ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ಅಧ್ಯಯನ ವಿಭಾಗವು ಪ್ರಾರಂಭೋತ್ಸವ ಮತ್ತು ವಿಶ್ವಸಂಗೀತ ದಿನಾಚರಣೆಯನ್ನು ಶುಕ್ರವಾರ ಸಾಯಂಕಾಲ ೬ ಗಂಟೆಗೆ ಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿರುವ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಕುಲಪತಿಗಳಾದ ಡಾ.ನಿರಂಜನ ವ್ಹಿ.ನಿಷ್ಠಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪೂಜ್ಯ ಮಾತೋಶ್ರೀ ದಾಕ್ಷಾಯಣಿ ಎಸ್.ಅಪ್ಪಾ, ಸಮಕುಲಪತಿಗಳಾದ ಡಾ.ವಿ.ಡಿ.ಮೇತ್ರಿ, ಎನ್.ಎಸ್.ದೇವರಕಲ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ, ಕುಲಸಚಿವರಾದ ಡಾ.ಅನಿಲಕುಮಾರ ಬಿಡವೆ, ಕುಲಸಚಿವ ಮೌಲ್ಯಮಾಪನ ಡಾ.ಲಿಂಗರಾಜ ಶಾಸ್ತ್ರಿ, ಡೀನ ಡಾ.ಲಕ್ಷ್ಮೀ ಪಾಟೀಲ ಭಾಗವಹಿಸುವರು. ಪ್ರೊ. ರೇವಯ್ಯ ವಸ್ತ್ರದಮಠ, ಡಾ.ಸೀಮಾ ಪಾಟೀಲ, ಡಾ.ಛಾಯಾ ಭರತನೂರ, ಡಾ.ಕಲಾವತಿ ದೊರೆ, ಪ್ರೊ.ಕವಿತಾ ಮಠಪತಿ, ಡಾ.ಎಮ್.ಎಸ್.ಪಾಟೀಲ, ಪ್ರೊ. ಷಣ್ಮುಖ ಪಾಟೀಲ, ಚನ್ನಬಸವ ಬಮ್ಮಣ್ಣಿಯವರು ಸಂಗೀತ ಸೇವೆ ಸಲ್ಲಿಸುವರು.