ಜಗತ್ತನ್ನು ರಕ್ಷಿಸಿದ ಕೀರ್ತಿ ಸ್ಟಾಲಿನ್ ಗೆ ಸಲ್ಲುತ್ತದೆ: ರಾಮಣ್ಣ.ಎಸ್.ಇಬ್ರಾಹಿಂಪೂರ

0
41

ಶಹಾಬಾದ: ಎರಡನೇ ಮಹಾಯುದ್ದದಲ್ಲಿ ಫ್ಯಾಸಿವಾದವನ್ನು ಸೋಲಿಸಿ ಜಗತ್ತನ್ನು ರಕ್ಷಿಸಿದ ಕೀರ್ತಿ ಸ್ಟಾಲಿನ್ ರವರಿಗೆ ಸಲ್ಲುತ್ತದೆ ಎಂದು ಎಸ್‌ಯುಸಿಐ ಕಮುನಿಷ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ.ಎಸ್.ಇಬ್ರಾಹಿಂಪೂರ ಹೇಳಿದರು.

ಅವರು ನಗರದ ಎಸ್‌ಯುಸಿಐ ಪಕ್ಷದ ಕಛೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೇಡ್ ಜೆ.ವಿ.ಸ್ಟಾಲಿನ ರವರ ೬೮ನೇ ಸ್ಮಾರಕ ಸಭೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೆರಿಸಿ ಮಾತನಾಡಿದರು.

Contact Your\'s Advertisement; 9902492681

ಕಾರ್ಲ್‌ಮಾರ್ಕ್ಸ ರವರಿಗೆ ಯಾವ ರೀತಿ ಫೇಡರಿಕ್ ಎಂಗಲ್ಸ್ ಜೊತೆಯಾಗಿದ್ದರೋ, ಅದೇ ರೀತಿ ರಷ್ಯ ಕ್ರಾಂತಿಗೆ ಸ್ಟಾಲಿನ್ ರವರು ಲೆನಿನ್‌ರವರ ಹೆಗಲಿಗೆ ಹೆಗಲು ಕೊಟ್ಟು ನಿಂತರು. ರಷ್ಯಾದ ಕ್ರಾಂತಿ ಆದ ೪ ವರ್ಷದಲ್ಲಿ  ಲೆನಿನ  ತೀರಿಹೊಗುತ್ತಾರೆ.ನಂತರ ಸ್ಟಾಲಿನ್ ರವರ ನೇತೃತ್ವದ ಬೊಲಷವಿಕ್ ಪಕ್ಷದಲ್ಲಿ ಪ್ರತಿಗಾಮಿ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಇಡೀ ಪಕ್ಷವನ್ನು ರಕ್ಷಿಸುತ್ತಾರೆ . ಹಾಗೆ ೨ನೇ ಮಹಾಯುದ್ಧದಲ್ಲಿ ಬಲಿಷ್ಟವಾಗಿದ್ದ ಜರ್ಮನಿಯ ಹಿಟ್ಲರ ಸೈನ್ಯವನ್ನು ಸೋಲಿಸುತ್ತಾರೆ.

ಅಸ್ಪೃಶ್ಯತೆ ಹೋಗಲಾಡಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು: ಬಸವರಾಜ.ಕೆ ತೋಟದ್

ಮುಂದೆ ಇಡೀ ರಷ್ಯಾ ಕೆಲವೇ ವರ್ಷಗಳಲ್ಲಿ ಬಡತನ, ನಿರುದ್ಯೋಗ,ಅನಕ್ಷರತೆ,ಕಲೆ ಸಾಹಿತ್ಯ ಹೀಗೆ ಎಲ್ಲಾ ರಂಗದಲ್ಲೂ ಪ್ರಗತಿಯನ್ನು ಸಾಧಿಸಿ, ಅಮೇರಿಕಾದ ಸರಿಸಮನಾಗಿ ಬೆಳೆಯುತ್ತದೆ. ಇಂತಹ ಮಹಾನ್ ನಾಯಕರ ಜೀವನ ಆದರ್ಶಗಳನ್ನು ತಿಳಿದುಕೊಂಡು ಭಾರತದಲ್ಲಿ ಬಂಡವಾಳಶಾಹಿ ವಿರೋಧಿ ಸಮಜವಾದಿ ಕ್ರಾಂತಿ ನೆರವೆರಿಸಲು ಕಾರ್ಮಿಕರು,ರೈತರು ಮುಂದೆ ಬರಬೇಕು ಎಂದರು.

ಪಹಣಿ ಪ್ರತಿಗೆ ಆಧಾರ ಕಾರ್ಡ ಜೋಡಣೆ ಕಡ್ಡಾಯ

ಪ್ರಾಸ್ತವಿಕವಾಗಿ ಮಾತನಾಡಿದ ಎಸ್‌ಯುಸಿಐ ಕಮುನಿಷ್ಟ ಪಕ್ಷದ ಕಾರ್ಯದರ್ಶಿ ಗಣಪತ್‌ರಾವ್.ಕೆ.ಮಾನೆ, ಸ್ಟಾಲಿನ್ ರವರು ದಿನಕ್ಕೆ ೫೦೦ ಪುಟ ಓದುತ್ತಿದ್ದು ಅವರ ಕಛೇರಿಯಲ್ಲಿ ೨೦೦೦ ಪುಸ್ತಕಗಳಿದ್ದವು. ರಷ್ಯದಲ್ಲಿ ಇದ್ದುಕೊಂಡು ಅವರು ಭಾರತದ ಪರಿಸ್ಥಿತಿಯ ಬಗ್ಗೆ ವಿಶ್ಲೆಷಣೆ ಮಾಡಿದ್ದಾರೆ. ಇವತ್ತಿನ ವಿದ್ಯಾರ್ಥಿ-ಯುವಜನರು ಮಾರ್ಕ್ಸವಾದ ,ಲೆನಿನವಾದದ ಅಧ್ಯಯನ ಮಾಡಬೇಕು. ಸಮಾಜವಾದ ಕ್ರಾಂತಿಗಾಗಿ ಬೌದ್ದಿಕ ಹಾಗೂ ದೈಹಿಕವಾಗಿ ಗಟ್ಟಿಯಾಗಬೇಕು ಎಂದು ಹೇಳಿದರು.

ರಾಘವೇಂದ್ರ. ಎಮ್.ಜಿ, ಜಗನ್ನಾಥ.ಎಸ್.ಹೆಚ್, ಸಿದ್ದು ಚೌಧರಿ, ತುಳಜರಾಮ.ಎನ್.ಕೆ, ಶಿವಕುಮಾರ.ಇ.ಕೆ, ತಿಮ್ಮಯ್ಯ ಮಾನೆ, ನೀಲಕಂಠ ಎಮ್ ಹುಲಿ, ರಮೇಶ ದೇವಕರ್, ರಘು ಪವರ್,ಶ್ರೀನಿವಾಸ,ಪ್ರವಿಣ್ ಬಣಮಿಕರ್, ಅಜಯ್ ಎ.ಜಿ ಗುಂಡಮ್ಮ ಮಡಿವಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here