ಸುರಪುರ: ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ದೇವಿಂದ್ರಪ್ಪ ಪತ್ತಾರವರು ಮಾತನಾಡಿ,ರಾಜ್ಯದಲ್ಲಿನ ಕಾರ್ಮಿಕ ಇಲಾಖೆಯಲ್ಲಿನ ಅನುದಾನ ಯಾರ‍್ಯಾರಿಗೂ ಲೂಟಿಯಾಗುತ್ತಿದೆ,ರಾಜ್ಯದಲ್ಲಿ ಲಕ್ಷಾಂತರ ಜನರು ನಕಲಿ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದುಕೊಂಡು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗುತ್ತಿಲ್ಲ,ಆದ್ದರಿಂದ ಕೂಡಲೇ ರಾಜ್ಯದಲ್ಲಿ ಇರುವ ನಕಲಿ ಕಾರ್ಮಿಕರ ಕಾರ್ಡನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು.ಇನ್ನು ಕೋವಿಡ್-೧೯ ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ನೀಡಿದ ಐದು ಸಾವಿರ ರೂಪಾಯಿಗಳ ಸಹಾಯಧನ ಇನ್ನೂ ಸಾವಿರಾರು ಕಾರ್ಮಿಕರಿಗೆ ಬಂದಿಲ್ಲ ಸಹಾಯಧನದ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಬೀಳಲಿದೆ: ಶಂಕರಗೌಡ ಸೋಮನಾಳ
ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸರ್ಕಾರಿ ಜಮೀನು ನೀಡಬೇಕು ಮತ್ತು ಖಾಲಿ ನಿವೇಶನ ನೀಡಲು ಆಗ್ರಹಿಸಿದರು.ಅರವತ್ತು ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ೫ಸಾವಿರ ನಿವೃತ್ತಿ ವೇತನ ನೀಡಬೇಕು ಹಾಗು ಸೇವಾ ಸಿಂಧು ಕೇಂದ್ರಗಳಿಂದ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಅರ್ಜಿ ಸಲ್ಲಿಸುವುದನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ವೇತಾ ಎಸ್. ಅವರು ಮಾತನಾಡಿ,ಕಾರ್ಮಿಕರ ಇಲಾಖೆ ನಿಮ್ಮೊಂದಿಗೆ ನಿಮ್ಮ ಎಲ್ಲ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ನಂತರ ಮುಖಂಡರಾದ ದಾವೂದ್ ಇಬ್ರಾಹಿಂ ಪಠಾಣ್ ಎಮ್.ಪಟೇಲ್ ಮತ್ತು ರೈತ ಹೋರಾಟಗಾರ ಹಣಮಂತ್ರಾಯ ಮಡಿವಾಳ ಮಾತನಾಡಿದರು.ನಂತರ ಕಾರ್ಮಿಕ ಸಚಿವರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.
ಶರಣ ಸೇವಾ ಸಂಸ್ಥೆ ಮುಖಂಡರ ಪಾದಯಾತ್ರೆ
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರಾದ ಗಂಗಾಧರ ಸಂಘದ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ಗುಡಾಳಕೇರಿ ಜಿಲ್ಲಾ ಉಪಾಧ್ಯಕ್ಷ ಮಲ್ಲಯ್ಯ ವಗ್ಗಾ ತಿಮ್ಮಯ್ಯ ತಳವಾರ ಮರೆಪ್ಪ ದೇಸಾಯಿ ವೂದ್ ಇಬ್ರಾಹಿಂ ಪಠಾಣ್ ರೈತ ಹೋರಾಟಗಾರ ಹಣಮಂತ್ರಾಯ ಚಂದಲಾಪುರ ಮಹ್ಮದ ಮೌಲಾ ಸೌದಾಗರ್ ಆನಂದ ಕಟ್ಟಿಮನಿ ಅಬ್ದುಲ್ ರೌಫ್ ಸೇರಿದಂತೆ ಅನೇಕರಿದ್ದರು.