ಕಲಬುರಗಿ: ಜಿಲ್ಲೆಯ ಆಳಂದ್ ತಾಲ್ಲೂಕಿನ ಮಾಡಿಯಾಳ್ ಗ್ರಾಮದ ಜೆ.ಪಿ. ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿನಿ ಕು. ಲಕ್ಷ್ಮೀ ಆರ್. ಪೋತ್ದಾರ್ ಅವರು ಇತ್ತೀಚೆಗೆ ಎಂ.ಎಫ್. ಹುಸೇನ್ ಶತಮಾನೋತ್ಸವ ರಾಷ್ಟ್ರೀಯ ಪುರಸ್ಕಾರ ಹಾಗೂ ಇಂಡಿಯನ್ ರಾಯಲ್ ಅಕ್ಯಾಡೆಮಿ ಅವಾರ್ಡ್ ಪಡೆಯುವ ಮೂಲಕ ಜಿಲ್ಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕುಂಚದಲ್ಲಿ ದೃಶ್ಯಕಾವ್ಯ ಕಲೆಯಲ್ಲಿ ಸಾಧನೆ ಮಾಡಿದ ಜಿಲ್ಲೆಯ ಮೊದಲ ಯುವ ಕಲಾವಿದೆಯಾಗಿ ಹೊರಹೊಮ್ಮಿದ್ದಾಳೆ ಎಂದು ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಮರಾವ್ ಪ್ಯಾಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪುರಸ್ಕೃತ ಕಲಾವಿದೆ ಕು. ಲಕ್ಷ್ಮೀ ಪೋದ್ದಾರ್ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಇತ್ತೀಚೆಗೆ ಜರುಗಿದ ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಪುರಸ್ಕರಿಸಿದ್ದು, ಇಡೀ ಜಿಲ್ಲೆಗೆ ಅಷ್ಟೇ ಅಲ್ಲ, ಇಡೀ ನಾಡಿಗೆ ಕೀರ್ತಿ ತಂದ ಶ್ರೇಯಸ್ಸು ಆಗಿದೆ ಎಂದು ಬಣ್ಣಿಸಿದರು.
ಸನ್ಮಯ ರುದ್ರವಾಡಿ ಅಮೋಘ ಶತಕ, ಕಲಬುರಗಿಗೆ ಭರ್ಜರಿ ಗೆಲುವು
ಇಂತಹ ಅದ್ಭುತ ಕಲಾವಿದೆ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿನಿಯಾಗಿದ್ದು ನಮಗೆಲ್ಲ ಸಂತೋಷ ತಂದಿದೆ. ನಮ್ಮ ಶಾಲೆಯ ಹೆಸರನ್ನು ಇಡೀ ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಮೂಲಕ ಶಾಲೆಗೆ ತನ್ನದೇ ಆದ ಕೊಡುಗೆಯನ್ನು ಲಕ್ಷ್ಮೀ ಪೋದ್ದಾರ್ ಅವರು ನೀಡಿದ್ದಾರೆ. ಅದೇ ರೀತಿ ನಮ್ಮ ಶಾಲೆಯ ಇನ್ನೋರ್ವ ಹಳೆಯ ವಿದ್ಯಾರ್ಥಿನಿ ಕು. ಜಯಶ್ರೀ ಯಳಸಂಗಿ ಅವರೂ ಸಹ ಇತ್ತೀಚೆಗೆ ಜರುಗಿದ ಗುಲಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಕನ್ನಡ ನಿಕಾಯದಲ್ಲಿ ಸುಮಾರು ೧೧ ಚಿನ್ನದ ಪದಕಗಳನ್ನು ಪಡೆದು ಅದ್ವಿತೀಯ ಸಾಧನೆಯನ್ನು ಮಾಡಿದ್ದಾಳೆ. ಈ ಇಬ್ಬರು ವಿದ್ಯಾರ್ಥಿನಿಯರು ಸಾಧನೆ ಎಲ್ಲರಿಗೂ ಸ್ಪೂರ್ತಿ ಹಾಗೂ ಪ್ರೇರಣೆದಾಯಕವಾಗಿದೆ ಎಂದು ಅವರು ಹೇಳಿದರು.
