ಅಫಜಲಪುರ: ತಾಲ್ಲೂಕಿನ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಸಹಾಯಕ ಆಯುಕ್ತ ಹಾಗೂ ಭಾಗ್ಯವಂತಿ ದೇವಸ್ಥಾನ ಕಮೀಟಿಯ ಅಧ್ಯಕ್ಷರು ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳು ಪರಿಶೀಲಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ ಇಸ್ಪೂರ, ಪರಮೇಶ್ವರ ಮೇಳಕುಂದಿ, ಭೀಮರಾಯ ಗೌಡ ಮಾಲಿ ಪಾಟೀಲ್, ಮಾಜಿ ಅಧ್ಯಕ್ಷರು ರಾಚು ನೆಲೋಗಿ ಮನೋಹರ ಬಿಲ್ಲಾಡ , ಬಾಬು ಪಟೇಲ್ ಮಲ್ಲಪ್ಪ ನಿಂಬರ್ಗಿ, ಇನ್ನಿತರ ಗ್ರಾಮಸ್ಥರು ಇದ್ದರು.
ಸಹಾಯಕ ಆಯುಕ್ತರ ಜೊತೆ ಸರ್ಕಾರಿ ಪ್ರೌಢಶಾಲೆ ಶಾಲೆಯ ಅವ್ಯವಸ್ಥೆ ಕುರಿತು ಚರ್ಚಿಸಿ, ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯದ ವ್ಯವಸ್ಥೆ , ಕುಡಿಯಲು ನೀರಿನ ಸೌಕರ್ಯ ಆಟದ , ಪಾಠದ ಕೋಣೆ ಶಿಥಿಲಗೊಂಡಿರುವ ಸಮಸ್ಯೆಗಳ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆಯಲ್ಲಿ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.