ಕಲಬುರಗಿ: ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಕೈ ಬಿಟ್ಟಿದ್ದನ್ನು ವಿರೋಧಿಸಿ, ರೈಲ್ವೆ ವಿಭಾಗಿಯ ಕಚೇರಿ ಪುನರಾರಂಭಕ್ಕೆ ಒತ್ತಾಯಿಸಿ, ಎಮ್ಸಸ್ ಆಸ್ಪತ್ರೆ ಧಾರವಾಡ ಕ್ಕೆ ಸ್ಥಳಾಂತರ ಕೈ ಬಿಡಲು ಒತ್ತಾಯಿಸಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ನಾಳೆ ಬೆಳಿಗ್ಗೆ 1:30ಕ್ಕೆ ನಗರದಲ್ಲಿರುವ ಲೋಕಸಭಾ ಸದಸ್ಯರ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳಲಾಗಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಶರಣಬಸಪ್ಪ ಮಮಶೇಟ್ಟಿ ಅವರು ತಿಳಿಸಿದ್ದಾರೆ.
ಟೆಂಡರ್ ಪ್ರಕ್ರಿಯೆ ನಡೆಸಲು ಒತ್ತಾಯ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲಬುರಗಿ ಯಲ್ಲಿ ಎಮ್ಸ್ ಆಸ್ಪತ್ರೆ ಸ್ಥಾಪಿಸಲು ಒತ್ತಾಯಿಸಿ, ಜವಳಿ ಉದ್ಯಾನ ಕೈ ಬಿಟ್ಟು ಕಲ್ಯಾಣ ಕರ್ನಾಟಕ ಜನರಿಗೆ ದ್ರೋಹ ಬಗೆದ ಸರ್ಕಾರದ ನೀತಿ ವಿರುದ್ಧ -ಜವಳಿ ಉದ್ಯಾನ ಜಿಲ್ಲೆಯಲ್ಲಿ ಮೊದಲಿನಂತೆ ಮುಂದುವರೆಯಲು ಒತ್ತಾಯಿಸಲಾಗುವುದೆಂದು ತಿಳಿಸಿದ್ದಾರೆ.
ಟೆಂಡರ್ ಪ್ರಕ್ರಿಯೆ ನಡೆಸಲು ಒತ್ತಾಯ
ನಗರದಲ್ಲಿ ಕುಡಿಯುವ ನೀರು ಖಾಸಗೀಕರಣ, ಎಲ್ ಎಂಟಿಯವರಿಗೆ ಕೊಟ್ಟಿದ್ದನ್ನು ವಿರೋಧಿಸಿ ತೊಗರಿಯ ನಾಡಿನಲ್ಲಿತೊಗರಿಯ ಕಣಜ ಎಂದೆ ಹೆಸರಾದ ಕಲಬುರಗಿಯಲ್ಲಿ ತೊಗರಿ ಪಾರ್ಕ್ ಕೈ ಬಿಟ್ಟು ತೊಗರಿ ಬೆಳೆಗಾರರಿಗೆ ಅನ್ಯಾಯ ಮಾಡಿದಂತಾಗಿದ್ದು, ಭೂ ಸ್ವಾಧೀನದ ನೆಷವೋಡ್ಡಿ ತೊಗರಿ ಪಾರ್ಕ್ ನಿರ್ಮಾಣಕ್ಕೆ ಹಿಂದೇಟು ಹಾಕುತ್ವಿರುವದು ಸರ್ಕಾರ ತೊಗರಿ ಬೆಳೆಯುವ ರೈತರಿಗೆ ಬರೆ ಎಳೆದಂತಾಗಿದೆ ಕೂಡಲೆ ತೊಗರಿ ಪಾರ್ಕ್ ನಿರ್ಮಾಣ ಮಾಡಬೇಕೆಂದು ನಾಳೆ ಸಂಸದ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಆಗ್ರಹಿಸಿಲಾಗುವುದೆಂದು ಅವರು ತಿಳಿಸಿದ್ದಾರೆ.