ಆಳಂದ: ಭಾರತೀಯ ಜನತಾ ಪಕ್ಷಕ್ಕೆ ಸಿದ್ಧಾಂತ, ವಿಚಾರಧಾರೆ ಮತ್ತು ಕಾರ್ಯಕರ್ತರ ಶ್ರಮವೇ ಜೀವಾಳವಾಗಿದೆ ಹೀಗಾಗಿಯೇ ಅದು ಜಗತ್ತಿನಲ್ಲಿ ಅತೀ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದಲ್ಲಿ ರವಿವಾರ ಜರುಗಿದ ಆಳಂದ ಮಂಡಲ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಉದ್ದಗಲಕ್ಕೂ ಭಾರತೀಯ ಜನತಾ ಪಕ್ಷ ತನ್ನ ಕಾರ್ಯಕರ್ತರ ಪಡೆ ಹೊಂದಿದೆ ಅದು ತನ್ನ ವಿಚಾರಧಾರೆಗಳನ್ನು ಕಾರ್ಯಕರ್ತರ ಮೂಲಕ ಮನೆ ಮನೆಗೆ ತಲುಪಿಸುತ್ತದೆ ಅದರಿಂದಾಗಿಯೇ ಇಂದು ಭಾರತೀಯ ಜನತಾ ಪಕ್ಷ ತಳಮಟ್ಟದಲ್ಲಿ ಸದೃಢವಾಗಿದೆ ಎಂದು ಹೇಳಿದರು.
ಬರಹಗಾರರು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಬೇಕು: ಮಾಜಿ ಶಾಸಕ ಬಿ.ಆರ್. ಪಾಟೀಲ
ದೇಶದ ವಿಷಯ ಬಂದಾಗ ಮೊದಲ ಪ್ರತಿಕ್ರಿಯೆ ನೀಡುವುದೇ ಬಿಜೆಪಿ ಮತ್ತು ಅದರ ಕಾರ್ಯಕರ್ತರು. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಾರೆ ಹೀಗಾಗಿಯೇ ಅವರಿಗೆ ಸಮಾಜದಲ್ಲಿ ಮನ್ನಣೆ ಇದೆ. ಅಭಿವೃದ್ಧಿಯ ವಿಷಯದಲ್ಲಿ ಬಿಜೆಪಿ ಯಾವತ್ತಿಗೂ ರಾಜಿ ಮಾಡಿಕೊಂಡಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಹ ಯೋಜನೆಗಳನ್ನು ಜಾರಿಗೊಳಿಸಿದ್ದು ಬಿಜೆಪಿಯ ಸಾಧನೆಯಾಗಿದೆ ಎಂದು ನುಡಿದರು.
ಮುಂದೆ ಬರಲಿರುವ ಜಿ.ಪಂ ತಾ.ಪಂ ಚುನಾವಣೆಯಲ್ಲಿ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬ ಕಾರ್ಯಕರ್ತನಿಗೂ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಪಕ್ಷ ಗುರುತಿಸಿ ನೀಡುತ್ತದೆ ಎಂದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ವಿನಯ ವಲ್ಯಾಪುರೆ, ಉಪಾಧ್ಯಕ್ಷ ಡಾ. ರಾಘವೇಂದ್ರ ಚಿಂಚನಸೂರ, ಸಚೀನ್ ರಾಠೋಡ, ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಮಾತನಾಡಿದರು. ಆಳಂದ ಮಂಡಲ ಯುವ ಮೋರ್ಚಾ ಅಧ್ಯಕ್ಷ ಕುಮಾರ ಬಂಡೆ ಅಧ್ಯಕ್ಷತೆ ವಹಿಸಿದ್ದರು.
ಬರಹಗಾರರು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಬೇಕು: ಮಾಜಿ ಶಾಸಕ ಬಿ.ಆರ್. ಪಾಟೀಲ
ಕಾರ್ಯಕಾರಿಣಿಯಲ್ಲಿ ಮಲ್ಲಿಕಾರ್ಜುನ ಕಂದಗೂಳೆ, ಎನ್‌ಈಕೆಆರ್‌ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ, ಪ್ರಕಾಶ ಮಾನೆ, ಶರಣು ಕುಮಸಿ, ನಾಗರಾಜ ದೇನಕ ದಯಾನಂದ ಚೌಲ, ಚನ್ನು ಪಾಟೀಲ, ಲಿಂಗರಾಜ ಉಡಗಿ, ಕಾಶಿನಾಥ ಪಾಟೀಲ, ಗುರು ಲಾವಣಿ, ಕುಮಾರೇಶ ಸ್ವಾಮಿ, ಮಲ್ಲಿನಾಥ ಸಿಗರಕಂಟಿ, ಪ್ರಕಾಶ ತೋಳೆ, ಧರೆಪ್ಪ ಜಕಾಪೂರೆ, ಪ್ರಶಾಂತ ಆಲೂರೆ, ಶಾಂತಪ್ಪ ಪಾಟೀಲ, ಕುಮಾರ ಕಂಟಲೆ ಸೇರಿದಂತೆ ಇತರರು ಭಾಗವಹಿಸಿದ್ದರು.