ಕಲಬುರಗಿ: ಅಧಿಕಾರದಲ್ಲಿರುವ ತಾವು ಮಾಡಿದ್ದೇನು ‘ ಎಂದು ಪ್ರಶ್ನಿಸಿಕೊಳ್ಳಿ ಸಂಸದ ಉಮೇಶ್ ಜಾಧವ್ ಅವರಿಗೆ ಶಾಸಕರಾದ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕಿದ್ದ ಜವಳಿ ಪಾರ್ಕ್ ಕೈತಪ್ಪಿ ಹೋಗಿರುವುದಕ್ಕೆ ಪ್ರಿಯಾಂಕ್ ಖರ್ಗೆ ಅವರ ಮುಂದುವರೆದ ಆಕ್ರೋಶ, SITP ಆಗಲಿ ಅಥವಾ MITRA ಅಡಿಯಲ್ಲಾಗಲಿ ಕಲಬುರಗಿ ಜನತೆಗೆ ಬೇಕಿರುವುದು ಉದ್ಯೋಗಾವಕಾಶಗಳು ಎಂದು ಒತ್ತಿ ಹೇಳಿದ್ದಾರೆ.
ಸಂಸದರಾಗಿ ರಾಜ್ಯ ಹಾಗೂ ಕೇಂದ್ರದಲ್ಲಿ ನಿಮ್ಮ ಪಕ್ಷದ ಆಡಳಿತವಿದ್ರೂ ಶೇ 15 ( ರೂ 7.85 ಕೋಟಿ) ಇಕ್ವಿಟಿ ಷೇರುಗಳನ್ನು ಸಂಗ್ರಹಿಸಲಾಗದೆ ಜವಳಿ ಪಾರ್ಕನ್ನು ಬಿಟ್ಟುಕೊಟ್ಟಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.
ಪ್ರತ್ಯೇಕ ರೈಲ್ವೆ ವಿಭಾಗ, ಏಮ್ಸ್, ಸಿಓಇ, ನಿಮ್ಜ್ ಮುಂತಾದ ಯೋಜನೆಗಳು ಜಿಲ್ಲೆಯ ಕೈಬಿಟ್ಟು ಹೋದಾಗ ಇನ್ನೊಬ್ಬರತ್ತ ಬೆರಳು ತೋರಿಸುವ ಬದಲು ಅಧಿಕಾರದಲ್ಲಿದ್ದ ನಾನು ಮಾಡಿದ್ದೇನು? ಎಂದು ತಾವು ತಮ್ಮನ್ನೇ ಪ್ರಶ್ನಿಸಿಕೊಂಡರೆ ಕಲಬುರಗಿಯ ಉದ್ಯೋಗಾಕಾಂಕ್ಷಿ ಯುವಕರಿಗೆ ಸಹಾಯವಾಗಲಿದೆ ಎಂದು ಸಂಸದ ವೈಫಲ್ಯವನ್ನು ಎತ್ತಿ ತೋರಿಸಿದ್ದಾರೆ.