ಸುರಪುರ: ಕರ್ನಾಟಕ ದಲಿತ ಮತ್ತು ಮೈನಾರಿಟಿ ಕ್ರೀಯಾ ಸಮಿತಿಯ ಜಿಲ್ಲಾ ಅಧ್ಯಕ್ಷ ಹಣಮಂತ ಕಟ್ಟಿಮನಿ ಎನ್ನುವವರು ಇಲ್ಲಿಯ ತಾಲೂಕು ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಈ ಹೇಳಿಕೆಯ ಕುರಿತು ಸುದ್ದಿಗೋಷ್ಟಿ ನಡೆಸಿದ ತಾಲೂಕು ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಲಾಲಸಾಬ್ ಪೀರಾಪುರ,ದಲಿತ ಮತ್ತು ಮೈನಾರಿಟಿ ಕ್ರೀಯಾ ಸಮಿತಿಯ ಮುಖಂಡರು ಮಾಡಿರುವ ಆರೋಪ ನಿರಾಧಾರವಾಗಿದೆ,ಅವರಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ದಾಖಲೆಗಳಿದ್ದರೆ ಸಲ್ಲಿಸಲಿ ಎಂದು ಸ್ಪಷ್ಟಪಡಿಸಿದರು.
ದಲಿತ ಮತ್ತು ಮೈನಾರಿಟಿ ಕ್ರೀಯಾ ಸಮಿತಿ ಜಿಲ್ಲಾಧ್ಯಕ್ಷ ಹಣಮಂತ ಕಟ್ಟಿಮನಿಯವರ ಬಳಿಯಲ್ಲಿ ಯಾವುದಾದರೂ ಅಂಗನವಾಡಿ ಕೇಂದ್ರದಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ದಾಖಲೆಗಳಿದ್ದರೆ ಕೊಡಲಿ,ಅವರು ಹೇಳಿದ ಅಂಗನವಾಡಿ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು.
ಈ ಮುಖಂಡರು ಈ ಹಿಂದೆಯೆ ನಮ್ಮ ಮೇಲಾಧಿಕಾರಿಗಳಿಗೆ ಮನವಿ ಕೊಟ್ಟಿದ್ದರು ಅದರಂತೆ ಮೇಲಾಧಿಕಾರಿಗಳಿಗೆ ಎಲ್ಲಾ ವಿವರಣೆಯನ್ನೂ ನೀಡಲಾಗಿದೆ.ಆದರೆ ಯಾವುದೇ ಅಂಗನವಾಡಿ ಕೇಂದ್ರದ ಹೆಸರನ್ನು ಹೇಳದೆ ಕೇವಲ ಭ್ರಷ್ಟಾಚಾರ ಎಂದರೆ ಹೇಗೆ,ಅವರಿಗೆ ಭ್ರಷ್ಟಾಚಾರ ಕಂಡಿರುವ ಅಂಗನವಾಡಿ ಕೇಂದ್ರದ ಹೆಸರನ್ನು ತಿಳಿಸದೆ ಬರೀ ಆರೋಪ ಮಾಡುವುದರಿಂದ ತನಿಖೆ ನಡೆಸಲಾಗದು.ಅಲ್ಲದೆ ತಾಲೂಕಿನ 474 ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲಿಯೂ ಭ್ರಷ್ಟಾಚಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.