ಸುರಪುರ: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ೨೦೧೭-೧೮ನೇ ಸಾಲಿನಲ್ಲಿ ಹಾಕಲಾಗಿರುವ ಕೊಳವೆಬಾವಿಗಳಿಗೆ ಇಲ್ಲಿಯವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ,ಇದರಿಂದ ರೈತರು ತೀವ್ರ ತೊಂದರೆ ಪಡುವಂತಾಗಿದೆ.ಆದ್ದರಿಂದ ಕೂಡಲೇ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿನ ಎಲ್ಲಾ ಫಲಾನುಭವಿಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಡಾ: ಚಲಪತಿಗೌಡ ಬಣ) ವತಿಯಿಂದ ಜೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಎಸ್‌ಸಿಪಿ ಟಿಎಸ್‌ಪಿ ಅಡಿಯಲ್ಲಿ ರೈತರ ಕೊಳವೆಬಾವಿ ಹಾಕಿ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸದೆ ಇರುವುದರಿಂದ ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಹ ಪರಸ್ಥಿತಿ ನಿರ್ಮಾಣವಾಗಿದೆ,ಇದರಿಂದ ರೈತರು ತೀವ್ರ ಸಂಕಷ್ಟ ಪಡುವಂತಾಗಿದೆ.ಆದ್ದರಿಂದ ರೈತರ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶಿವಮೊನಯ್ಯ ಎಲ್.ಡಿ.ನಾಯಕ ತಾಲೂಕು ಗೌರವಾಧ್ಯಕ್ಷ ಇಮಾಮಸಾಬ್ ಅರಕೇರಿ ತಾಲೂಕು ಅಧ್ಯಕ್ಷ ಮೌನೇಶ ಆರ್.ಭೋಯಿ ಬಸವರಾಜ ಕವಡಿಮಟ್ಟಿ ಸೋಮನಾಥ ನಾಯಕ ರಮೇಶ ಹಸನಾಪುರ ಹುಸೇನಪ್ಪ ಜೀವಣಗಿ ಇತರರಿದ್ದರು.