ಮುಖ್ಯಮಂತ್ರಿ ರೈತ ಸಮುದಾಯ ಜೊತೆ ಚೆಲ್ಲಾಟವಾಡುತ್ತಿದ್ದಾರೆ: ಸಿದ್ದುಗೌಡ

0
96

ಚಿತ್ತಾಪೂರ: ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರು ರಾಜ್ಯದ ಮಠ ಮಂದಿರಗಳಿಗೆ ಬಜೆಟ್ ಮಂಡನೆ ಬಳಿಕವೂ ಅನುದಾನ ನೀಡಿದ್ದಾರೆ.

ಜೀರ್ಣೋದ್ಧಾರ ಮತ್ತು ಮೂಲ ಸವಲತ್ತುಗಳನ್ನು ಕಲ್ಪಿಸುವ ಹೆಸರಿನಲ್ಲಿ ಜಾತಿವಾರು ಮತ ಸೆಳೆಯಲು ಧಾರ್ಮಿಕ ಸಂಸ್ಥೆಗಳಿಗೆ ಕೋಟಿಗಟ್ಟಲೆ ಅನುದಾನ ನೀಡಿದ್ದಾರೆ. ಆದರೆ ಎಲ್ಲಾ ಜಾತಿಯ ಸಮುದಾಯವಿರುವ ರೈತ ಸಮುದಾಯದಲ್ಲಿ ರೈತರನ್ನು ಮರೆತು ರೈತರ ಬಾಳಿನೊಂದಿಗೆ ಮುಖ್ಯಮಂತ್ರಿಗಳು ಚಲ್ಲಾಟವಾಡುತ್ತಿದ್ದಾರೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸಿದ್ದುಗೌಡ. ಜಿ.ಅಫಜಲಪುರಕರ್ ಟೀಕಿಸಿದ್ದಾರೆ.

Contact Your\'s Advertisement; 9902492681

ಶಾಲಾ ವಿದ್ಯಾರ್ಥಿಗಳಿಂದ ಜಲ ಸಂರಕ್ಷಣೆ ಬಗ್ಗೆ ಜಾಗೃತಿ

ರಾಜ್ಯದಲ್ಲಿ ಅತಿವೃಷ್ಟಿಯಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆ ಹಾಳಾಗಿ ಹೋಯಿತು. ಹಾಳಾದ ಬೆಳೆಗೆ ಕನಿಷ್ಠ ಎಕರೆಗೆ 25000/-ರೂಪಾಯಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ ರೈತರಿಗೆ ಕೇವಲ ಎಕರೆಗೆ 2500/-ಮಾತ್ರ ಘೋಷಣೆ ಮಾಡಿದ್ದರು,ಆದರೆ ಕರೋನಾ ಹಾವಳಿಯಿಂದ ಸರಕಾರದಲ್ಲಿ ದುಡ್ಡು ಇಲ್ಲಾ ಎಂದು ಹಂತ ಹಂತವಾಗಿ ರೈತರ ಖಾತೆಗೆ ಜಮಾ ಮಾಡುವುದಾಗಿ ಹೇಳಿ ಇಲ್ಲಿವರೆಗೆ ರೈತರ ಖಾತೆಗೆ ದುಡ್ಡು ಜಮಾವಾಗಿಲ್ಲಾ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದರು.

ಸದ್ಯ ಬೆಳೆವಣಿಗೆ ನೋಡಿದರೆ ಮಾನ್ಯ ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಎಷ್ಟು ಕಾಲಜಿಯಿದೆ ಎಂದು ತಿಳಿಯುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ.ಈಗಲಾದರೂ ಎಚ್ಚೆತ್ತು ಮಾರ್ಚ್ ತಿಂಗಳು ಮುಗಿಯುವುದರೊಳಗಾಗಿ ರೈತರ ಖಾತೆಗೆ ದುಡ್ಡು ಜಮಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here