ವಾಡಿ: ಸಮಾಜವನ್ನು ಕಟ್ಟುವ ಕಾರ್ಯ ಮಾಡಿದ ಇತಿಹಾಸ ಪುರುಷರಿಗೆ ಮಾತ್ರ ಈ ಭೂಮಿಯ ಮೇಲೆ ಭವಿಷ್ಯವಿದ್ದು, ಪುರಾಣ ಪುರುಷರಿಗೆ ಇಲ್ಲಿ ನೆಲೆಯಿಲ್ಲ ಎಂದು ರಾವೂರ ಶ್ರೀಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಶ್ರೀಸಿದ್ಧಲಿಂಗ ದೇವರು ನುಡಿದರು.
ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಯಡ್ರಾಮಿ ಮುರುಘೇಂದ್ರ ಶಿವಯೋಗಿ ವಿರಕ್ತ ಮಠದ ಪೂಜ್ಯ ಶ್ರೀಸಿದ್ಧಲಿಂಗ ಸ್ವಾಮೀಜಿ ನಡೆಸಿಕೊಡುತ್ತಿರುವ ಯಡಿಯೂರು ಶ್ರೀಸಿದ್ಧಲಿಂಗೇಶ್ವರರ ಮಹಾಪುರಾಣ ಪ್ರಸಂಗದ ತೊಟ್ಟಿಲೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
HKEಗೆ 3ನೇ ಬಾರಿ ಆಯ್ಕೆಯಾದ ಅರುಣಕುಮಾರಗೆ ಸನ್ಮಾನ
ಹುಟ್ಟಿದಾಗ ತೊಟ್ಟಿಲು ಕಟ್ಟುತ್ತಾರೆ. ವಯಸ್ಸಿಗೆ ಬಂದಾಗ ಬಾಸಿಂಗ ಕಟ್ಟುತ್ತಾರೆ. ಸತ್ತಾಗ ಚೆಟ್ಟ ಕಟ್ಟುತ್ತಾರೆ. ಈ ಕಟ್ಟು ಕಟ್ಟಿನೊಳಗೆ ಸಿಕ್ಕ ಬದುಕು ದಿಕ್ಕೆಟ್ಟು ಹೋಗುತ್ತಿದೆ. ಉಸಿರು ನಿಲ್ಲುವ ಮುಂಚೆ ಸಮಾಜವನ್ನು ಪ್ರೀತಿಸಿ ಸಾಧಕರಾಗಬೇಕು. ಸುಃಖ ದುಃಖ ಎಂಬುದು ತೊಟ್ಟಿಲು ತೂಗಿದಂತೆ. ಒಂದರ ನಂತರ ಮತ್ತೊಂದು ಜೀವನದಲ್ಲಿ ಬಂದು ಹೋಗುತ್ತದೆ. ಯಡಿಯೂರು ಸಿದ್ಧಲಿಂಗೇಶ್ವರರು ಪುರಾಣ ಪುರುಷರಲ್ಲ. ಇತಿಹಾಸ ನಿರ್ಮಿಸಿದ ಮಹಾನ್ ಶರಣರಾಗಿದ್ದಾರೆ ಎಂದು ಹೇಳಿದರು.
ಹಳಕರ್ಟಿ ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀಮುನೀಂದ್ರ ಸ್ವಾಮೀಜಿ ಮಾತನಾಡಿ, ಧರ್ಮದ ದಾರಿಯಲ್ಲಿ ನಡೆಯುವವರು ಜೀವನದಲ್ಲಿ ಸುಃಖ ಶಾಂತಿ ನೆಮ್ಮದಿಯನ್ನು ಪ್ರಾಪ್ತಿಸಿಕೊಳ್ಳುತ್ತಾರೆ. ಇತಿಹಾಸದಲ್ಲಿ ನಡೆದುಹೋದ ಮಹಾಪುರುಷರ ಘಟನೆಗಳನ್ನೇ ಪುರಾಣ ಪ್ರವಚನ ರೂಪದಲ್ಲಿ ಜನರಿಗೆ ತಿಳಿಸಲಾಗುತ್ತದೆ. ಅಹಂಕಾರದಿಂದ ತುಂಬಿದ ಸ್ವರ್ಥದ ಬದುಕಿನಲ್ಲಿ ಸಂತಸ ಎಂಬುದು ಮರೀಚಿಕೆಯಾಗುತ್ತದೆ. ಶರಣರು ನೀಡಿದ ದಾಸೋಹದ ಮಾರ್ಗದರ್ಶನದಲ್ಲಿ ಭಕ್ತರು ಸಾಗಬೇಕು ಎಂದರು.
ಹಳ್ಳಿ ಜನರೊಂದಿಗೆ ಇದ್ದು ಹೊಸ ಅನುಭವ ಪಡೆಯುತ್ತಿರುವೆ: ಶಾಸಕ ಡಾ. ಅಜಯ್ ಸಿಂಗ್
ಯಡ್ರಾಮಿ ಮುರುಘೇಂದ್ರ ಶಿವಯೋಗಿ ವಿರಕ್ತ ಮಠದ ಪೂಜ್ಯ ಶ್ರೀಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಡಾ.ಗುಂಡಣ್ಣ ಬಾಳಿ, ಎಸಿಸಿ ಕಂಪನಿಯ ಪರಿಸರ ಮುಖ್ಯಸ್ಥ ಜಿ.ಎನ್.ರಮೇಶ, ಉಪನ್ಯಾಸಕ ಡಾ.ಮಲ್ಲಿನಾಥ ತಳವಾರ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ, ಮಲ್ಲಿಕರ್ಜುನ ದೇವಸ್ಥಾನದ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ಮುಖಂಡರಾದ ರಾಜಶೇಖರ ಕಲಶೆಟ್ಟಿ, ಶರಣಗೌಡ ಚಾಮನೂರ, ಪರುತಪ್ಪ ಕರದಳ್ಳಿ, ಅಣ್ಣಾರಾವ ಪಸಾರೆ, ಚೆನ್ನಯ್ಯಸ್ವಾಮಿ, ಮಹಾದೇವ ಹಡಪದ, ಸುಭಾಷ ಹೇರೂರ, ತಿಪ್ಪಣ್ಣ ದೊಡ್ಡಮನಿ, ವೀರಣ್ಣ ಯಾರಿ, ಕಾಶೀನಾಥ ಪಾನಗಾಂವ, ದೇವಿಂದ್ರಪ್ಪ ರದ್ದೇವಾಡಗಿ, ಬಸವರಾಜ ಕೀರಣಗಿ ಸೇರಿದಮತೆ ನೂರಾರು ಜನರು ಪಾಲ್ಗೊಂಡಿದ್ದರು. ಮುತೈದೆ ಮಹಿಳೆಯರು ಯಡಿಯೂರು ಸಿದ್ಧಲಿಂಗನ ತೊಟ್ಟಿಲು ತೂಗಿ ಜೋಗುಳ ಹಾಡಿದರು. ಸಿದ್ಧಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು.