ತಿಮ್ಮಾಪುರ ಮರಗಮ್ಮ ದೇವಿ ಜಾತ್ರೆ ಅಂಗವಾಗಿ ಕೊಂಡ ಹಾಯುವ ಆಚರಣೆ

1
31

ಸುರಪುರ: ನಗರದ ತಿಮ್ಮಾಪುರ ಬಳಿಯಲ್ಲಿನ ಮರಗಮ್ಮ ದೇವಿಯ ಜಾತ್ರೆ ಅಧ್ಧೂರಿಯಾಗಿ ನೆರವೇರಿತು.ಜಾತ್ರೆಯ ಅಂಗವಾಗಿ ಮರಗಮ್ಮ ಹಾಗು ಪರಶುರಾಮ ದೇವರ ಗಂಗಾಸ್ನಾನ ಮಾಡಿಸಿ ನಂತರ ದೇವಿಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತಂದು ನಂತರ ರಥೋತ್ಸವ ನಡೆಯಿತು.ಅಲ್ಲದೆ ಭಕ್ತರು ದೇವರ ರಥೋತ್ಸವಕ್ಕೆ ಹೂ ಹಣ್ಣು ಕಾಯಿ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ನಂತರ ಜೆಟ್ಟೆಪ್ಪ ಪೂಜಾರಿಯವರಿಂದ ಕೊಂಡ ಹಾಯುವ ಆಚರಣೆ ನಡೆಯಿತು,ಪೂಜಾರಿಯವರು ಅಗ್ನಿ ಕುಂಡದಲ್ಲಿ ಹಾದು ಹೋಗುವುದನ್ನು ಭಕ್ತರು ದೇವಿಯ ಭಕ್ತಿಯಲ್ಲಿ ತಲ್ಲೀನರಾಗಿ ಹರ್ಷೋದ್ಘಾರದಿಂದ ಜಯಘೋಷ ಮೊಳಗಿಸಿದರು.ಅಲ್ಲದೆ ಕೊಂಡ ಹಾಯ್ದ ನಂತರ ನೆರೆದ ಎಲ್ಲಾ ಭಕ್ತರು ಪೂಜಾರಿಯರಿಗೆ ನಮಿಸಿ ದೇವಿಯು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರಂಗಂಪೇಟೆ ತಿಮ್ಮಾಪುರದ ನೂರಾರು ಸಂಖ್ಯೆಯ ಜನರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here