ಉದ್ಭವ್ ಠಾಕ್ರೆ ಉದ್ಧಟತನ ಬಿಟ್ಟು ರಾಷ್ಟ್ರಪ್ರೇಮ ಬೆಳೆಸಲಿ: ಪ್ಯಾಟಿ ಆಗ್ರಹ

1
37

ಕಲಬುರಗಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬೆಳಗಾವಿ ಗಡಿತಂಟೆ ಜನರಲ್ಲಿ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆಲ್ಲ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಅವರೇ ಕಾರಣರು ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಮರಾವ್ ಪ್ಯಾಟಿ ಅವರು ಆರೋಪಿಸಿದ್ದಾರೆ.

ಹಿಂದೆ ಉದ್ಭವ್ ಠಾಕ್ರೆ ಅವರು ತಮ್ಮ ಮುಖವಾಣಿ “ಸಾಮ್ನಾ” ಪತ್ರಿಕೆಯಲ್ಲಿ ನಾವು ಭಾರತೀಯರು. ಹಿಂದೂ ರಾಷ್ಟ್ರ ಭಕ್ತರು ಎಂದೆಲ್ಲ ಗುಣಗಾನ ಮಾಡಿದವರು. ಇಂದು ಕೀಳು ಮಟ್ಟದ ರಾಜಕಾರಣಕ್ಕೆ ಒಳಗಾಗಿ ಭಾರತೀಯ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ತಮಗೆ ಅನುಕೂಲ ಸಿಂಧುವಾಗುವಂತೆ ವರ್ತಿಸುವುದನ್ನು ಬಿಟ್ಟು ರಾಷ್ಟ್ರ ಪ್ರೇಮದ ಕುರಿತು ಕಾಳಜಿ ಇರಲಿ ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದರೆ.

Contact Your\'s Advertisement; 9902492681

ವಾಡಿಯಲ್ಲಿ ಸಾರ್ವಜನಿಕರಿಗೆ ಖುರಾನ್ ಉಚಿತ ವಿತರಣೆ

ಉದ್ಭವ್ ಠಾಕ್ರೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆದಾಗಿನಿಂದ ಗಡಿ ತಂಟೆಯಲ್ಲಿ ತಕರಾರು ತೆಗೆಯುವುದು ಎಷ್ಟು ಸಮಂಜಸ. ಗಡಿ ವಿವಾದವು ಈಗ ಮುಗಿದ ಅಧ್ಯಾಯವಾಗಿದೆ. ೧೯೬೦ರಲ್ಲಿ ಮಹಾಜನ್ ವರದಿ ಪ್ರಕಾರ ಗಡಿವಿವಾದವು ೧೯೬೪ರಲ್ಲಿ ಮುಗಿದು ಹೋಗಿದೆ. ಸುಮ್ಮನೇ ತಮ್ಮ ಸ್ವಂತ ಸೇನೆಯಾದ ಶಿವಸೇನೆಯನ್ನು ಮುಂದೆ ಮಾಡಿ ಪುಂಡಾಟಿಕೆ ವರ್ತನೆಯಿಂದ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ಮಹಾಮಾರಿ ಕೊರೋನಾದಿಂದ ಇಡೀ ಮಹಾರಾಷ್ಟ್ರ ತತ್ತರಿಸಿ ಹೋಗುತ್ತಿದೆ. ಈ ಸಂಕಷ್ಟ ಸಂದರ್ಭದಲ್ಲಿ ಸ್ಪಂದಿಸುವುದನ್ನು ಬಿಟ್ಟು ಸುಮ್ಮ ಸುಮ್ಮನೇ ಗಡಿತಂಟೆ ತೆಗೆಯುವುದು ಎಷ್ಟು ಸರಿ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಜಲ ಶುದ್ಧೀಕರಣ ಘಟಕಕ್ಕೆ ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ ಭೇಟಿ

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಜಿ ಅವರು ಗಡಿವಿವಾದ ಮಾಡದೇ ರಾಜ್ಯದತ್ತ ಗಮನಹರಿಸಿ ಕೊರೋನಾ ನಿಯಂತ್ರಿಸುವಲ್ಲಿ ಸಫಲರಾಗುತ್ತಿದ್ದಾರೆ ಎಂಬುದನ್ನು ಅರಿತಾದರೂ ನೆರೆಯ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಅವರು ಇಲ್ಲದ ವಿವಾದವನ್ನು ಹುಟ್ಟುಹಾಕದೇ ಕೊರೋನಾದಿಂದ ತತ್ತರಿಸಿರುವ ಮಹಾರಾಷ್ಟ್ರದ ಜನರ ಜೀವವನ್ನು ಉಳಿಸಲು ಮುಂದಾಗಬೇಕು ಎಂದು ಅವರು ಕಳಕಳಿಯ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here