈ ಕಾದಂಬರಿ ಮೈಯಾಗಿ ಪಡೆದಿದೆ ಘಟನೆಗಳ ಸಂಕೇತ ಪಾತ್ರಗಳ ಜೀವಂತಿಕೆಯಿಂದ ಓದುಗರ ಮನ ಸೆಳೆಯುತ್ತದೆ ಎಂದು ಪತ್ರಕರ್ತರಾದ ಡಾ. ಶಿವರಂಜನ್ ಸತ್ಯಂಪೇಟೆ ಅವರು ಹೇಳಿದರು.

ನಗರದ ಸಿದ್ದಲಿಂಗೇಶ್ವರ ಬುಕ್ ಮಾಲದಲ್ಲಿ ನಡೆದ ‘ಅಟ್ಟದ ಮೇಲೆ ಬೆಟ್ಟದಂತ ವಿಚಾರ ಪಾಕ್ಷಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಕುಂ.ವೀರಭದ್ರಪ್ಪನವರು ರಚಿಸಿರುವಂತಹ “ಬೇಲಿ ಮತ್ತು ಹೊಲ “ಎನ್ನುವಂತಹ ಕಾದಂಬರಿಯನ್ನು ಕುರಿತು ಮಾತನಾಡುತ್ತಾ ತಮ್ಮ ವಿಶಿಷ್ಟ ಸಂವೇದನಶೀಲ ಭಾವನೆಗಳಿಂದ ಕಥೆಗಳನ್ನು ಜನರ ಬದುಕಿನಲ್ಲಿ ಒಂದಾಗಿಸುವ ಮೂಲಕ ಅವರು ಆಧುನಿಕ ಕಥನ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿರುವರು ಬೇಲಿ ಮತ್ತು ಹೊಲ, ಬೇಲಿಯ ಹೂವುಗಳು, ಕೆಂಡದ ಮಳೆ, ಶಾಮಣ್ಣ ಇನ್ನಾದರೂ ಸಾಯಬೇಕು, ಡೋಮ ಮತ್ತು ಇತರ ಕಥೆಗಳು, ಮೊದಲಾದ ಕಾದಂಬರಿಗಳು ಸಣ್ಣಕಥೆಗಳು ಓದುತ್ತ ಹೋದಂತೆ ಬದುಕಿನ ಹಲವು ಗನಿಷ್ಟವಾದ ಸಂಬಂಧಗಳನ್ನು ಅನಾವರಣಗೊಳಿಸುತ್ತವೆ.

Contact Your\'s Advertisement; 9902492681

“ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಇರುವ ಸ್ಪೂರ್ತಿಯ ಸಂಕೇತ ಆಜಾದ್”

ಇವರ ಅನೇಕ ಕಥೆಗಳು ಚಲನಚಿತ್ರಗಳಾಗಿ ಜನಪ್ರಿಯತೆ ಗಳಿಸಿವೆ. ಅತಿಥಿಗಳಾಗಿ ಆಗಮಿಸಿದ ಹಿರಿಯ ವಿಮರ್ಶಕರಾದ ಗುರುಪಾದ ಮರಿಗುದ್ದಿ ಅವರು ಮಾತನಾಡುತ್ತಾ ಕಾವ್ಯ ಕಥೆ ಕಾದಂಬರಿ ವ್ಯಕ್ತಿ ಚಿತ್ರ, ವಿಮರ್ಶೆ,ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ ಈ ಮೂಲಕ ತಮ್ಮ ಇರುವಿಕೆಯನ್ನು ಜವಾಬ್ದಾರಿಯನ್ನು ಮೆರೆದಿದ್ದಾರೆ ಬೇಲಿ ಮತ್ತು ಹೊಲ ಎಂಬ ಕಾದಂಬರಿ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ದಾಟಿದ ವೀರಭದ್ರಪ್ಪ ವಿಶಿಷ್ಟ ಭಾಷಾಪ್ರಯೋಗದ ಮೂಲಕವೇ ಆಕರ್ಷಿಸುತ್ತಿರುವುದು ಅವರ ಕಥೆ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯಲೋಕದಲ್ಲಿ ಒಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತ್ತು.

