ಸುರಪುರ: ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಮರಳು ಸಾಗಾಣಿಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ಸದಸ್ಯರು ಹಾಗು ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ ತಿಳಿಸಿದರು.
ನಗರದ ತಹಸೀಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಟಾಸ್ಕ್ ಫೋರ್ಸ್ ಸಭೆಯ ನೇತೃತ್ವವಹಿಸಿ ಮಾತನಾಡಿ,ಈಗಾಗಲೇ ಜಿಲ್ಲಾಧಿಕಾರಿಗಳು ಇಡೀ ಜಿಲ್ಲೆಯಾದ್ಯಂತ ಅಕ್ರಮ ಮರಳು ಸಾಗಾಣಿಕೆ ತಡೆಯಲು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ.
ಶರಣ ಸೇವಾ ಸಂಸ್ಥೆ ಮುಖಂಡರ ಪಾದಯಾತ್ರೆ
ಅದರಂತೆ ಸುರಪುರ ತಾಲೂಕಿನಲ್ಲಿಯೂ ಯಾವುದೇ ಕಾರಣಕ್ಕೂ ಅಕ್ರಮ ಮರಳು ಸಾಗಾಣಿಕೆ ನಡೆಯದಂತೆ ಟಾಸ್ಕ್ ಫೋರ್ಸ್ ಸಮಿತಿಗೆ ಸೂಚನೆ ನೀಡಿದ್ದು,ಸಮಿತಿಗೆ ವಾಹನದ ವ್ಯವಸ್ಥೆಯು ಮಾಡಲಾಗಿದೆ.ಹಗಲಿರಳು ಟಾಸ್ಕ್ ಫೋರ್ಸ್ ತಂಡ ಗಸ್ತಯ ನಡೆಸಲಿದೆ,ಯಾರೇ ಅಕ್ರಮ ಮರಳು ಸಾಗಾಣಿಕೆಗೆ ಮುಂದಾದಲ್ಲಿ ಕಠಿಣ ಕ್ರಮ ಹೆದರಿಸಬೇಕಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಪಿಐ ಎಸ್.ಎಮ್.ಪಾಟೀಲ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಲಿಂಗರಾಜು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ವಿಶ್ವನಾಥ ಯಾದಗಿರಿ ಲೋಕೊಪಯೋಗಿ ಇಲಾಖೆಯ ಎಸ್.ಜಿ.ಪಾಟೀಲ,ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ ಸೇರಿದಂತೆ ಅನೇಕರಿದ್ದರು.