ಶಹಾಬಾದ: ತಾಲೂಕಿನ ರೈತರು ತಮ್ಮ ಪಹಣಿ ಪ್ರತಿಗೆ ಆಧಾರ ಕಾರ್ಡ ಜೋಡಣೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಶಹಾಬಾದ ರೈತ ಸಂಪರ್ಕ ಅಧಿಕಾರಿ ಕಾಶಿನಾಥ ದಂಡೋತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನೆಮ್ಮದಿ ಕೇಂದ್ರ, ರೈತ ಸಂಪರ್ಕ ಕೇಂದ್ರದಲ್ಲಿ ತಮ್ಮ ಎಲ್ಲಾ ಪಹಣಿಗಳಿಗೂ ಆಧಾರ್ ಕಾರ್ಡ ಹಾಗೂ ಬ್ಯಾಂಕ್ ಖಾತೆ ಜೋಡಣೆ ಮಾಡಿಕೊಳ್ಳಬಹುದಾಗಿದ್ದು, ಸರ್ಕಾರದ ಪ್ರೋತ್ಸಾಹದ ಧನ ಸೇರಿದಂತೆ ಇನ್ನೀತರ ಸೌಲಭ್ಯಗಳನ್ನು ರೈತರು ಪಡೆಯಬೇಕಾದರೆ ಪಹಣಿ ಪ್ರತಿಗೆ ಆಧಾರ ಜೋಡಣೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾಗಿದೆ.
ಡಾ. ಮಲ್ಲಿಕಾರ್ಜುನ ಖರ್ಗೆಗೆ ಮಹೇಶ್ವರಿ ವಾಲಿ ಹೂ ಗುಚ್ಚು ನೀಡಿ ಸನ್ಮಾನ
ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಸೇರಿದಂತೆ ಹಲವು ಸವಲತ್ತುಗಳು ರೈತರು ಹೊಂದಿರುತ್ತಾರೆ.ಈಗಾಗಲೇ ರೈತರ ಪಹಣಿಗೆ ಆಧಾರ್ ಜೋಡಣೆ ಆಂದೋಲನ ಆರಂಭವಾಗಿದ್ದು, ಜೋಡಣೆ ಕಾರ್ಯಕ್ಕೆ ರೈತರು ಕೈಜೋಡಿಸಬೇಕು ಎಂದು ರೈತ ಸಂಪರ್ಕ ಅಧಿಕಾರಿ ಕಾಶಿನಾಥ ದಂಡೋತಿ ಮನವಿ ಮಾಡಿದ್ದಾರೆ.