ಅಲ್ಲದೆ ಅಟ್ಟದ ಮೇಲೆ ಬೆಟ್ಟದಂತಹ ವಿಚಾರ ಅತಿಮುಖ್ಯವಾದoತಹ ವಿಷಯ ವಾಗಿದೆ ಇದು ವೈಚಾರಿಕ ವಾದಂತಹ ಚರ್ಚೆ ಇಂತಹ ಚರ್ಚೆ ಗ್ರೀಕ್ ಕಾಲದಿಂದಲೂ ಪ್ರಚಾರಕ್ಕೆ ಬಂದಿದ್ದು ನಮ್ಮಲ್ಲಿ ಈ ತರಹದ ಚರ್ಚೆ ಪ್ರಾರಂಭ ಮಾಡಿದ್ದು ಶಿವಶರಣರು. ಬೆಂಗಳೂರು,ಧಾರವಾಡಕ್ಕೆ ಸೀಮಿತವಾಗಿದ್ದ ಇಂತಹ ವಿಮರ್ಶೆಯ ಕಾರ್ಯಕ್ರಮಗಳು ಕಲ್ಬುರ್ಗಿ ಅಂತಹ ನಾಡಿನಲ್ಲಿ ಸಿದ್ದಲಿಂಗೇಶ್ವರ ಪ್ರಕಾಶನದವರು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ನುಡಿದರು.

ರಾಷ್ಟ್ರದ ಅಭಿವೃದ್ಧಿಗೆ ಎನ್‌ಜಿಓಗಳ ಕೊಡುಗೆ ಅಮೋಘ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶಕರಾದ ಬಸವರಾಜ ಕೊನೆಕ್ ರವರು ವಹಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ತಿಂಗಳಿಗೆ ಎರಡು ಬಾರಿ ಆಯೋಜಿಸುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಾಹಿತಿಗಳು ಪ್ರಯೋಜನವನ್ನು ಪಡೆಯುವುದರ ಮೂಲಕ ಸಾಹಿತಿಕ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ವಿನಂತಿಸಿಕೊಂಡರು.

ವೇದಿಕೆ ಮೇಲೆ ಸಲಹಾ ಸಮಿತಿಯ ಸದಸ್ಯರಾದ ಡಾ.ಶ್ರೀಶೈಲ್ ನಾಗರಾಳ್ ಸಂಚಾಲಕರಾದ ಶಿವರಾಜ್ ಪಾಟೀಲ್ ಉಪಸ್ಥಿತರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಗುರುಪಾದ ಮರಿಗುದ್ದಿ ಹಾಗೂ ಡಾ. ಕಲ್ಯಾಣ ರಾವ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ವಿಮರ್ಶಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ. ಶ್ರೀಶೈಲ್ ನಾಗರಾಳ್ ಅವರನ್ನು ಗೌರವಿಸಲಾಯಿತು.

ಶಾಲಾ-ಕಾಲೇಜು ಸಮಯಕ್ಕೆ ಬಸ್ ಓಡಿಸಿ ಹಿಂಚಗೇರಾ ಗ್ರಾಮದ ವಿದ್ಯಾರ್ಥಿಗಳು, ಪಾಲಕರ ಆಗ್ರಹ

ಕಾರ್ಯಕ್ರಮದಲ್ಲಿ ಸುರೇಶ್ ಬಡಿಗೇರ್, ಡಾ. ರೋ ಲೇಕರ್ ನಾರಾಯಣ, ಡಾ. ಚಿ.ಸಿ ನಿಂಗಣ್ಣ ವಿಶ್ವನಾಥ ಬಕ್ರೆ, ಡಾ. ಸಿದ್ದಲಿಂಗ ದಬ್ಬ ಮೊದಲಾದವರು ಇದ್ದರು ಡಾ. ಶರಣಬಸಪ್ಪ ವಡ್ದನ ಕೇರಿ ರೂಪಿಸಿದರು. ಡಾ. ಚಿ. ಸಿ. ನಿಂಗಣ್ಣ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here