ನಿಧನ ವಾರ್ತೆ: ಡಾ.ರಾಮು ಪವಾರ

0
115

ವಾಡಿ: ಪಟ್ಟಣದ ಸೇವಾಲಾಲ ನಗರ ತಾಂಡಾ ನಿವಾಸಿ, ಹಿರಿಯ ವೈದ್ಯ ಹಾಗೂ ಬಂಜಾರಾ ಸಮಾಜದ ಮುಖಂಡ ಡಾ.ರಾಮು ವಿ.ಪವಾರ (೯೦) ಸೋಮವಾರ ನಿಧನರಾದರು.

ಆರು ಜನ ಪುತ್ರಿಯರು, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಮಂಗಳವಾರ ಮದ್ಯಾಹ್ನ ೧೨:೩೦ಕ್ಕೆ ಪಟ್ಟಣದಲ್ಲಿರುವ ಸ್ವಂತ ಜಮೀನಿನಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ.

Contact Your\'s Advertisement; 9902492681

ಸಂತಾಪ: ಮಾಜಿ ಶಾಸಕ ವಾಲ್ಮೀಕಿ ನಾಯಕ, ನಗರದ ವೈದ್ಯರಾದ ಡಾ.ಗೋವಿಂದ ನಾಯಕ, ಡಾ.ಶಿವಾನಂದ ಇಂಗಳೇಶ್ವರ, ಡಾ.ಮಲ್ಲಿಕಾರ್ಜುನ ಮಠಪತಿ, ಡಾ.ಮಲ್ಲಿಕಾರ್ಜುನ, ಡಾ.ಮಝರ್ ಹುಸೇನ, ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ, ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ, ಮರಾಠಾ ಸಮಾಜದ ಅಧ್ಯಕ್ಷ ಅಶೋಕ ಪವಾರ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸವರಾಜ ಪಂಚಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ಮಾಜಿ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೋಡ, ಉಪಾಧ್ಯಕ್ಷ ತಿಮ್ಮಯ್ಯ ಪವಾರ, ಬಿಜೆಪಿ ಕಾರ್ಯದರ್ಶಿ ವೀರಣ್ಣ ಯಾರಿ ಹಾಗೂ ಮತ್ತಿತರತು ಮೃತರ ನಿಧನಕ್ಕೆ ಶೋಕ ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here