ಹೆಸರಿಗೆ ಸೀಮಿತವಾದ ಕಲ್ಯಾಣ ಕರ್ನಾಟಕ: ಅಟ್ಟೂರ

0
150

ಕಲಬುರಗಿ: ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದಿಂದ ಹೈದ್ರಾಬಾದ್-ಕರ್ನಾಟಕ ಎಂಬ ಹೆಸರು ತೆಗೆದು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಸಂತೋಷದ ವಿಷಯ. ಆದರೆ ಇದು ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿದೆಯೆಂದು ಅಖಿಲ ಭಾರತ ಯುವಜನ ಒಕ್ಕೂಟ ಜಿಲ್ಲಾಧ್ಯಕ್ಷ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಹಲವಾರು ಯೋಜನೆಗಳಾದ ರೈಲ್ವೆ ವಿಭಾಗೀಯ ಕಚೇರಿ, ಏಮ್ಸ್, ಐಐಟಿ, ಸಿಯುಕೆ ಎಕ್ಸಲೆನ್ಸ್ ಸೆಂಟರ್, ಜವಳಿ ಪಾರ್ಕ್, ನಿಮ್ಜ್ ಹೀಗೆ ಹಲವಾರು ಯೋಜನೆಗಳು ನಮ್ಮ ಭಾಗದಿಂದ ಕಸಿದುಕೊಂಡಿರುವುದು ಖಂಡನೀಯ. ಈ ಯೋಜನೆಗಳಿಂದ ಸಾವಿರಾರು ಜನರಿಗೆ ಉದ್ಯೋಗ ದೊರೆಯುತ್ತಿರುವುದಲ್ಲದೆ ಈ ಭಾಗ ಅತೀ ತೀವ್ರವಾಗಿ ಅಭಿವೃದ್ಧಿಯಾಗುತ್ತಿತ್ತು.

Contact Your\'s Advertisement; 9902492681

ಕಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಬೆಳೆದ ಉದಯೋನ್ಮುಖ ಕಲಾವಿದೆ ಲಕ್ಷ್ಮೀ ಪೋದ್ದಾರ್: ಪ್ಯಾಟಿ

ಆದರೆ ಈ ಎಲ್ಲಾ ಯೋಜನೆಗಳನ್ನು ಕೈ ಬಿಟ್ಟು ಮಲತಾಯಿ ಧೋರಣೆ ಮುಂದವರಿಸುತ್ತಿರುವುದು ಯಾವ ನ್ಯಾಯ? ಈ ಭಾಗದ ಜನ ಪ್ರತಿನಿಧಿಗಳು ಮಾತಾನಾಡಬಾರದೇ? ಅಲ್ಲದೆ ಈ ಭಾಗದ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ೩೭೧ (ಜೆ) ಸಹಿತ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ರಾಜ್ಯ ಸರಕಾರವು ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿಯಾಗುವುದಿಲ್ಲ. ಬಂದ ಯೋಜನೆಗಳನ್ನು ಮರಳಿ ಪಡೆಯುವದರೊಂದಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಈ ಭಾಗವನ್ನು ಅಭಿವೃದ್ಧಿಗೊಳಿಸಿದಾಗ ಮಾತ್ರ ಕಲ್ಯಾಣ ಕರ್ನಾಟಕವಾಗುತ್ತದೆ ಇಲ್ಲದಿದ್ದರೆ ಕೇವಲ ನಾಮ್ ಕೆ ವಾಸ್ತೆ ಹೆಸರಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರಕಾರವು ಕೈಬಿಟ್ಟ ಯೋಜನೆಗಳನ್ನು ಮರಳಿ ಕೊಡದಿದ್ದರೆ ಈ ಭಾಗದ ವಿದ್ಯಾರ್ಥಿ, ಯುವಕರು, ರೈತರು, ಕಾರ್ಮಿಕರು, ನ್ಯಾಯವಾದಿಗಳು, ಹೋರಾಟಗಾರರು ಸೇರಿ ಹೋರಾಟ ಮಾಡುವುದರೊಂದಿಗೆ ಚಳುವಳಿ ರೂಪಿಸಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here