ಅಸ್ಪೃಶ್ಯತೆ ಹೋಗಲಾಡಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು: ಬಸವರಾಜ.ಕೆ ತೋಟದ್

3
49

ಶಹಾಬಾದ: ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಅಸ್ಪೃಶ್ಯತೆ ಆಚರಣೆಯನ್ನು ಹೋಗಲಾಡಿಸಲು ಸಮಾಜದಲ್ಲಿನ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕೆಂದು ರಾಜ್ಯ ಪ್ರಶ್ಸತಿ ವಿಜೇತ ಬಸವರಾಜ.ಕೆ ತೋಟದ್ ಹೇಳಿದರು.

ಅವರು ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಚಿತ್ತಾಪೂರ, ಲಕ್ಷ್ಮಿ ಯುವತಿ ಸಂಘ ಮರತೂರ ಸಂಯುಕ್ತಾಶ್ರಯದಲ್ಲಿ ಅಸ್ಪೃಶ್ಯತಾ ನಿವಾರಣಾ  ಕಾರ್ಯಕ್ರಮದಡಿ ಆಯೋಜಿಸಲಾದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಅಸ್ಪೃಶ್ಯತೆ ಆಚರಣೆ ಇಂದಿಗೂ ಜೀವಂತವಾಗಿರುವುದು ವಿ?ದನೀಯ. ಆಂದೋಲನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಾಗ ಮಾತ್ರ ಅಸ್ಪೃಶತೆ ತೊಲಗಿಸಲು ಸಾಧ್ಯ. ಸಾಮಾಜಿಕ ಕಾರ್ಯಕ್ರಮಗಳನ್ನು ವೈಜ್ಞಾನಿಕ ಮಾನೋಭಾವದಿಂದ ನೋಡಿದಾಗ ಸಮಾಜಕ್ಕೆ ಅಂಟಿಕೊಂಡಿರುವ ಅಸ್ಪೃಶತೆ, ಜಾತಿ ಪದ್ಧತಿ ಹಾಗೂ ತಾರತಮ್ಯ ಹೋಗಲಾಡಿಸಬಹುದು ಎಂದರು.

ಡಾ. ಮಲ್ಲಿಕಾರ್ಜುನ ಖರ್ಗೆಗೆ ಮಹೇಶ್ವರಿ ವಾಲಿ ಹೂ ಗುಚ್ಚು ನೀಡಿ ಸನ್ಮಾನ

ಮಲ್ಲಿಕಾರ್ಜುನ ದೊಡ್ಡಿ ಮಾತನಾಡಿ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇಂತಹ ಪದ್ಧತಿಗಳನ್ನು ನಿರ್ಮೂಲನೆ ಮಾಡಬೇಕಾಗಿದೆ. ಜನರಲ್ಲಿರುವ ಜಾತಿ ಪದ್ಧತಿ, ಮೇಲು ಕೀಳು ಮಾನೋಭಾವ ಬದಲಾದರೆ ಮಾತ್ರ ಇಂತಹ ಪಿಡುಗುಗಳನ್ನು ಹೋಗಲಾಡಿಸಲು ಸಾಧ್ಯ. ಅಸ್ಪೃಶ್ಯತೆ ಇಂದಿಗೂ ಆಚರಣೆಯಲ್ಲಿರುವುದು ವಿ?ದನೀಯ ಎಂದು ಕಳವಳ ವ್ಯಕ್ತಪಡಿಸಿದರು.

ಮಹ್ಮದ್ ಹುಸೇನ್,ಮಾತನಾಡಿ, ಅಸ್ಪೃಶ್ಯತೆ ಇಂದಿಗೂ ಆಚರಣೆಯಲ್ಲಿರುವುದರಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಸಮಾಜದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಪದ್ಧತಿಗಳ ನಿರ್ಮೂಲನೆಗೆ ಪ್ರತಿಯೊಬ್ಬರೂ ಮುಂದಾದಾಗ ಮಾತ್ರ ಜಿಲ್ಲೆ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಹೇಳಿದರು.

ಸುರಪುರ : ಬಂಧಿಖಾನೆ ಸಿಬ್ಬಂದಿ ಕುಟುಂಬ ಕಲ್ಯಾಣ ನಿಧಿ ಕಾರ್ಯಕ್ರಮ

ಇದೇ ಸಂದರ್ಭದಲ್ಲಿ ಲೋಹಿಯಾ ಕಲಾ ತಂಡವನ್ನು ಕಾರ್ಯಮ ನಡೆಸಿಕೊಟ್ಟರು. ಲೋಹಿಯಾ ಕಲಾ ತಂಡದ ಅಧ್ಯಕ್ಷ ಪ್ರಭುಲಿಂಗ ಅಷ್ಟಗಿ, ನೀಲಮ್ಮ, ನೀಲಕಂಠಯ್ಯಸ್ವಾಮಿ,ಅಮೀರ ಪಟೇಲ್,ಜಾಕೀರ ಹುಸೇನ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here