ಶಾಲೆಯಲ್ಲಿ ಕಲಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವೈದ್ಯರು, ಇಂಜಿನಿಯರರು ಸೇರಿದಂತೆ ಉನ್ನತ ಹುದ್ದೆಗಳಲ್ಲಿದ್ದಾರೆ. ಅನೇಕರು ಹೊರದೇಶಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಶಾಲೆಯು ಚಿಕ್ಕದಾದರೂ ಸಹ ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರಿಂದ ಮಹಾನ್ ಪ್ರತಿಭೆಗಳೊಂದಿಗೆ ಉದ್ಯೋಗದಾತರೂ ಆಗುತ್ತಿದ್ದಾರೆ. ಅದಕ್ಕಾಗಿ ಶಾಲೆಯ ಶಿಕ್ಷಕ ಹಾಗೂ ಸಿಬ್ಬಂದಿಗಳ ಕಾರ್ಯವೂ ಸಹ ಶ್ಲಾಘನೀಯ ಎಂದು ಅವರು ತಿಳಿಸಿದರು.
ಮದ್ಯ ಸೇವನೆಗೆ ಹಣ ಕೊಡಲಿಲ್ಲ ಎಂದು ಹೆತ್ತ ತಾಯಿ ಮೇಲೆ ಕಲ್ಲು ಹಾಕಿ ಹತ್ಯೆ
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ್ ಸ್ವಾಮೀಜಿ ಅವರು ಶಾಲೆಗೆ ಭೇಟಿ ನೀಡಿದಾಗ ಶಾಲೆಯ ಸ್ಥಳವು ಅದ್ಭುತ ಹಾಗೂ ಪವಿತ್ರವಾಗಿರುವುದರಿಂದ ಇಲ್ಲಿ ವ್ಯಾಸಂಗ ಮಾಡುವವರೆಲ್ಲರೂ ಉನ್ನತ ಹುದ್ದೆಗೆ ಹೋಗುತ್ತಾರೆ. ಅಷ್ಟೇ ಅಲ್ಲದೇ ಒಳ್ಳೆಯ ಮನುಷ್ಯರಾಗುತ್ತಾರೆ ಎಂದು ತಮ್ಮ ಪ್ರವಚನದಲ್ಲಿ ಉಲ್ಲೇಖಿಸಿದ್ದನ್ನು ಸ್ಮರಿಸಿದ ಪ್ಯಾಟಿ ಅವರು, ಲಕ್ಷ್ಮೀ ಪೋದ್ದಾರ್ ಅವರು ಕರ್ನಟಕ ಲಲಿತಕಲಾ ಅಕ್ಯಾಡೆಮಿಯ ಶಿಷ್ಯವೇತನ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರ, ಕಾರ್ಯಾಗಾರ ಸೇರಿದಂತೆ ಅನೇಕ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮ ಕಲಾಪ್ರತಿಭೆ ಮೆರೆದಿದ್ದಾರೆ. ಇನ್ನೂ ವಿಶ್ವ ಮಟ್ಟದಲ್ಲಿ ಪ್ರತಿಭೆ ಹೊರಹೊಮ್ಮಲಿ ಎಂದು ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಎಸ್.ವಿ. ಸೊಲ್ಲಾಪುರ, ಪಾಲಕರಾದ ರಘುನಾಥ್ ಪೋದ್ದಾರ್, ಶ್ರೀಮತಿ ಶಕುಂತಲಾ ಪೋದ್ದಾರ್ ಮುಂತಾದವರು ಉಪಸ್ಥಿತರಿದ್ದರು.